.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........

ಸಿ.ಜೆ.ರಾಯ್ ಬೆನ್ನಲ್ಲೇ ಮತ್ತೊಬ್ಬ ಪ್ರಸಿದ್ಧ ಉದ್ಯಮಿ ಆತ್ಮಹತ್ಯೆ..!

ಸೊಲ್ಲಾಪುರ: ಬೆಂಗಳೂರು ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಘಟನೆ ಬೆನ್ನಲ್ಲೇ ಮತ್ತೊಬ್ಬ ಉದ್ಯಮಿ ದುರಂತ ಸಾವು ಕಂಡಿದ್ದಾರೆ.

ಜನಪ್ರಿಯ ಮುಲ್ತಾನಿ ಬೇಕರಿ ಮಾಲೀಕ, ಶ್ರೀಮಂತ ಉದ್ಯಮಿ ಸುನಿಲ್ ಮೋತಿಲಾಲ್ (59) ಅವರು 17 ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮಹಾರಾಷ್ಟ್ರದ ಸೋಲಾಪುರದ ಪನಾಶ್ ಅಪಾರ್ಟ್‌ಮೆಂಟ್‌ನ 17ನೇ ಮಹಡಿಯಿಂದ ಜಿಗಿದು ಬದುಕು ಅಂತ್ಯಗೊಳಿಸಿದ್ದಾರೆ.

ಮಧ್ಯಾಹ್ನದ ಬಳಿಕ ಅಪಾರ್ಟ್‌ಮೆಂಟ್‌ಗೆ ಆಗಮಿಸಿದ ಸುನಿಲ್ ಮೋತಿಲಾಲ್ ತೀವ್ರವಾಗಿ ಮಾನಸಿಕ ಒತ್ತಡದಲ್ಲಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.

ಸಾಮಾನ್ಯವಾಗಿ ಲಿಫ್ಟ್ ಮೂಲಕ ತೆರಳುತ್ತಿದ್ದ ಸುನಿಲ್ ಮೋತಿಲಾಲ್, 17 ಮಹಡಿಯನ್ನು ಮೆಟ್ಟಿಲು ಮೂಲಕ ಹತ್ತಿದ್ದಾರೆ. ಬಳಿಕ 17ನೇ ಮಹಡಿ ತುದಿಯಲ್ಲಿ ಕೈಮುಗಿದು ನಿಂತಿದ್ದಾರೆ. ಇದನ್ನು ಕಂಡ ಸ್ಥಳೀಯ ನಿವಾಸಿಗಳು ಕೂಡಲೇ ಸೆಕ್ಯೂರಿಟಿ ಗಾರ್ಡ್‌ಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆ ಸೆಕ್ಯೂರಿಟಿ ಗಾರ್ಡ್ ಸ್ಥಳಕ್ಕೆ ಧಾವಿಸಿದ್ದು, ಸತತವಾಗಿ ಮಾತುಕತೆ ನಡೆಸಿ ಮನ ಒಲಿಸಿದ ಕೆಳಗೆ ಕರೆ ತಂದಿದ್ದಾರೆ. ಸೆಕ್ಯೂರಿಟಿ ಗಾರ್ಡ್‌ಗೆ ಭರವಸೆ ನೀಡಿದ ಉದ್ಯಮಿ, ತಾನು ದುಡುಕಿನ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ತೀವ್ರ ಒತ್ತಡದಲ್ಲಿ ನಾನು ನಿರ್ಧಾರ ಮಾಡಿದ್ದೆ. ಇದೀಗ ಬದಲಾಯಿಸಿದ್ದೇನೆ ಎಂದು ಹೇಳಿದ್ದಾರೆ.

ಬಳಿಕ ಮೂರು ಫ್ಲೋರ್ ಇಳಿಯುತ್ತಿದ್ದಂತೆ ಕೀ ಮೇಲಿದೆ ತರುತ್ತೇನೆಂದು ಮತ್ತೆ ಉದ್ಯಮಿ ಮೇಲೆ ಹೋಗಿದ್ದಾರೆ. ಈ ವೇಳೆ ಹಿಂದಿನಿಂದಲೇ ಸೆಕ್ಯೂರಿಟಿ ಗಾರ್ಡ್ ಕೂಡ ತೆರಳಿದ್ದಾರೆ. ಆದರೆ, ಒಂದು ಒಂದೇ ಓಡಿದ ಉದ್ಯಮಿ ರೂಫ್ ಟಾಪ್‌ ಮೇಲಿಂದ ಕೆಳಕ್ಕೆ ಜಿಗಿದಿದ್ದಾರೆ. ಸುನಿಲ್ ಮೋತಿಲಾಲ್ 17ನೇ ಮಹಡಿಯಿಂದ ಕೆಳಕ್ಕೆ ಜಿಗಿದಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇತರ ಅಪಾರ್ಟ್‌ಮೆಂಟ್ ನಿವಾಸಿಗಳು ನೋಡ ನೋಡುತ್ತಿದ್ದಂತೆ ಈ ಘಟನೆ ನಡೆದಿದೆ.

ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಧಾವಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು ತನಿಖೆ ಆರಂಭಗೊಂಡಿದೆ. ಪೊಲೀಸರು ಸ್ಥಳೀಯ ಸಿಸಿಟಿವಿ ದೃಶ್ಯಗಳ ಪರಿಶೀಲನೆ ಆರಂಭಿಸಿದ್ದಾರೆ.

No Comments

Leave A Comment