ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......

ಬೈಂದೂರು : ಇಲ್ಲಿನ ತಾಲೂಕು ಆಡಳಿತ ಕಛೇರಿಯ ವತಿಯಿಂದ ಕಂದಾಯ ಉತ್ಸವ - ೨೦೨೫, ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನಾ ಸಮಾರಂಭ ಶನಿವಾರ ಬೈಂದೂರು ಗಾಂಧಿ ಮೈದಾನದಲ್ಲಿ ನಡೆಯಿತು. ಉಡುಪಿ ಜಿಲ್ಲಾಧಿಕಾರಿ ಡಾ ಕೆ ವಿದ್ಯಾಕುಮಾರಿ ಅವರು ಕಂದಾಯ ಉತ್ಸವ - ೨೦೨೫, ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು

ಚಿಕ್ಕಬಳ್ಳಾಪುರ:ಮಾರ್ಚ್​ 09: ಖಾಸಗಿ ಬಸ್‌ವೊಂದು ಡಿಕ್ಕಿಯಾದ ಪರಿಣಾಮ ಕಾರು ಹೊತ್ತಿ ಉರಿದಿದ್ದು, ಘಟನೆಯಲ್ಲಿ ಇಬ್ಬರು ಸಜೀವ ದಹನವಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಗೋಪಲ್ಲಿ ಗೇಟ್ ಬಳಿ ನಡೆದಿದೆ. ಕಾರಿನಲ್ಲಿದ್ದ ಓರ್ವ ಮಹಿಳೆ ಹಾಗೂ ಓರ್ವ ಪುರುಷ ಸಜೀವದಹನವಾಗಿದ್ದು, ಆಂಧ್ರ ಮೂಲದ ಧನಂಜಯ ರೆಡ್ಡಿ(31), ಕಲಾವತಿ(35) ಮೃತರು

ಪಣಜಿ/ಬೆಂಗಳೂರು:ಮಾರ್ಚ್,​ 09: 11.6ಕೋಟಿ ರೂ. ಮೌಲ್ಯದ ಡ್ರಗ್ಸ್ ಸಾಗಿಸುತ್ತಿದ್ದ ಆರೋಪದ ಮೇಲೆ ಬೆಂಗಳೂರು ಮೂಲದ 23 ವರ್ಷದ ಯುವಕನನ್ನು ಗೋವಾ ಪೊಲೀಸರು ಶನಿವಾರ (ಮಾರ್ಚ್​.08) ಬಂಧಿಸಿದ್ದಾರೆ. ಯುವಕನ ಬಳಿ ಇದ್ದ 11 ಕೆಜಿಗಿಂತ ಹೆಚ್ಚು ಗಾಂಜಾವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ ಎಂದು ವರದಿಯಾಗಿದೆ. ಗೋವಾ ಪೊಲೀಸರ ಪ್ರಕಾರ, ಮಾದಕ

ಮಂಗಳೂರು : ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ತಯಾರಾಗಲಿರುವ "ವೈಲ್ಡ್ ಟೈಗರ್ ಸಫಾರಿ" ಸಿನಿಮಾದ ಮುಹೂರ್ತ ಕಾರ್ಯಕ್ರಮ ಶುಕ್ರವಾರ ಬೆಳಗ್ಗೆ ಕದ್ರಿ ದೇವಸ್ಥಾನದಲ್ಲಿ ಜರುಗಿತು. ಬಳಿಕ ಮಾಧ್ಯಮಗಳ ಜೊತೆ ಮಾತಾಡಿದ ಚಿತ್ರದ ನಿರ್ದೇಶಕ ಚಂದ್ರಮೌಳಿ ಅವರು, ”ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುವ ಕಥಾಹಂದರವನ್ನು ಈ ಸಿನಿಮಾ ಹೊಂದಿದ್ದು ಸಿನಿಮಾದ ಮುಹೂರ್ತ ಕಾರ್ಯಕ್ರಮ ಇಂದು

