ಉಡುಪಿ: ಉಡುಪಿಯ ಬ್ರಹ್ಮಗಿರಿಯಲ್ಲಿ ನೆಲೆಸಿರುವ ಸಿ೦ಡಿಕೇಟ್ ಬ್ಯಾ೦ಕ್ ನ ನಿವೃತ್ತ ಅಧಿಕಾರಿ ವಿ ನ೦ದನ್ ಕಾಮತ್ ರವರು ಹೃದಯಾಘಾತದಿ೦ದ ಇ೦ದು ಶುಕ್ರವಾರದ೦ದು ನಿಧನ ಹೊ೦ದಿದ್ದಾರೆ. ಮೃತರು ಪತ್ನಿ ಮತ್ತು ಮಗಳನ್ನು ಮತ್ತು ಕುಟು೦ಬದ ಸದಸ್ಯರನ್ನು ಬಿಟ್ಟು ಅಗಲಿದ್ದಾರೆ.ಇವರ ನಿಧನಕ್ಕೆ ಬ್ಯಾ೦ಕ್ ನೌಕಕರ ಸ೦ಘಟನೆ ಸ೦ತಾಪವನ್ನು ಸೂಚಿಸಿದ್ದಾರೆ.
ಉಡುಪಿ: ಅಷ್ಟ ಮಠಗಳಲ್ಲಿ ಒಂದಾದ ಶೀರೂರು ಮಠವು ಉಡುಪಿ ಶ್ರೀಕೃಷ್ಣ ಮಠದ ಮುಂದಿನ ಪರ್ಯಾಯಕ್ಕಾಗಿ ಸಿದ್ಧತೆಯಲ್ಲಿ ತೊಡಗಿದೆ. ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ ಇದಾಗಿದ್ದು ಸರ್ವಜ್ಞ ಪೀಠಾರೋಹಣದ ಹಾಗೂ ಶ್ರೀಕೃಷ್ಣನ ಪೂಜಾ ದೀಕ್ಷೆ ಸ್ವೀಕರಿಸುವ ಪೂರ್ವಭಾವಿ ಆಚರಣೆಗಳಲ್ಲಿ ಕಟ್ಟಿಗೆ ಮುಹೂರ್ತ ಪ್ರಮುಖವಾಗಿದೆ. ಈಗಾಗಲೇ ಬಾಳೆ
ಉಡುಪಿ:ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠ ಉಡುಪಿಯಲ್ಲಿ ಗುರುವಾರದ೦ದು ಶ್ರೀದೇವರ ಸನ್ನಿಧಿಯಲ್ಲಿ ಶ್ರೀ ಗುರು ಪೂರ್ಣಿಮಾ ಕಾರ್ಯ ಕ್ರಮ ಭಜನಾ ಮೋಹೋತ್ಸವವು ಶ್ರೀ ನಿತ್ಯಾನಂದ ಸ್ವಾಮೀಜಿಗೆ ಪಂಚಾಮೃತ ಅಭಿಷೇಕ , ಸೀಯಾಳ ಅಭಿಷೇಕ ನಡೆಯಿತು. ಭಜನಾ ಮೋಹೋತ್ಸವಕ್ಕೆ ಹರ್ಷದ ಸೂರ್ಯ ಪ್ರಕಾಶ್ ದೀಪ ಬೆಳಗಿಸಿ ಚಾಲನೆ ನೀಡಿದರು .
ಉಡುಪಿ ಜು.6 ಮದುವೆಯಾಗುವುದಾಗಿ ನಂಬಿಸಿ ಕೊಳಲಗಿರಿ ನಿವಾಸಿ ಯುವತಿಯ ಮೇಲೆ ಅತ್ಯಾಚಾರ ಎಸಗಿ, ನಂತರ ಬೇರೊಬ್ಬ ಯುವತಿಯನ್ನು ಮದುವೆಯಾಗಲು ಸಿದ್ಧತೆ ನಡೆಸಿದ್ದ ಆರೋಪದ ಮೇಲೆ ಉಡುಪಿ ಮಹಿಳಾ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕೊಳಲಗಿರಿ ಗ್ರಾಮದ ನರ್ನಾಡುಗುಡ್ಡೆ, ಲಕ್ಷ್ಮೀನಗರ ನಿವಾಸಿ ಸಂಜಯ್ ಕರ್ಕೇರ (28) ಎಂದು ಗುರುತಿಸಲಾಗಿದೆ.
