ಪಡನ್ನಾಕ್ಕಾಡ್ನಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ ಘಟನೆ ನಡೆದಿದೆ. ಮೃತರನ್ನು ಪಳಯ ಕಡಪ್ಪುರಂ ಮೂಲದ ಆಶಿಕ್ ಮತ್ತು ತನ್ವೀರ್ ಎಂದು ಗುರುತಿಸಲಾಗಿದೆ. ರಾತ್ರಿ 9.00 ರ ಸುಮಾರಿಗೆ ಈ ಘಟನೆ ನಡೆದಿದೆ. ಕಾಞಂಗಾಡ್ ನಿಂದ ಬರುತ್ತಿದ್ದ ಟ್ರಕ್ ಗೆ ಬೈಕ್ ಡಿಕ್ಕಿ ಹೊಡೆದಿದೆ. ಅಲ್ಲದೆ
ಬೆಳ್ತಂಗಡಿ; ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಇವರಿಗೆ ಧರ್ಮಸ್ಥಳ ಗ್ರಾಮದ ಸ.ನಂ.61/1ಎರಲ್ಲಿ ಸೆಕಾರದಿಂದ ಮಂಜೂರಾಗಿದ್ದ 7.59 ಎಕ್ರೆ ಜಮೀನು ಮಂಜೂರಾತಿ ಆದೇಶವನ್ನು ರದ್ದು ಪಡಿಸಿಪುತ್ತೂರು ಸಹಾಯಕ ಆಯುಕ್ತರ ನ್ಯಾಯಾಲಯವು ಆದೇಶ ನೀಡಿದೆ. ದಾಖಲೆಗಳ ಮತ್ತು ಕಾನೂನಿನ ಆಧಾರದಲ್ಲಿ ಜಮೀನು ಮಂಜೂರಾಗಿರುವುದನ್ನು ರದ್ದುಪಡಿಸಿ 2025 ಜ.21 ರಂದು ಆದೇಶ ನೀಡಿದ್ದು,
ಪುತ್ತೂರು: ಆಟೋರಿಕ್ಷಾ ಮತ್ತು ಬೈಕ್ ನಡುವೆ ಢಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಬಕ ಸಮೀಪದ ಮುರ ಎಂಬಲ್ಲಿ ಇಂದು ಬುಧವಾರ ಸಂಭವಿಸಿದೆ. ಮೃತ ದುರ್ದೈವಿಯನ್ನು ಪುತ್ತೂರು ತಾಲೂಕಿನ ಕೆಮ್ಮಿಂಜೆ ನಿವಾಸಿ ದಿ. ಪುರುಷೋತ್ತಮ ಎಂಬವರ ಪುತ್ರ ಚೇತನ್(44) ಎಂದು ತಿಳಿದು ಬಂದಿದೆ. ಘಟನಾ
ಸುರತ್ಕಲ್:ಫೆ.4. ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದ ಪರಮಭಕ್ತರೂ, ಪಟ್ಲ ಸತೀಶ್ ಶೆಟ್ಟಿಯವರ ಕಟ್ಟಾ ಅಭಿಮಾನಿ ಶಾರದಾಪ್ರಸಾದ್ ರವರು ಹಾಗೂ ಅವರ ಧರ್ಮಪತ್ನಿ ನಳಿನಿ ಪ್ರಸಾದ್ ರವರು ಪಟ್ಲ ಸತೀಶ್ ಶೆಟ್ಟಿಯವರ ಗೃಹಪ್ರವೇಶಕ್ಕೆ ಆಗಮಿಸಿ ಪಟ್ಲರು ಮಾಡುವ ಸತ್ಕಾರ್ಯಗಳನ್ನು ಮೆಚ್ಚಿ ಗೃಹಪ್ರವೇಶದ ದಿನದಂದು ಯಕ್ಷಧ್ರುವ ಪಟ್ಲ ಫೌಂಡೇಶನ್
ಮಂಗಳೂರು, ಜನವರಿ 30: ಮಣ್ಣಿನಡಿ ಹುದುಗಿ ಹೋಗಿದ್ದ 300 ವರ್ಷಗಳ ಹಳೆಯ ದೈವಸ್ಥಾನವೊಂದು ಪತ್ತೆಯಾಗಿದ್ದು, ತುಳುನಾಡಿನ ಕಾರ್ಣಿಕ ದೈವದ ಇರುವಿಕೆ ಕಂಡು ಗ್ರಾಮಸ್ಥರು ಬೆಚ್ಚಿಬೀಳುವಂತಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕಿನ ನೀರುಮಾರ್ಗದ ಪೆದಮಲೆ ಗ್ರಾಮದಲ್ಲೊಂದು ಅಚ್ಚರಿಯ ವಿದ್ಯಮಾನ ನಡೆದಿದ್ದು, ದೈವದ ಮುನಿಸಿನಿಂದ ತೊಂದರೆಗೀಡಾದ ಗ್ರಾಮಸ್ಥರಿಗೆ ಪ್ರಶ್ನಾಚಿಂತನೆಯಲ್ಲಿ ದೈವಸ್ಥಾನದ ಸುಳಿವು
