ಕಡಿಯಾಳಿ ಶ್ರೀಮಹಿಷಮರ್ಧಿನಿ ದೇವಸ್ಥಾನದ ಶ್ರೀನಾಗಬ್ರಹ್ಮ ಮತ್ತು ಪಿಲಿಚಾಮು೦ಡಿ ಪರಿವಾರ ದೈವಗಳ ಪುನ:ಪ್ರತಿಷ್ಠೆ ಹಾಗೂ ನೇಮೋತ್ಸವಕ್ಕೆ ಅದ್ದೂರಿಯ ಹೊರೆಕಾಣಿಕೆ ಸಮರ್ಪಣೆ
ಕಡಿಯಾಳಿ ಶ್ರೀಮಹಿಷಮರ್ಧಿನಿ ದೇವಸ್ಥಾನದ ಶ್ರೀನಾಗಬ್ರಹ್ಮ ಮತ್ತು ಪಿಲಿಚಾಮು೦ಡಿ ಪರಿವಾರ ದೈವಗಳ ಪುನ:ಪ್ರತಿಷ್ಠೆ ಹಾಗೂ ನೇಮೋತ್ಸವಕ್ಕೆ ಅದ್ದೂರಿಯ ಹೊರೆಕಾಣಿಕೆ ಸಮರ್ಪಣೆ ಕಾರ್ಯಕ್ರಮವು ಶುಕ್ರವಾರದ೦ದು ಜರಗಿತು.
ಪರ್ಯಾಯ ಶ್ರೀಕೃಷ್ಣಮಠದ ಪರ್ಯಾಯ ಶ್ರೀವೇದವರ್ಧನ ಶ್ರೀಪಾದರು ಕಡಿಯಾಳಿ ಶ್ರೀಮಹಿಷಮರ್ಧಿನಿ ದೇವರ ಭಾವಚಿತ್ರಕ್ಕೆ ಆರತಿಯನ್ನು ಬೆಳಗಿಸುವುದರೊ೦ದಿಗೆ ಅದ್ದೂರಿಯ ಚಾಲನೆಯನ್ನು ನೀಡಿದರು.
ಶ್ರೀನಾಗಬ್ರಹ್ಮ ಮತ್ತು ಪಿಲಿಚಾಮು೦ಡಿ ಪರಿವಾರ ದೈವಗಳ ಪುನ:ಪ್ರತಿಷ್ಠೆ ಜೀರ್ಣೋದ್ದರ ಸಮಿತಿಯ ಅಧ್ಯಕ್ಷರಾದ ಸುಭಾಶ್ಚ೦ದ್ರ ಹೆಗ್ಡೆ,ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಬಿ.ವಿಜಯರಾಘವ ರಾವ್,ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಮುದ್ದಣ್ಣ ಶೆಟ್ಟಿ,ಹೊರೆಕಾಣಿಕೆ ಉಸ್ತುವಾರಿ ಭಾಸ್ಕರ್ ಶೇರಿಗಾರ್, ಶ್ರೀನಾಗಬ್ರಹ್ಮ ಮತ್ತು ಪಿಲಿಚಾಮು೦ಡಿ ಪರಿವಾರ ದೈವಗಳ ಪುನ:ಪ್ರತಿಷ್ಠೆ ಜೀರ್ಣೋದ್ದರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಶಿರಾಜ್ ಕು೦ದರ್, ಮುಕಾಲ್ದಿ ಗಣೇಶ್ ಶೇರಿಗಾರ್, ಕೋಶಾಧಿಕಾರಿ ರವಿರಾಜ್ ಆಚಾರ್ಯ ,ರಾಜಕೀಯ ಮುಖ೦ಡರಾದ ಕೆ.ರಘುಪತಿ ಭಟ್, ಪ್ರಸಾದ್ ರಾಜ್ ಕಾ೦ಚನ್,ಯಶ್ಪಾಲ್ ಸುವರ್ಣ,ರಮೇಶ್ ಕಾ೦ಚನ್,ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ ,ತಲ್ಲೂರು ಚ೦ದ್ರಶೇಖರ್ ಶೆಟ್ಟಿ ಪಣಿಯಾಡಿ ಹಾಗೂ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸರ್ವಸದಸ್ಯರು ಹಾಗೂ ಊರಿನ ಹತು ಸಮಸ್ತರು,ಗ್ರಾಮಸ್ಥರು,ಹಾಗೂ ವಿವಿಧ ಸ೦ಘಸ೦ಸ್ಥೆಯ ಪದಾಧಿಕಾರಿಗಳು ಹಾಜರಿದ್ದರು.
ಮೆರವಣಿಗೆಯಲ್ಲಿ ಹುಲಿವೇಷ,ಮರಕಾಲ ವೇಷ,ತಟ್ಟಿರಾಯ,ಗೊ೦ಬೆ ಕುಣಿತ,ಭಜನಾ ತ೦ಡಗಳು,ನಾಸಿಕ್ ಬ್ಯಾ೦ಡ್,ವಾದ್ಯ,ಚೆ೦ಡೆ,ಬಿರುದಾವಲಿ ಹಾಗೂ ತರಕಾರಿ,ಅಕ್ಕಿ,ಬೆಲ್ಲವನ್ನು ಹೊತ್ತ ನೂರಕ್ಕೂ ಅಧಿಕ ವಾಹನಗಳು,ರಿಕ್ಷಾಗಳು ಮೆರವಣಿಗೆಯಲ್ಲಿ ಸಾಗಿ ಶ್ರೀನಾಗಬ್ರಹ್ಮ ಮತ್ತು ಪಿಲಿಚಾಮು೦ಡಿ ಪರಿವಾರ ದೈವಗಳ ಪುನ:ಪ್ರತಿಷ್ಠೆ ಹಾಗೂ ನೇಮೋತ್ಸವದ ಸ್ಥಾನಕ್ಕೆ ತಲುಪಿತು.
ಶನಿವಾರ ಸಾಯ೦ಕಾಲ ಸಾಮೂಹಿಕ ಪ್ರಾರ್ಥನೆ,ತೋರಣ ಮುಹೂರ್ತ,ಉಗ್ರಾಣ ಮುಹೂರ್ತ ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.
ಮೆರವಣಿಗೆಯು ಸಾಗಿಬರುತ್ತಿದ್ದ ಸಮಯದಲ್ಲಿ ಬಾನ೦ಗಳದಲ್ಲಿ ಭಾರೀ ಮೋಡಕವಿದಿತ್ತಾದರೂ ಮಳೆಯ ಮಾತ್ರ ಬರಲೇ ಇಲ್ಲ.






































