ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ....ಚಿತ್ತಾಪುರದಲ್ಲಿ RSS ಪಥ ಸಂಚಲನ: ವಿವಿಧ ಸಂಘಟನೆಗಳಿಗೆ ಪ್ರತ್ಯೇಕ ದಿನಾಂಕ ನಿಗದಿಪಡಿಸುವಂತೆ ಹೈಕೋರ್ಟ್ ಆದೇಶ

ಉಡುಪಿ:ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಶ್ರೀ ದೇವರ ಸನ್ನಿಧಿಯಲ್ಲಿ ನವರಾತ್ರಿಯ ದಶಮಿ ದಿನವಾದ ಗುರುವಾರದ೦ದು ಚಂಡಿಕಾ ಯಾಗ ನಡೆಯಿತು. ಅರ್ಚಕರಾದ ಕೃಷ್ಣಾನಂದ ಭಟ್ ಮಣಿಪಾಲ್ , ಶರತ್ ಭಟ್ ಮಲ್ಪೆ ಧಾರ್ಮಿಕ ಪೂಜಾ ವಿಧಿಗಳನ್ನು ನಡೆಸಿ ಕೊಟ್ಟರು. ದೇವಳದ ಅರ್ಚಕರಾದ ದೀಪಕ್ ಭಟ್ , ದಯಾಘನ್ ಭಟ್ , ವಿನಾಯಕ

ಉಡುಪಿ: ಮಲ್ಪೆ ಕೊಡವೂರಿನ ಸಾಲ್ಮರದಲ್ಲಿ ನಡೆದ ಎಕೆಎಂಎಸ್ ಬಸ್ ಮಾಲೀಕ ರೌಡಿಶೀಟರ್ ಸೈಫುದ್ದೀನ್ ಕೊಲೆ ಪ್ರಕರಣದ ಮೂವರು ಆರೋಪಿಗಳನ್ನು ಉಡುಪಿ ನ್ಯಾಯಾಲಯಕ್ಕೆ‌ ಇಂದು ಹಾಜರುಪಡಿಸಲಾಯಿತು. ಉಡುಪಿ ಮಿಷನ್ ಕಂಪೌಂಡ್ ನಿವಾಸಿ ಮಹಮದ್ ಫೈಸಲ್ ಖಾನ್ (27), ಕರಂಬಳ್ಳಿ ಕುಂಜಿಬೆಟ್ಟು ನಿವಾಸಿ ಮೊಹಮ್ಮದ್ ಶರೀಫ್ (37) ಮತ್ತು ಕಾಟಿಪಳ್ಳ ನಿವಾಸಿ ಅಬ್ದುಲ್

ಉಡುಪಿ: ಸೆ.29: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡವೂರು ಸಾಲ್ಮರದ ಮನೆಯಲ್ಲಿ ಶನಿವಾರ ನಡೆದ ಎಕೆಎಂಎಸ್ ಬಸ್ ಮಾಲಕ, ರೌಡಿ ಶೀಟರ್ ಸೈಫ್ ಯಾನೆ ಸೈಫುದ್ದೀನ್ ಅತ್ರಾಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಉಡುಪಿ ಮಿಷನ್ ಕಂಪೌಂಡ್ ಬಳಿಯ ನಿವಾಸಿ ಮಹಮದ್ ಫೈಸಲ್ ಖಾನ್(27),

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ,ಶ್ರೀಕೃಷ್ಣಮಠದ ರಾಜಾ೦ಗಣ,ಉಪ್ಪೂರು,ಹೇರೂರು,ಕಾಪು ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಸ್ಥಾನ,ಮು೦ಡ್ಕೂರುಗಳಲ್ಲಿ ನವರಾತ್ರೆಯ ಒ೦ಭತ್ತು ದಿನಗಳ ಕಾಲ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಚ೦ಡಿಕಾ ಹೋಮ,ಶ್ರೀದುರ್ಗಾ ನಮಸ್ಕಾರ,ದೀಪಾರಾಧನೆ ಕಾರ್ಯಕ್ರಮದೊ೦ದಿಗೆ ಶ್ರೀಶಾರದಾ ಪೂಜೆಯು ವಿಜೃ೦ಭಣೆಯಿ೦ದ ನರೆವೇರುತ್ತಿದೆ. ಸಾವಿರಾರುಮ೦ದಿ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪಾನರಾಗಿದ್ದಾರೆ. ಅಲ್ಲಲ್ಲಿ ವಿವಿಧ ಸ೦ಸ್ಕೃತಿ ಕಾರ್ಯಕ್ರಮದೊ೦ದಿಗೆ ಭಜನಾ ಕಾರ್ಯಕ್ರಮವು ನಡೆಯುತ್ತಿದೆ.

ಮಲ್ಪೆ: ಎ ಕೆ ಎಂ ಎಸ್ ಬಸ್ ಮಾಲಕ ಸೈಪು ಯಾನೇ ಸೈಫುದ್ದೀನ್ ಆತ್ರಾಡಿಯನ್ನು ಹತ್ಯೆಗೈದಿರುವ ಘಟನೆ ಇಂದು(ಶನಿವಾರ) ಬೆಳಿಗ್ಗೆ ಕೊಡವೂರು ಸಮೀಪದ ಸಾಲ್ಮರ ಎಂಬಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಸೈಫುದ್ದೀನ್ ಅವರು ತಮ್ಮ ಮನೆಯಲ್ಲಿ ಒಬ್ಬರೇ ಇರುವ ವೇಳೆ ಆಗಮಿಸಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವುದಾಗಿ ತಿಳಿದುಬಂದಿದೆ. ಎಕೆಎಂಎಸ್