ಉಡುಪಿ:ಉಡುಪಿಯ ರಥಬೀದಿಯಲ್ಲಿರುವ ಪ್ರಸಿದ್ಧ ರಾಯರ ಮಠವಾದ ಶ್ರೀರಾಘವೇ೦ದ್ರ ಮಠದಲ್ಲಿ ಮಾ.6ರ೦ದು ಶ್ರೀರಾಘವೇ೦ದ್ರಸಾರ್ವಭೌಮರ ಜಯ೦ತೋತ್ಸವವು ಅದ್ದೂರಿಯಿ೦ದ ಸಕಲ ಧಾರ್ಮಿಕ ವಿಧಿ-ವಿಧಾನಗಳೊ೦ದಿಗೆ ನಡೆಯಿತು. ಬೆಳಿಗ್ಗೆಯಿ೦ದಲೇ ಮಠಕ್ಕೆ ಆಗಮಿಸುತ್ತಿರುವ ರಾಯರ ಭಕ್ತರಿಗೆಲ್ಲರಿಗೂ ಲಡ್ದುಪ್ರಸಾದವನ್ನು ಹಾಗೂ ಮಧ್ಯಾಹ್ನದಲ್ಲಿ ಮಠಕ್ಕೆ ಆಗಮಿಸಿದ ಸಾವಿರಾರು ಮ೦ದಿ ಹಾಲುಪಾಯಸದೊ೦ದಿಗೆ ಮಹಾಅನ್ನಸ೦ತರ್ಪಣೆಯು ಜರಗಿತು. ರಾತ್ರೆ ಪಲ್ಲಕಿ ಉತ್ಸವವನ್ನು ನಡೆಸಲಾಯಿತು.

ಕಲಬುರಗಿ, ಮಾರ್ಚ್​​ 07: ಎರಡು ಬೈಕ್​ಗಳು (bike) ಮುಖಾಮುಖಿ ಡಿಕ್ಕಿಯಾಗಿ ನಾಲ್ವರು ಯುವಕರು ಸಾವನ್ನಪ್ಪಿರುವಂತಹ (death) ಘಟನೆ ಜಿಲ್ಲೆಯ ಸೇಡಂ ತಾಲೂಕಿನ ಆಬಾಳ (ಟಿ) ಗ್ರಾಮದ ಬಳಿ ಭೀಕರ ಅಪಘಾತ ಸಂಭವಿಸಿದೆ. ಸಿದ್ದು, ಸರೇಶ್ ರೆಡ್ಡಿ, ಮಲ್ಲು ಪೂಜಾರಿ ಮತ್ತು ಪ್ರಕಾಶ್ ಪೂಜಾರಿ ಮೃತರು. ಸೇಡಂನಿಂದ ಆಬಾಳ್ ಕಡೆ ಹೊರಟಿದ್ದ ಒಂದು ಬೈಕ್​​ಗೆ ಎದುರಿಗೆ ಬಂದ

ಬೆಂಗಳೂರು:ಮಾರ್ಚ್​, 07: ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ  ಪತ್ನಿ ಪಾರ್ವತಿ  ಹಾಗೂ ಸಚಿವ ಭೈರತಿ ಸುರೇಶ್​ಗೆ ಇಡಿ ನೀಡಿದ್ದ ಸಮನ್ಸ್​ ರದ್ದುಗೊಳಿಸಿ ಹೈಕೋರ್ಟ್ ​ ಆದೇಶ ಹೊರಡಿಸಿದೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಹಾಜರಾಗುವಂತೆ ಪಾರ್ವತಿ ಹಾಗೂ ಭೈರತಿ ಸುರೇಶ್​ಗೆ ಇಡಿ ಸಮನ್ಸ್​ ಜಾರಿ ಮಾಡಿತ್ತು.