ಜನವರಿ 17 ರಂದು ನಡೆದ ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್ ಘೋಷಿಸಿದ್ದಾರೆ. ಮುರುಗಂಡಿ ತೇವರ್ (36); ಯೊಸೊವಾ ರಾಜೇಂದ್ರನ್ (35); ಕಣ್ಣನ್ ಮಣಿ (36); ಮತ್ತು ಮುರುಗಂಡಿ ತೇವರ್ ಅವರ ತಂದೆ ಷಣ್ಮುಗಸುಂದರಂ ಬಂಧಿತ ಆರೋಪಿಗಳು. ಇನ್ನೂ ನಾಲ್ವರು
ಸುಳ್ಯ: ಜ.27, ಗಂಡಾನೆಯ ಮೃತದೇಹವೊಂದು ಪತ್ತೆಯಾಗಿರುವ ಘಟನೆ ದಕ್ಷಿಣ ಕನ್ನಡ ಮತ್ತು ಕೇರಳ ಗಡಿ ಭಾಗದ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಎರ್ಕಲ್ಪಾಡಿಯಲ್ಲಿ ಭಾನುವಾರ ನಡೆದಿದೆ. ಮಂಡೆಕೋಲು ರಿಸರ್ವ್ ಫಾರೆಸ್ಟ್ನಲ್ಲಿ ಸ್ಥಳೀಯರಿಗೆ ಸುಮಾರು 50-55 ವರ್ಷ ಪ್ರಾಯದ ಕಾಡಾನೆ ಮೃತದೇಹ ಕಂಡುಬಂದಿದ್ದು, ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕಾದಾಟದಲ್ಲಿ
ಉಪ್ಪಿನಂಗಡಿ;ಜ.25: ಚಾಲಕ ನಿಲ್ಲಿಸಿ ಹೋಗಿದ್ದ ಗ್ಯಾಸ್ ಟ್ಯಾಂಕರ್ ಏಕಾಏಕಿ ಮುಂದಕ್ಕೆ ಚಲಿಸಿ ಹೆದ್ದಾರಿ ಬದಿಗೆ ಮಗುಚಿ ಬಿದ್ದ ಘಟನೆ 34 ನೆಕ್ಕಿಲಾಡಿಯ ಬೊಳ್ಳಾರು ಎಂಬಲ್ಲಿನ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದೆ. ಈ ಸಂದರ್ಭ ಟ್ಯಾಂಕರ್ ನಿಂದ ಯಾವುದೇ ಗ್ಯಾಸ್ ಸೋರಿಕೆಯಾಗದ್ದರಿಂದ ಸಂಭವನೀಯ ಅನಾಹುತ ತಪ್ಪಿದಂತಾಗಿದೆ. ಗ್ಯಾಸ್ ತುಂಬಿದ್ದ
ಮಂಗಳೂರು:ಜ.24: ಹಿರಿಯ ಪತ್ರಕರ್ತ , ಹೊಸದಿಗಂತ ಪತ್ರಿಕೆಯ ವಿಶೇಷ ವರದಿಗಾರ ಗುರುವಪ್ಪ ಬಾಳೆಪುಣಿ (62) ಅಲ್ಪಕಾಲದ ಅಸೌಖ್ಯದಿಂದ ಇಂದು ಬಾಳೆಪುಣಿಯ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಮಂಗಳೂರು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಬಾಳೆಪುಣಿ ಅವರು
ಮಂಗಳೂರು:ಜ.23: ಮಸಾಜ್ ಸೆಂಟರ್ ಮೇಲೆ ದುಷ್ಕರ್ಮಿಗಳು ನುಗ್ಗಿ ದಾಂಧಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಬಂಟ್ವಾಳ ತಾಲೂಕು ಪರಂಗಿಪೇಟೆಯ ಹರ್ಷರಾಜ್ @ ಹರ್ಷಿತ್, ವಾಮಂಜೂರು ಮೂಡುಶೆಡ್ಡೆಯ ಮೋಹನ್ ದಾಸ್ @ ರವಿ, ಕಾಸರಗೋಡು ಉಪ್ಪಳದ ಪುರಂದರ, ವಾಮಂಜೂರು ಅಂಬೇಡ್ಕರ್ ನಗರದ ಸಚಿನ್, ವಾಮಂಜೂರು