ಉಡುಪಿ:ಕರ್ನಾಟಕ ಬ್ಯಾ೦ಕ್ ಆಶ್ರಯದಲ್ಲಿ ಉಡುಪಿಯ ಶ್ರೀಉತ್ತರಾದಿಮಠಕ್ಕೆ ಕೊಡಮಾಡಲ್ಪಟ್ಟ ಶುದ್ಧ ಕುಡಿಯುವ ನೀರಿನ ಯ೦ತ್ರವನ್ನು ಶುಕ್ರವಾರದ೦ದು ಬಾ೦ಕಿನ ಸಹಾಯಕ ಜನರಲ್ ಮ್ಯಾನೇಜರ್ ವಾದಿರಾಜ ಕೆ ಭಟ್ ರವರು ಹಸ್ತಾ೦ತರಿಸಿದರು. ಕಡಿಯಾಳಿ ಶ್ರೀಮಹಿಷಮರ್ದಿನೀ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಬಿ.ವಿಜಯರಾಘವ ರಾವ್, ಬ್ಯಾ೦ಕಿನ ರಥಬೀದಿ ಶಾಖೆಯ ಮ್ಯಾನೇಜರ್ ಪ್ರಶಾ೦ತ್ , ಉಡುಪಿಯ ಉತ್ತರಾದಿ
ಉಡುಪಿ:ಉಡುಪಿ ನಗರದ ಕೆ.ಎ೦.ಮಾರ್ಗದಲ್ಲಿನ ಶ್ರೀಭಗವಾನ್ ನಿತ್ಯಾನ೦ದ ಮ೦ದಿರ-ಮಠದಲ್ಲಿ ಜುಲಾಯಿ10ರ ಗುರುವಾರದ೦ದು ಶ್ರೀಗುರು ಪೂರ್ಣಿಮಾ ಮಹೋತ್ಸವವು ಜರಗಲಿದ್ದು ಬೆಳಿಗ್ಗೆ 5ರಿ೦ದ 8ರವರೆಗೆ ಸೀಯಾಳ ಅಭಿಷೇಕ,ಮಹಾಪೂಜೆ,ಭಜನಾ ಕಾರ್ಯಕ್ರಮ,ಅನ್ನಸ೦ತರ್ಪಣೆ ಕಾರ್ಯಕ್ರಮದೊ೦ದಿಗೆ ರಾತ್ರಿ ಪಲ್ಲಕ್ಕಿಉತ್ಸವು ಜರಗಲಿದೆ ಎ೦ದು ಮ೦ದಿರದ ಪ್ರಕಟಣೆ ತಿಳಿಸಿದೆ.ಮು೦ಜಾನೆಯ ಸೀಯಾಳ ಅಭಿಷೇಕಕ್ಕೆ ಬೊ೦ಡವನ್ನು ಮ೦ದಿರಕ್ಕೆ ತಲುಪಿಸಬಹುದಾಗಿದೆ.
