...ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 126ನೇ ಭಜನಾ ಸಪ್ತಾಹ ಮಹೋತ್ಸವಕ್ಕೆ ಮ೦ಗಳವಾರದ೦ದು ದೀಪ ಪ್ರಜ್ವಲಿಸುವುದರೊ೦ದಿಗೆ ಅದ್ದೂರಿಯ ಚಾಲನೆ...

ಪಣಿಯಾಡಿ ಶ್ರೀ ಅನಂತಾಸನ ಶ್ರೀ ಲಕ್ಷ್ಮೀಅನಂತಪದ್ಮನಾಭ ದೇವಸ್ಥಾನದ ಶ್ರೀಮನ್ಮಹಾರಥೋತ್ಸವ ಸ೦ಪನ್ನ…

ಉಡುಪಿ:ಫೆ.24:ಪಣಿಯಾಡಿ ಶ್ರೀ ಅನಂತಾಸನ ಶ್ರೀ ಲಕ್ಷ್ಮೀಅನಂತಪದ್ಮನಾಭ ದೇವಸ್ಥಾನದಲ್ಲಿ ಫೆ. 24ರ ಮ೦ಗಳವಾರದ೦ದು ಶ್ರೀಮನ್ಮಹಾರಥೋತ್ಸವವು ಪುತ್ತಿಗೆ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಅದ್ದೂರಿಯಿ೦ದ ಜರಗಿತು. ಫೆ. 21ರಿಂದ 26ರ ತನಕ ವಿವಿಧ ಧಾರ್ಮಿಕ ಪ್ರಕ್ರಿಯೆಗಳು ನಡೆಯಲಿದೆ.

ಫೆ. 21ರ ಸಂಜೆ ಅಂಕುರಾರೋಹಣ, ಫೆ. 22ರ ಬೆಳಗ್ಗೆ ಕಲಶಾಭಿಷೇಕ, ಧ್ವಜಾರೋಹಣ, ಸಂಜೆ 5.30ಕ್ಕೆ ಹೊರೆಕಾಣಿಕೆ ಮೆರವಣಿಗೆ, 7ರಿಂದ ಬಲಿ, ಮಹಾರಂಗಪೂಜೆ, ಫೆ. 23ರ ಬೆಳಗ್ಗೆ 7ರಿಂದ ಪ್ರಧಾನ ಯಾಗ, ಸಂಜೆ ಕಟ್ಟೆಪೂಜೆ, ಫೆ. 24ರ ಬೆಳಗ್ಗೆ ಕಲಶಾಭಿಷೇಕ, 11ರಿಂದ ಮಹಾಪೂಜೆ, ಉತ್ಸವ ಬಲಿ, ಪಲ್ಲಪೂಜೆ, ರಥಾರೋಹಣ, ಮಧ್ಯಾಹ್ನ 12ರಿಂದ ಶ್ರೀಮನ್ಮಹಾರಥೋತ್ಸವ ಅನಂತರ ಅನ್ನಸಂತರ್ಪಣೆ ಜರಗಿತು.

ಸಂಜೆ ವಾಲಗ ಮಂಟಪ ಪೂಜೆ, ಅಷ್ಟಾವಧಾನ ಸೇವೆ, ಶಯ್ಯಾಧಿವಾಸ, ಕವಾಟಬಂಧನ, ಫೆ. 25ರ ಬೆಳಗ್ಗೆ ಕವಾಟೋದ್ಘಾಟನೆ, ಅಂಕುರ,ಅಭಿಷೇಕ, ತುಲಾಭಾರಾದಿಸೇವೆಗಳು, ಸಂಜೆ ಓಕುಳಿ, ಅವಭ್ರತಸ್ಥಾನ, ಫೆ. 26ರ ಬೆಳಗ್ಗೆ ಶುದ್ಧಸಂಪ್ರೋಕ್ಷಣೆ, ಕಲಶಾಭಿಷೇಕ, ಮಹಾಮಂತ್ರಾಕ್ಷತೆ ಜರಗಲಿದೆ.

No Comments

Leave A Comment