ಉಡುಪಿ:ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ 33ನೇ ವಾರ್ಷಿಕ ಮಹಾಸಭೆಯು ತಾ .20-09-2025 ರಂದು ಅಧ್ಯಕ್ಷರಾದ ಹರೀಶ್ ಕುಂದರ್ ರವರ ಅಧ್ಯಕ್ಷತೆಯಲ್ಲಿ ಅಂಬಾಗಿಲಿನ ಅಮೃತ ಗಾರ್ಡನ್ ಸಭಾಂಗಣದಲ್ಲಿ ಜರುಗಿತು. ಸಂಘದ ಮಾಜಿ ಅಧ್ಯಕ್ಷರಾದ ಕೆ ಪ್ರಶಾಂತ್ ಬಾಳಿಗಾ ಮತ್ತು ಎಲ್ಲ ಪೂರ್ವ ಅಧ್ಯಕ್ಷರು ಸೇರಿ ಎಂ ವಿಶ್ವೇಶ್ವರಯ್ಯ ಅವರ ಭಾವ

ಉಡುಪಿಯ ತೆ೦ಕಪೇಟೆಯಲ್ಲಿನ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ ಹಾಗೂ ಕಲ್ಯಾಣಪುರದ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ನವರಾತ್ರಿಯ ಮೊದಲದಿನವಾದ ಸೋಮವಾರದ೦ದು ಕದಿರುಕಟ್ಟುವ ಕಾರ್ಯಕ್ರಮವು ವಿಜೃ೦ಭಣಿಯಿ೦ದ ಸ೦ಪನ್ನಗೊ೦ಡಿತು. ನೂರಾರು ಮ೦ದಿ ಸಮಾಜಬಾ೦ಧವರು ಸರದಿಯ ಸಾಲಿನಲ್ಲಿ ನಿ೦ತು ಕದಿರನ್ನು ಪಡೆದುಕೊ೦ಡು ತಮ್ಮ ತಮ್ಮ ಮನೆಯಲ್ಲಿ ಕದಿರುಕಟ್ಟುವ ಕಾರ್ಯಕ್ರಮವನ್ನು ನಡೆಸಿದರು.

ಉಡುಪಿ:ಭಾವಿ ಪರ್ಯಾಯ ಪೀಠವನ್ನೇರಲಿರುವ ಹಾಗೂ ತಮ್ಮ ಪ್ರಥಮ ಪರ್ಯಾಯವನ್ನು ನೆರವೇರಿಸಲಿರುವ ಉಡುಪಿಯ ಶಿರೂರು ಮಠಾಧೀಶರಾದ ಶ್ರೀವೇದವರ್ಧನ ತೀರ್ಥ ಶ್ರೀಪಾದರಿಗೆ ಭಾನುವಾರದ೦ದು ಉಡುಪಿಯ ಕಡಿಯಾಳಿ ಶ್ರೀಮಹಿಷಮರ್ಧಿನಿ ದೇವಸ್ಥಾನದಲ್ಲಿ ಉಡುಪಿಯ ಉದ್ಯಮಿಗಳಾದ ಬಿ.ವಿಜಯರಾಘವ ರಾವ್ ಮತ್ತು ಮಕ್ಕಳು ಹಾಗೂ ಮನೆಯವರ ನೇತೃತ್ವದಲ್ಲಿ ನಾಣ್ಯ ತುಲಾಭಾರವನ್ನು ನೆರವೇರಿಸಲಾಯಿತು.

ಉಡುಪಿ:ಉಡುಪಿಯ ಕನ್ನರ್ಪಾಡಿಯಲ್ಲಿ ವಾಸವಾಗಿದ್ದ ದಿವ೦ಗತ ಶ್ರೀನಿವಾಸ ನಾಯಕ್ ಐ (ಕಾರ್ ಸಿನ್ ಮಾಮ)ರವರ ದ್ವಿತೀಯ ಪುತ್ರರಾಗಿದ್ದ ಐ ಗಣೇಶ್ ನಾಯಕ್ (ಪಿನ್ನ)(63)ರವರು ಇ೦ದು ಸೆ.20ರ ಶನಿವಾರದ೦ದು ಹೃದಯಾಘಾತ ನಿಧನ ಹೊ೦ದಿದ್ದಾರೆ.ಇವರು ಅವಿವಾಹಿತರಾಗಿದ್ದರು. ಇವರು ಉಡುಪಿಯ ಶಾರದಾ ಹೋಟೆಲ್ ಮು೦ಭಾಗದಲ್ಲಿರುವ ಲಕ್ಷ್ಮೀಸಭಾ ಹಾಲ್ ನ ಮ್ಯಾನೇಜರ್ ಆಗಿ, ಕ್ಯಾಟರಿ೦ಗ್ ಉದ್ಯಮವನ್ನು ನಡೆಸುತ್ತಿದ್ದು ಜನಪ್ರಿಯರಾಗಿದ್ದರು.ಇವರ

ಉಡುಪಿ: ಉಡುಪಿ ಸಾರ್ವಜನಿಕ‌ ಶ್ರೀ ಶಾರದೋತ್ಸವ ಸಮಿತಿ ಹಾಗೂ ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠದ ಆಶ್ರಯದಲ್ಲಿ 10ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ " ಉಡುಪಿ ದಸರಾ" ಇದೇ ಸೆ.22ರಿಂದ ಅ.3ರವರೆಗೆ ಉಡುಪಿ ಕೃಷ್ಣಮಠದ ರಾಜಾಂಗಣದಲ್ಲಿ ನಡೆಯಲಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಶ್ರೀಪಾದರು ತಿಳಿಸಿದರು. ಈ