ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಗೌಡ ಸಾರಸ್ವತ ಬ್ರಾಹ್ಮಣ ಯುವಕ ಮಂಡಳಿಯ 55 ನೇ ವಾರ್ಷಿಕೋತ್ಸವ ಸ೦ಪನ್ನ
ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆಯಲ್ಲಿನ ಗೌಡ ಸಾರಸ್ವತ ಬ್ರಾಹ್ಮಣ ಯುವಕ ಮಂಡಳಿಯ 55 ನೇ ವಾರ್ಷಿಕೋತ್ಸವ ಇತ್ತೀಚಿಗೆ ನೆಡೆಯಿತು.
ಈ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ ಉಡುಪಿ ಜಿಲ್ಲಾ ಶಿಕ್ಷಕ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ . ಅಶೋಕ್ ಕಾಮತ್ ವಿವಿಧ ಸ್ಫರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಸಿ ಮಾತನಾಡಿದ ಅವರು ಇಲ್ಲಿನ ಯುವ ಶಕ್ತಿ ದೇವಳದ ಅಭಿವೃದ್ಧಿ ಕಾರ್ಯಗಳಲ್ಲಿ ಯುವಜನರ ಕೊಡುಗೆ ಬಹಳ ದೊಡ್ಡದ್ದು. ಸಮಾಜದ ಆಸ್ತಿಯೇ ಯುವ ಶಕ್ತಿಯಾಗಿದ್ದು ಮಕ್ಕಳ ಕ್ರಿಯಾ ಶೀಲಾ ಬೆಳವಣಿಗೆ ದೇವಾಲಯು ಪ್ರೇರಣಾ ಹಾಗೂ ಸ್ಫೂರ್ತಿದಾಯಕ ವಾಗಿದೆ. ಹಿರಿಯರು ದೇವಳಕ್ಕೆ ಬರುವಾಗ ಮಕ್ಕಳನ್ನುಕರೆತಂದರೆ ಸಂಸ್ಕಾರ , ಧರ್ಮದ ಆಚಾರ , ವಿಚಾರ ತಿಳಿದುಕೊಳ್ಳಲು ಶಕ್ತಿ ನೀಡುತ್ತದೆ ಎಂದು ಶುಭ ಹಾರೈಸಿದರು.
ಜಿ ಎಸ್ ಬಿ ಯುವಕ ಮಂಡಲದ ಗೌರವಾಧ್ಯಕ್ಷರಾದ ಪಿ ವಿ ಶೆಣೈ , ಮುಖ್ಯ ಅತಿಥಿಯಾದ ಡಾ ಅಶೋಕ್ ಕಾಮತ್ ಗೌರವಿಸಿದರು. ಜಿ ಎಸ್ ಬಿ ಯುವಕ ಮಂಡಳಿಯ ಅಧ್ಯಕ್ಷ ನಿತೀಶ್ ಶೆಣೈ , ಉಪದ್ಯಾಕ್ಷ ವಿಘ್ನೇಶ್ ಶೆಣೈ , ಯುವಕ ಮಂಡಳಿಯ ಪದಾಧಿಕಾರಿಗಳು ಉಪಸಿತರಿದ್ದರು.