ಉಡುಪಿಯ ಪಣಿಯಾಡಿಯ ಇತಿಹಾಸ ಪ್ರಸಿದ್ಧ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ದೇವಸ್ಥಾನದ ವಾರ್ಷಿಕ ರಥೋತ್ಸವವು ಶುಕ್ರವಾರದ೦ದು ವಿಜೃ೦ಭಣೆಯಿ೦ದ ಜರಗಿತು. ಮಾ.5ರ೦ದು ಧ್ವಜಾರೋಹಣ ಕಾರ್ಯಕ್ರಮದೊ೦ದಿಗೆ ಉತ್ಸವಕ್ಕೆ ಚಾಲನೆಯನ್ನು ನೀಡಲಾಯಿತು.ಸಕಲ ಧಾರ್ಮಿಕವಿಧಿ-ವಿಧಾನದೊ೦ದಿಗೆ ಪ್ರತಿನಿತ್ಯವೂ ಶ್ರೀದೇವರಿಗೆ ಪೂಜೆ ಸೇರಿದ೦ತೆ ಕಟ್ಟೆಪೂಜೆಯು ನಡೆಯಿತು. ಕಾರ್ಯಕ್ರಮದ ಅ೦ಗವಾಗಿ ಭಜನಾ ಕಾರ್ಯಕ್ರಮ,ಪರಾಯಣ,ಲಕ್ಷ್ಮೀಶೋಭಾನೆ ಹಾಗೂ ಇನ್ನಿತರ ಕಾರ್ಯಕ್ರಮವು ಅದ್ದೂರಿಯಿ೦ದ ನಡೆಯಿತು.ಮಾ.9ರ೦ದು ಸ್ಥಾನಕ್ಕೆ ಸ೦ಬ೦ಧ ಪಟ್ಟ

   ಉಡುಪಿ:ಮಾ.06 .2026ರ ಪರ್ಯಾಯಕ್ಕೆ ಸಿದ್ಧತೆಯ ಭಾಗವಾಗಿ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿಯವರು ಮಾರ್ಚ್ 6ರ ಗುರುವಾರದ೦ದು ಅಕ್ಕಿ ಮುಹೂರ್ತವನ್ನು ನಡೆಸಿದರು. ಶಿರೂರು ಮಠವು 2026ರಲ್ಲಿ ನಡೆಯಲಿರುವ ಪರ್ಯಾಯವನ್ನು ಮುನ್ನಡೆಸಲು ಸಜ್ಜಾಗಿದೆ. ಸಮಾರಂಭದ ಭಾಗವಾಗಿ, ಅಕ್ಕಿ ಮುಡಿಯನ್ನು ಚಿನ್ನದ ರಥದಲ್ಲಿ ಉಡುಪಿ ಕಾರ್ ಸ್ಟ್ರೀಟ್‌ನಲ್ಲಿ ಮೆರವಣಿಗೆ ಮಾಡಲಾಯಿತು.

ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರ ದೇಹತೂಕದ ಬಗ್ಗೆ ಹೇಳಿಕೆ ನೀಡಿದ್ದಕ್ಕಾಗಿ ಕಾಂಗ್ರೆಸ್ ಸೋಮವಾರ ತನ್ನ ವಕ್ತಾರೆ ಶಾಮಾ ಮೊಹಮ್ಮದ್ ಅವರಿಗೆ ಛೀಮಾರಿ ಹಾಕಿದೆ. ಸಾಮಾಜಿಕ ಮಾಧ್ಯಮದಲ್ಲಿನ ತಮ್ಮ ಪೋಸ್ಟ್‌‌ಗಳನ್ನು ಅಳಿಸಲು ಮತ್ತು ಭವಿಷ್ಯದಲ್ಲಿ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ. ಮೊಹಮ್ಮದ್ ಅವರು ಭಾನುವಾರ ತಡರಾತ್ರಿ ಮಾಡಿದ ಎಕ್ಸ್‌ನಲ್ಲಿನ