ಉಡುಪಿ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹೆಬ್ರಿ ಕಬ್ವಿನಾಲೆಯ ಪೀತಬೈಲುವಿನಲ್ಲಿ ಪೊಲೀಸರು ಮತ್ತು ನಕ್ಸಲರ ನಡುವೆ ಗುಂಡಿನ ಕಾಳಗ ನಡೆದಿದ್ದು, ಈ ವೇಳೆ ಮೋಸ್ಟ್ ವಾಂಟೆಡ್ ನಕ್ಸಲ್ ಮುಖಂಡ ವಿಕ್ರಂ ಗೌಡ ಬಲಿಯಾಗಿದ್ದಾನೆಂದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕಳೆದ ಕೆಲವು ದಿನಗಳಿಂದ ಹೆಬ್ರಿ-ಕಾರ್ಕಳ ಪ್ರದೇಶದಲ್ಲಿ ನಕ್ಸಲರ ಓಡಾಟ ಹೆಚ್ಚಾಗಿತ್ತು.
-:ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಶುಭಕೋರುವ:-
ಉಡುಪಿ:ಉಡುಪಿ ನ್ಯಾಯಾಲಯಗಳು ಮತ್ತು ವಕೀಲರ ಸ೦ಘದ 125ನೇ ವರ್ಷಾಚರಣೆಯ ಸ೦ಭ್ರಮಾಚರಣೆಯು ಭಾನುವಾರದ೦ದು ಅದ್ದೂರಿಯಾಗಿ ಪ್ರಾರ೦ಭಗೊ೦ಡಿದ್ದು ಈ ಸ೦ದರ್ಭದಲ್ಲಿ ಕೈದಿಗಳು ದಿಢೀರ್ ಪ್ರತ್ಯಕ್ಷವಾದ ಘಟನೆಯು ನಡೆದಿದೆ. ಅ೦ದಹಾಗೆ ಇಲ್ಲಿ ಪ್ರತ್ಯಕ್ಷವಾದದ್ದು ,ಕೈದಿಗಳಲ್ಲ ಬದಲಾಗಿ ಕೈದಿಗಳ ವೇಷದಲ್ಲಿ ವಕೀಲರು ಬ೦ದು ಜನಸಾಮಾನ್ಯರನ್ನು ಮನರ೦ಜಿಸಿ ಕೆಲವೊ೦ದು ಮಾರ್ಮಿಕವಾದ ವಿಷಯವನ್ನು ಸಭಿಕರ ಮು೦ದಿಟ್ಟು ಪ್ರಶ೦ಸೆಗೆ ಕಾರಣವಾಯಿತು.ಸಭೆಯಲ್ಲಿ
ಉಡುಪಿ:ನ.17ಹಿಟ್ ಆ್ಯಂಡ್ ರನ್ ನಡೆಸಿ ಆಟೋ ಚಾಲಕನ ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಬೆಳಪು ದೇವಿಪ್ರಸಾದ್ ಶೆಟ್ಟಿ ಅವರ ಪುತ್ರ ಪ್ರಜ್ವಲ್ ಶೆಟ್ಟಿಯನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬೆಳಪುವಿನ ಮಿಲಿಟರಿ ಕಾಲೊನಿಯಲ್ಲಿ ನವೆಂಬರ್ 11 ರಂದು ನಡೆದಿದ್ದ ಈ ಅಪಘಾತದಲ್ಲಿ ಆಟೋ
ಕಾಪು:ಕಾಪುವಿನ ಬೆಳಪು ಎ೦ಬಲ್ಲಿ ಕಾರೊ೦ದು ಬೈಕಿಗೆ ಡಿಕ್ಕಿಹೊಡೆದರ ಪರಿಣಾಮವಾಗಿ ಕಾರು ಚಲಾಯಿಸುತ್ತಿದ್ದ ಯುವಕನು ಬೈಕು ಸವಾರನ ಮನೆಗೆತೆರಳಿ 5,000/-ಯನ್ನು ನೀಡಿ ಸ೦ತ್ವಾನ ಹೇಳಿದ್ದು ಇದೀಗ ಬೈಕ್ ಸವಾರನು ಮಣಿಪಾಲದ ಸ್ಥಳೀಯ ಆಸ್ಪತ್ರೆಯೊ೦ದರಲ್ಲಿ ನಿಧನಹೊ೦ದಿರುವ ಘಟನೆಯೊ೦ದು ವರದಿಯಾಗಿದೆ. ಕಾರು ಚಲಾಯಿಸುತ್ತಿದ್ದ ಯುವಕನು ಕಾಪುವಿನ ಪ್ರತಿಷ್ಠಿತ ಕಾ೦ಗ್ರೆಸ್ ರಾಜಕೀಯ ಮುಖ೦ಡ ಹಾಗೂ ಸಹಕಾರಿ
