ಕಲಬುರಗಿ: ದೇಶದ ವಿವಿಧ ವಿಶ್ವವಿದ್ಯಾಲಯಗಳ ನಕಲಿ ಅಂಕಪಟ್ಟಿ ತಯಾರಿಸಿ ನಿರುದ್ಯೋಗಿ ಯುವಕರಿಗೆ ಮಾರಾಟ ಮಾಡುತ್ತಿದ್ದ ಕಿಂಗ್ ಪಿನ್ನನ್ನು ಕಲಬುರಗಿ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ದೇಹಲಿ ಮೂಲದ ರಾಜೀವ ಸಿಂಗ್ ಆರೋರಾ ಎಂದು ಗುರುತಿಸಲಾಗಿದ್ದು, ಕಲಬುರಗಿ ಪೊಲೀಸರು ದೆಹಲಿಯ ರಾಮಪಾರ್ಕ್ ಅಪಾರ್ಟ್ಮೆಂಟ್ ದ್ವಾರಕ್ ಮೋಡ್ನಲ್ಲಿ ಬಂಧಿಸಿದ್ದಾರೆ. ರಾಜೀವ ಸಿಂಗ್ ಆರೋರಾ
ನವದೆಹಲಿ: ವಕ್ಫ್ (ತಿದ್ದುಪಡಿ) ಮಸೂದೆಗೆ ತರಲು ಉದ್ದೇಶಿಸಿರುವ ತಿದ್ದುಪಡಿಗಳಿಗೆ ಕೇಂದ್ರ ಸಚಿವ ಸಂಪುಟ ಗುರುವಾರ ಒಪ್ಪಿಗೆ ನೀಡಿದೆ. ಈ ಮೂಲಕ ಬಜೆಟ್ ಅಧಿವೇಶನದ ಉತ್ತರಾರ್ಧದಲ್ಲಿ ಮಸೂದೆಯನ್ನು ಸದನದಲ್ಲಿ ಮಂಡಿಸಿ, ಚರ್ಚಿಸಿ ಅನುಮೋದನೆ ಪಡೆಯಲು ಹಾದಿ ಸುಗಮಗೊಂಡಂತಾಗಿದೆ. ಜಗದಾಂಬಿಕಾ ಪಾಲ್ ಅಧ್ಯಕ್ಷತೆಯ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಶಿಫಾರಸ್ಸು ಮಾಡಿರುವ ಬಹುತೇಕ ಎಲ್ಲ
ತಿರುಚ್ಚಿ: ಮಹಾಶಿವರಾತ್ರಿ ದಿನವಾದ ಇಂದು ಮುಂಜಾನೆ ತಮಿಳುನಾಡಿನ ಕರೂರ್ ಜಿಲ್ಲೆಯ ಕುಳಿತ್ತಲೈ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ. ತಂಜಾವೂರು ಜಿಲ್ಲೆಯ ಒರತನಾಡು ಸಮೀಪದ ಒಕ್ಕನಾಡು ಕೀಲಯೂರಿನ ದೇವಸ್ಥಾನವೊಂದಕ್ಕೆ ಚಾಲಕನೊಂದಿಗೆ ಒಂದೇ ಕುಟುಂಬದ ನಾಲ್ವರು ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ತಿರುಚ್ಚಿ-ಕರೂರ್ ರಾಷ್ಟ್ರೀಯ ಹೆದ್ದಾರಿಯಲ್ಲಿ
ರಾಂಚಿ: ಫೆಬ್ರವರಿ 21 ರಂದು ತಡರಾತ್ರಿ ಜಾರ್ಖಂಡ್‌ನ ಖುಂಟಿ ರಾನಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಉಲಿಹಾಟು ಗ್ರಾಮದಲ್ಲಿ ಡಜನ್‌ಗಟ್ಟಲೆ ಅಪ್ರಾಪ್ತ ವಯಸ್ಕ ಯುವಕರು ಮೂವರು ಬುಡಕಟ್ಟು ಅಪ್ರಾಪ್ತ ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಪೊಲೀಸರ ಪ್ರಕಾರ, ಉಲಿಹತುವಿನಿಂದ ನಿಚಿತ್‌ಪುರಕ್ಕೆ ಹೋಗುವ ದಾರಿಯಲ್ಲಿ ಕರೋ ನದಿಯ ಬಳಿ ಮದುವೆ ಸಮಾರಂಭದಲ್ಲಿ ಭಾಗವಹಿಸಿ
ಬೆಳಗಾವಿ: ಮಧ್ಯಪ್ರದೇಶದ ಜಬಲಪೂರ ಪೆಹರಾ ಟೋಲ್ ನಾಕಾ ಬಳಿ ಸಂಭವಿಸಿದ ಅಪಘಾತದಲ್ಲಿ ಗೋಕಾಕ್ ನಗರದ ಆರು ಮಂದಿ ಮೃತಪಟ್ಟಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ. ಗೋಕಾಕ್ ತಾಲೂಕಿನ ಲಕ್ಷ್ಮಿ ಬಡಾವಣೆ ನಿವಾಸಿಗಳಾದ ಬಾಲಚಂದ್ರ ಗೌಡರ (50), ಸುನೀಲ್ ಶೇಡಶ್ಯಾಳೆ (45), ಬಸವರಾಜ್ ಕುರ್ತಿ (63), ಬಸವರಾಜ್ ದೊಡಮಾಳ್ (49), ಈರಣ್ಣ ಶೇಬಿನಕಟ್ಟಿ (27),
ನವದೆಹಲಿ: ಮಹಾ ಕುಂಭಮೇಳದಲ್ಲಿ ನೈರ್ಮಲ್ಯ ಸೌಲಭ್ಯಗಳು ಅಸಮರ್ಪಕವಾಗಿರುವುದರಿಂದ ಲಕ್ಷಾಂತರ ಜನ ಗಂಗಾ ನದಿಯ ದಡದಲ್ಲಿ ಬಯಲು ಮಲವಿಸರ್ಜನೆ ಮಾಡಲು ಕಾರಣವಾಗಿದೆ ಎಂಬ ಆರೋಪದ ಮೇಲೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(NGT) ಇತ್ತೀಚೆಗೆ ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ನಿಪುನ್ ಭೂಷಣ್ ಎಂಬವರು ಉತ್ತರ ಪ್ರದೇಶ ಸರ್ಕಾರದಿಂದ 10 ಕೋಟಿ ರೂ.
