.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........

ಫೆ.24: ಪಣಿಯಾಡಿ ಶ್ರೀ ಅನಂತಾಸನ ಶ್ರೀ ಲಕ್ಷ್ಮೀಅನಂತಪದ್ಮನಾಭ ದೇವಸ್ಥಾನದ ಶ್ರೀಮನ್ಮಹಾರಥೋತ್ಸವ-ಫೆ.27ಕ್ಕೆ “ವ್ಯಾಘ್ರಚಾಮುಂಡಿ” ದೈವಗಳ ವರ್ಷಾವಧಿ ಕೋಲ

ಉಡುಪಿ:ಫೆ.20:ಪಣಿಯಾಡಿ ಶ್ರೀ ಅನಂತಾಸನ ಶ್ರೀ ಲಕ್ಷ್ಮೀಅನಂತಪದ್ಮನಾಭ ದೇವಸ್ಥಾನದಲ್ಲಿ ಫೆ. 24ರಂದು ಶ್ರೀಮನ್ಮಹಾರಥೋತ್ಸವ ನಡೆಯಲಿದೆ.

ಶ್ರೀ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ಸಲಹೆಯನ್ವಯ ಫೆ. 21ರಿಂದ 26ರ ತನಕ ವಿವಿಧ ಧಾರ್ಮಿಕ ಪ್ರಕ್ರಿಯೆಗಳು

ಫೆ. 21ರ ಸಂಜೆ ಅಂಕುರಾರೋಹಣ, ಫೆ. 22ರ ಬೆಳಗ್ಗೆ ಕಲಶಾಭಿಷೇಕ, ಧ್ವಜಾರೋಹಣ, ಸಂಜೆ 5.30ಕ್ಕೆ ಹೊರೆಕಾಣಿಕೆ ಮೆರವಣಿಗೆ, 7ರಿಂದ ಬಲಿ, ಮಹಾರಂಗಪೂಜೆ, ಫೆ. 23ರ ಬೆಳಗ್ಗೆ 7ರಿಂದ ಪ್ರಧಾನ ಯಾಗ, ಸಂಜೆ ಕಟ್ಟೆಪೂಜೆ, ಫೆ. 24ರ ಬೆಳಗ್ಗೆ ಕಲಶಾಭಿಷೇಕ, 11ರಿಂದ ಮಹಾಪೂಜೆ, ಉತ್ಸವ ಬಲಿ, ಪಲ್ಲಪೂಜೆ, ರಥಾರೋಹಣ, ಮಧ್ಯಾಹ್ನ 12ರಿಂದ ಶ್ರೀಮನ್ಮಹಾರಥೋತ್ಸವ, ಅನಂತರ ಅನ್ನಸಂತರ್ಪಣೆ, ಸಂಜೆ ವಾಲಗ ಮಂಟಪ ಪೂಜೆ, ಅಷ್ಟಾವಧಾನ ಸೇವೆ, ಶಯ್ಯಾಧಿವಾಸ, ಕವಾಟಬಂಧನ, ಫೆ. 25ರ ಬೆಳಗ್ಗೆ ಕವಾಟೋದ್ಘಾಟನೆ, ಅಂಕುರ,ಅಭಿಷೇಕ, ತುಲಾಭಾರಾದಿಸೇವೆಗಳು, ಸಂಜೆ ಓಕುಳಿ, ಅವಭ್ರತಸ್ಥಾನ, ಫೆ. 26ರ ಬೆಳಗ್ಗೆ ಶುದ್ಧಸಂಪ್ರೋಕ್ಷಣೆ, ಕಲಶಾಭಿಷೇಕ, ಮಹಾಮಂತ್ರಾಕ್ಷತೆ ಜರಗಲಿದೆ.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಪ್ರತಿದಿನ ಭಜನೆ ಜರಗಲಿದ್ದು, ಫೆ. 21ರ ಸಂಜೆ 7.30ರಿಂದ ತುಳುವ

ಸಿರಿ ಕಲಾವಿದೆರ್ ನಂದಳಿಕೆ ಅವರಿಂದ ‘ಕೈತಲ್ ಪೋಮೊಡ್ಡಿ’ ನಾಟಕ, ಫೆ. 22ರ ಬೆಳಗ್ಗೆ ಗೀತಾ

ಪಾರಾಯಣ, ಸಂಜೆ 6ರಿಂದ ವಿಪಂಚಿ ಬಳಗದ ವಾಣಿ ಐತಾಳ್ ಅವರಿಂದ ವೀಣಾ ವಾದನ, ಫೆ.

23ರ ಸಂಜೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ವೈಭವ, ಫೆ. 24ರ ಬೆಳಗ್ಗೆ ವಿಷ್ಣುಸಹಸ್ರನಾಮ ಪಾರಾಯಣ, ಲಕ್ಷ್ಮೀ ಶೋಭಾನೆ, ಸಂಜೆ ವಿ.ಶುಭಶ್ರೀ ಅಡಿಗ ಅವರಿಂದ ವೀಣಾವಾದನ, ಡಾ.ಸಮತ ಗೌತಮ್ ಹಾಗೂ ಶಿಷ್ಯರಿಂದ ಭರತನಾಟ್ಯ, ಫೆ. 25ರ ಸಂಜೆ ದಿವ್ಯಶ್ರೀ ಗಾನಲಹರಿ ಅವರಿಂದ ಭಕ್ತಿ ಸಂಗೀತ, ಫೆ. 26, 27ರ ಸಂಜೆ “ವ್ಯಾಘ್ರಚಾಮುಂಡಿ” ಹಾಗೂ ಇತರ ದೈವಗಳ ವರ್ಷಾವಧಿ ಕೋಲ ನೆರವೇರಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.

No Comments

Leave A Comment