ಕಾರ್ಕಳ: ಬೋಳ ಗ್ರಾಮದ ಎರಡು ಮನೆಗಳಲ್ಲಿ ಗೋವಾ ರಾಜ್ಯದ ಭಾರಿ ಪ್ರಮಾಣದಲ್ಲಿ ಅಕ್ರಮವಾಗಿ ದಾಸ್ತಾನಿರಿಸಿದ್ದ ಮದ್ಯದ ಬಾಕ್ಸ್ ಗಳನ್ನು ಅಬಕಾರಿ ಇಲಾಖೆ ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿರುವ ಘಟನೆ ನಡೆದಿದೆ. ಅಬಕಾರಿ ಉಪ ಆಯುಕ್ತೆ ಬಿಂದು ಅವರ ನೇತೃತ್ವದಲ್ಲಿ ಬೋಳದ ಅವಿನಾಶ್ ಮಲ್ಲಿ ಎಂಬುವವರ ಎರಡು ಮನೆಗೆ ದಾಳಿ ನಡೆಸಿದ್ದು,
ಉಡುಪಿ:ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನ ನಿತ್ಯ ಅಪಘಾತಗಳು ಸಂಭವಿಸುತ್ತಿದ್ದು ಇದರ ಅರಿವೇ ತಮಗೆ ಇಲ್ಲದಂತೆ ಇರುತ್ತಿರುವ ನಮ್ಮ ಉಡುಪಿ ಲೋಕಸಭಾ ಸದಸ್ಯರು ಉಡುಪಿ ಶಾಸಕರು ಆದರೆ ಪರ್ಕಳ ರಾಷ್ಟ್ರೀಯ ಹೆದ್ದಾರಿಯೂ ಜನಸಾಮಾನ್ಯರಿಗೆ ವಾಹನದಲ್ಲಿ ಚಲಿಸಲು ಆಗದಂತ ಪರಿಸ್ಥಿತಿಯನ್ನು ತಂದಿದೆ. ಶಾಲಾ ಪುಟ್ಟ ಮಕ್ಕಳನ್ನು ಕರೆದುಕೊಂಡು ಹೋಗುವ ರಿಕ್ಷವೇ ಅಲ್ಲಿ ಪಲ್ಟಿಯಾಗಿ
ಉಡುಪಿ:ಉಡುಪಿ ನ್ಯಾಯಾಲಯ ಮತ್ತು ವಕೀಲರ ಸಂಘದ ಶತಮಾನೋತ್ತರ ರಜತ ಮಹೋತ್ಸವ ಕಾರ್ಯಕ್ರಮ ನ.17 ಮತ್ತು 18ರಂದು ಉಡುಪಿ ನ್ಯಾಯಾಲಯದ ಆವರಣದಲ್ಲಿ ಸಂಭ್ರಮದಿಂದ ನಡೆಯಲಿದೆ ಎಂದು ಶತಮಾನೋತ್ತರ ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ನ.17ರ ಬೆಳಗ್ಗೆ 10 ಗಂಟೆಗೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ
ಉಡುಪಿಯ ಶ್ರೀ ಕೃಷ್ಣಮಠದಲ್ಲಿ ನಾಳೆಯಿ೦ದ ಮೂರು ದಿನಗಳ ಕಾಲ ನಡೆಯಲಿರುವ ವಾಡಿಕೆಯ೦ತೆ ಕಾರ್ತಿಕ ಮಾಸದಲ್ಲಿ ಜರಗಲಿರುವ ಲಕ್ಷದೀಪೋತ್ಸವಕ್ಕೆ ಈಗಾಗಲೇ ಎಲ್ಲಾ ಸಿದ್ದತೆಯನ್ನು ನಡೆಸಲಾಗಿದೆ.ಅದರ೦ತೆ ಶ್ರೀಕೃಷ್ಣಮಠದ ಮು೦ಭಾಗ ಸೇರಿದ೦ತೆ ರಥಬೀದಿಯನ್ನು ಮ೦ಗಳವಾರದ೦ದು ಮಠದ ಮಹಿಳಾ ಮತ್ತು ಪುರುಷ ನೌಕರರು ಕಸವನ್ನು ಗುಡಿಸಿ ಸ್ವಚ್ಚತೆಯನ್ನು ಮಾಡಿದರು.
ಉಡುಪಿ:ಪರ್ಯಾಯ ಶ್ರೀ ಪುತ್ತಿಗೆ ಮಠ ಕೃಷ್ಣ ಮಠ ಉಡುಪಿ ವಿಶ್ವಗೀತಾ ಪರ್ಯಾಯ 2024-2026ಉಡುಪಿಯ ಶ್ರೀ ಕೃಷ್ಣಮಠದಲ್ಲಿ ಸರ್ವೆಕಾದಶಿ ಪ್ರಯುಕ್ತ ಮುದ್ರಾಧಾರಣೆಯು ಮ೦ಗಳವಾರದ೦ದು ನಡೆಯಿತು. ಚಾತುರ್ಮಾಸ್ಯ ಸಮಾಪ್ತಿ ಅಂಗವಾಗಿ ಈ ಮುದ್ರಾಧಾರಣೆ ಸಂಪ್ರದಾಯಾನುಸಾರ ನಡೆಯುವುದು.