ಹೈದರಾಬಾದ್: ತೆಲಂಗಾಣದ ನಾಗರ್‌ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆಯ (ಎಸ್‌ಎಲ್‌ಬಿಸಿ) ನಿರ್ಮಾಣ ಹಂತದಲ್ಲಿದ್ದ ಸುರಂಗದಲ್ಲಿ ಶನಿವಾರ ಛಾವಣಿಯ ಒಂದು ಭಾಗ ಕುಸಿದು ಕನಿಷ್ಠ ಆರು ಕಾರ್ಮಿಕರು ಸಿಲುಕಿರುವ ಶಂಕೆ ಸಾಧ್ಯತೆಯಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ನಿರ್ಮಾಣ ಕಂಪನಿಯ ತಂಡ ಸುರಂಗದೊಳಗೆ ಹೋಗಿದ್ದು, ಪರಿಶೀಲಿಸುತ್ತಿದೆ ಎಂದು ಅವರು ಹೇಳಿದರು. ಕಂಪನಿ ನೀಡಿದ ಮಾಹಿತಿಯ ಪ್ರಕಾರ
ದೆಹಲಿ:ಭಾರತೀಯ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಾಗಿ (ಸಿಇಸಿ) ಜ್ಞಾನೇಶ್ ಕುಮಾರ್ ಇಂದು ಅಧಿಕಾರ ಸ್ವೀಕರಿಸಿದ್ದಾರೆ. 26 ನೇ ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕಗೊಂಡಿರುವ ಜ್ಞಾನೇಶ್ ಕುಮಾರ್ ಅವರ ಅಧಿಕಾರಾವಧಿ 2029ರ ಜನವರಿ 26 ರವರೆಗೆ ಇರಲಿದೆ. ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಕುಮಾರ್, ರಾಷ್ಟ್ರ ನಿರ್ಮಾಣದ ಮೊದಲ ಹೆಜ್ಜೆ ಮತದಾನ.
ವಾಷಿಂಗ್ಟನ್ : ಭಾರತ ಬಳಿ ಸಾಕಷ್ಟು ಹಣ ಇರುವಾಗ , ನಾವೇಕೆ ಭಾರತಕ್ಕೆ 21 ಮಿಲಿಯನ್ ಡಾಲರ್ ಗಳನ್ನು ನೀಡಬೇಕು? ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಶ್ನಿಸಿದ್ದಾರೆ. ಫ್ಲೋರಿಡಾದಲ್ಲಿರುವ ತನ್ನ ನಿವಾಸ ಮಾರ್-ಎ-ಲಾಗೊದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾವು ಭಾರತಕ್ಕೆ 21 ಮಿಲಿಯನ್ ಡಾಲರ್‌ಗಳನ್ನು ಏಕೆ ನೀಡುತ್ತಿದ್ದೇವೆ? ಅವರ
ದೇಶಾದ್ಯಂತ ಹವಾಮಾನ ನಿರಂತರವಾಗಿ ಬದಲಾಗುತ್ತಿದೆ. ಏತನ್ಮಧ್ಯೆ ಹವಾಮಾನ ಇಲಾಖೆಯು ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಪರಿಚಲನೆಯುಂಟಾಗುತ್ತಿದ್ದು, 13 ರಾಜ್ಯಗಳಲ್ಲಿ ಭಾರಿ ಮಳೆಯಾಗಬಹುದು ಎಂಬ ಎಚ್ಚರಿಕೆಯನ್ನು ನೀಡಿದೆ. ಅಸ್ಸಾಂ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ, ಈಶಾನ್ಯ ರಾಜ್ಯಗಳಲ್ಲಿ ಮುಂದಿನ ಏಳು ದಿನಗಳವರೆಗೆ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ನಾಗಾಲ್ಯಾಂಡ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