.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........
ಉಡುಪಿ ಶ್ರೀ ಅನಂತೇಶ್ವರ ದೇಗುಲದಲ್ಲಿ ಫೆ.14ರಿಂದ ಫೆ.21ರ ವರೆಗೆ ಶಿವರಾತ್ರಿ ಮಹೋತ್ಸವ …
ಉಡುಪಿ: ಫೆ. 13: ಶ್ರೀ ಅನಂತೇಶ್ವರ ದೇಗುಲದಲ್ಲಿ ಫೆ.14ರಿಂದ ಫೆ.21ರ ವರೆಗೆ ಶಿವರಾತ್ರಿ ಮಹೋತ್ಸವ ಹಾಗೂ ವಾರ್ಷಿಕ ರಥೋತ್ಸವ ಜರಗಲಿದೆ.
ಫೆ.14ರ ರಾತ್ರಿ ಬಲಿ, ಅಂಕುರಾರೋಪಣ, ಫೆ.15ರ ಮಹಾ ಶಿವರಾತ್ರಿಯಂದು ಧ್ವಜಾರೋಹಣ, ಕಲಶಾಭಿಷೇಕ, ಮಧ್ಯಾಹ್ನ ಮಹಾ ಪೂಜೆ, ರಾತ್ರಿ ಶಿವರಾತ್ರಿ ಪೂಜೆ, ಮಹಾರಂಗಪೂಜೆ, ಫೆ.16ರಿಂದ ಫೆ.18 ವರೆಗೆ ಪ್ರತಿದಿನ ಪ್ರಧಾನ ಹೋಮ, ಮಹಾಪೂಜೆ, ಕಟ್ಟೆಪೂಜೆ, ಫೆ.19ರಂದು ಮಹಾಪೂಜೆ, ರಥಾರೋಹಣ ನಡೆದು ಮಹಾರಥೋತ್ಸವ ನಡೆಯಲಿದೆ.
ಫೆ.20ರಂದು ಕವಾಟೋದ್ಘಾಟನೆ, ಮಹಾಪೂಜೆ, ಅವಭೃಥ ಸ್ನಾನ, ಧ್ವಜಾವರೋಹಣ, ಮಹಾ ಮಂತ್ರಾಕ್ಷತೆ, ಫೆ.21ರಂದು ಮಹಾಸಂಪ್ರೋಕ್ಷಣೆ ಜರಗಲಿದೆ. ಪ್ರತಿದಿನ ಭಜನೆ, ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಶಿವರಾತ್ರಿ ಪ್ರಯುಕ್ತ ಶ್ರೀ ಚಂದ್ರಮೌಳೀಶ್ವರ ದೇವಸ್ಥಾನ ದಲ್ಲಿಯೂ ಕಾರ್ಯಕ್ರಮ ನಡೆಯಲಿದೆ ಎಂದು ದೇಗುಲದ ಆಡಳಿತ ಮೊಕೇಸರರಾದ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಿಳಿಸಿದ್ದಾರೆ.