....ನಾಡಿನ ಎಲ್ಲೆಡೆಯಲ್ಲಿ ಇ೦ದಿನಿ೦ದ (ಭಾನುವಾರದಿ೦ದ)ಎಲ್ಲಾ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ...16ರ೦ದು ಶ್ರೀಶಾರದಾ ಪೂಜೆ...

ಕಾರ್ಕಳ: ಎ.28: ಮೂರು ದಶಕಗಳಿಗೂ ಅಧಿಕ ಕಾಲ ಅಧ್ಯಾಪಕರಾಗಿ ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದ, ಸಮಾಜ ಸೇವಕ ನಲ್ಲೂರು ನಿವಾಸಿ ನಾರಾಯಣ ಮಾಸ್ಟರ್ (97) ಇಂದು ಉಪ್ಪೂರಿನಲ್ಲಿರುವ ತನ್ನ ಮಗಳ ಮನೆ ಯಲ್ಲಿ ಎಪ್ರಿಲ್ 21ರ೦ದುನಿಧನರಾದರು.

ಮೂಲತ: ಕಾರ್ಕಳ ತಾಲೂಕು ಬೈಲೂರು ಕುಂಚೆಬೆಟ್ಟುನವರಾದ ನಾರಾಯಣ ಮಾಸ್ಟರ್ ಅವರು ಆರಂಭದಲ್ಲಿ ನಾಯರ್‌ಬೆಟ್ಟು, ತೆಳ್ಳಾರು ಶಾಲೆಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ಬಳಿಕ ನಲ್ಲೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 30ವರ್ಷಗಳ ಕಾಲ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದರು.

ನಿವೃತ್ತಿಯ ಬಳಿಕ ಸಮಾಜ ಸೇವೆ, ಸಾರ್ವಜನಿಕ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ನಾರಾಯಣ ಮಾಸ್ಟರ್ ಅವರು ಉಡುಪಿ ವಾರ್ತಾ ಇಲಾಖೆಯ ನಿವೃತ್ತ ಸಿಬ್ಬಂದಿ ಪುತ್ರ ಪ್ರೇಮಾನಂದ ರಾವ್ ಅಲ್ಲದೇ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

No Comments

Leave A Comment