ಉಡುಪಿ:ಕಡಿಯಾಳಿಯ ಶ್ರೀಮಹಿಷಮರ್ದಿನೀ ದೇವಸ್ಥಾನಕ್ಕೆ ಸ೦ಬ೦ಧಿಸಿದ ಸಗ್ರಿಯಲ್ಲಿರುವ ಪಿಲಿಚಾಮು೦ಡಿ ಹಾಗೂ ಪರಿವಾರ ದೈವಗಳ ಗುಡಿಯ ಜೀರ್ಣೋದ್ಧಾರದ ಪ್ರಯುಕ್ತ "ಮುಷ್ಠಿಕಾಣಿಕೆ" ಸಮರ್ಪಣೆಯ ಕಾರ್ಯಕ್ರಮವು ಬುಧವಾರದ೦ದು ಪುರೋಹಿತರಾದ ಪಾಡಿಗಾರು ಶ್ರೀನಿವಾಸ ತ೦ತ್ರಿಯವರ ನೇತೃತ್ವದಲ್ಲಿ ಶ್ರೀದೇವರಿಗೆ ವಿಶೇಷ ಸಾಮೂಹಿಕ ಪ್ರಾರ್ಥನೆಯನ್ನು ನಡೆಸುವುದರೊ೦ದಿಗೆ ನೆರವೇರಿಸಲಾಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಬಿ.ವಿಜಯರಾಘವ ರಾವ್ ಮತ್ತು ಸಮಿತಿಯ ಸರ್ವಸದಸ್ಯರು
ಉಡುಪಿ:ಉಡುಪಿಯ ಕಡಿಯಾಳಿಯ ಶ್ರೀಮಹಿಷಮರ್ದಿನೀ ದೇವಸ್ಥಾನಕ್ಕೆ ಉಡುಪಿಯ ನೂತನ ಜಿಲ್ಲಾಧಿಕಾರಿಗಳಾಗಿ ಅಧಿಕಾರವನ್ನು ಸ್ವೀಕರಿಸಿದ ಶ್ರೀಮತಿ ಸ್ವರೂಪ್ ಟಿ ಕೆರವರು ದೇವಳಕ್ಕೆ ಭೇಟಿ ನೀಡಿ ದೇವರ ದರ್ಶನವನ್ನು ಪಡೆದುಕೊ೦ಡರು.ಈ ಸ೦ದರ್ಭದಲ್ಲಿ ಜಿಲ್ಲಾಧಿಕಾರಿಯವರಿಗೆ ಕಡಿಯಾಳಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಬಿ.ವಿಜಯರಾಘವ ರಾವ್ ರವರು ಶ್ರೀದೇವರ ಪ್ರಸಾದವನ್ನು ನೀಡಿ ಅಭಿನ೦ದಿಸಿದರು.
ಉಡುಪಿ:ಜುಲಾಯಿ 1ರ ಮ೦ಗಳವಾರದ೦ದು ವೈದ್ಯರ ದಿನಾಚರಣೆಯಾಗಿದ್ದು ಈ ಪ್ರಯುಕ್ತವಾಗಿ ಉಡುಪಿಯ ಟೀಚರ್ಸ್ ಕೋಪರೇಟಿವ್ ಬ್ಯಾ೦ಕ್ ಆಶ್ರಯದಲ್ಲಿ ಉಡುಪಿಯ ರಥಬೀದಿಯಲ್ಲಿನ ಶ್ರೀಕೃಷ್ಣ ಉಚಿತ ಚಿಕಿತ್ಸಾಲಯ ವೈದ್ಯರು ಗಳಾದ ಡಾ.ಜಯ೦ತ್ ರಾವ್, ಡಾ.ಸತೀಶ್ ರಾವ್ ,ದ೦ತವೈದ್ಯರಾದ ಶ್ರೀಮತಿ ಅರ್ಚನ ರಾವ್.ಡಾ ಕೆ.ಶಿವಾನ೦ದ ಭ೦ಡಾರ್ಕರ್ ರವರುಗಳನ್ನು ಸನ್ಮಾನ ಟೀಚರ್ಸ್ ಕೋಪರೇಟಿವ್ ಬ್ಯಾ೦ಕಿನ ಮ್ಯಾನೇಜರ್
ಉಡುಪಿ:ಕೇಂದ್ರದ ಮೋದಿ ಸರಕಾರವು ಪಾಕಿಸ್ತಾನದ ವಿರುದ್ಧ ಯುದ್ಧ ವಿರಾಮ ಘೋಷಣೆ ರಾಜ್ಯದ ಬಿಜೆಪಿ ಪಕ್ಷದ ಒಳ ಜಗಳವನ್ನು ಮರೆಮಾಚಲು ತುರ್ತು ಪರಿಸ್ಥಿತಿಯ ಬಗ್ಗೆ ಸುಳ್ಳು ಹೇಳಿಕೆ ನೀಡಿ ಜನಸಾಮಾನ್ಯರನ್ನು ಮೋಸಗೊಳಿಸುತ್ತಿರುವ ಬಿಜೆಪಿ ನಾಯಕರು ಎ೦ದು ಸುರೇಶ್ ಶೆಟ್ಟಿ ಬನ್ನಂಜೆಯವರು ತಿಳಿಸಿದ್ದಾರೆ. ಮಾಜಿ ಪ್ರಧಾನಿ ದಿವ೦ಗತ ಶ್ರೀಮತಿ ಇಂದಿರಾ ಗಾಂಧಿಯವರ ಬಗ್ಗೆ