ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ಭಾರೀ ಮಳೆಯು ಅಪಾರ ಹಾನಿಯನ್ನುಂಟುಮಾಡಿದೆ. ಗುರುವಾರ ಮಳೆ ಸಂಬಂಧಿತ ಘಟನೆಗಳಲ್ಲಿ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ. ನಗರದ ತಗ್ಗು ಪ್ರದೇಶಗಳಲ್ಲಿನ ಹಲವಾರು ಮನೆಗಳು ಮತ್ತು ವಸತಿ ಸಮುಚ್ಚಯಗಳು ಜಲಾವೃತವಾಗಿದ್ದು, ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ಖಡಕ್ ವಾಸ್ಲಾ

ಕಾಸರಗೋಡು:ಜಿಲ್ಲೆಯಲ್ಲಿ ಬುಧವಾರ , ಗುರುವಾರ ಬೀಸಿದ ಸುಂಟರಗಾಳಿ ಹಾಗೂ ಮಳೆಗೆ ಅಪಾರ ಹಾನಿ ಉಂಟಾಗಿದ್ದು , ಹಲವು ಮರಗಳು , ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದ್ದು, ವಾಹನ ಮನೆಗಳಿಗೆ ಹಾನಿ ಉಂಟಾಗಿದೆ. ನಿಲುಗಡೆ ಗೊಳಿಸಿದ್ದ ವಾಹನಗಳ ಮೇಲೂ ಮರಗಳು ಉರುಳು ಬಿದ್ದಿವೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಅಸ್ತವ್ಯಸ್ತಗೊಂಡಿದೆ.

ಕಾರವಾರ: ಉಳುವರೆ ಗ್ರಾಮಸ್ಥರಿಗೆ ಬದಲಿ ಜಾಗ ಕೊಟ್ಟು ,ಮನೆ ಕಟ್ಟಿಕೊಡ್ತೇವೆ. ಜನ ಸಹಕಾರ ಮಾಡಬೇಕು. ಬದಲಿ ಮನೆಗೆ ಸ್ಥಳಾಂತರ ಆದ ಮೇಲೆ ಮೂಲ ಮನೆಯಲ್ಲಿ ವಾಸ ಮಾಡಬಾರದು ಎಂದು ಕಂದಾಯ ಸಚಿವ ಕೃಷ್ಣಾ ಭೈರೇಗೌಡ ಹೇಳಿದರು. ಅವರು ಶಿರೂರು ಗುಡ್ಡ ಕುಸಿತ ಪ್ರದೇಶದ ಬಳಿ ವೀಕ್ಷಣೆ ನಂತರ ಮಾಧ್ಯಮಗಳ ಜೊತೆ

ಕುವೈತ್: ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಏರ್ ಕಂಡೀಷನರ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೇರಳ ಮೂಲದ ದಂಪತಿ ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ಕುವೈತ್‌ನ ಫ್ಲ್ಯಾಟ್‌ವೊಂದರಲ್ಲಿ ನಡೆದಿದೆ. ಕೇರಳದ ಅಲಪ್ಪುಳದ ನೀರತ್ತುಪುರಂನವರಾದ ಮ್ಯಾಥ್ಯೂಸ್ ಮುಲಾಕಲ್, ಪತ್ನಿ ಲಿನಿ ಅಬ್ರಹಾಂ ಮತ್ತು ಇಬ್ಬರು ಮಕ್ಕಳು ಘಟನೆಯಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೇಸಿಗೆ

ಶಿರೂರು ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರೂರು ಕ್ಯಾಂಟೀನ್ ಮಾಲೀಕನ ಐದು ವರ್ಷದ ಮಗಳ ಮೃತದೇಹ ಪತ್ತೆಯಾಗಿದೆ. ಆವಂತಿಕ (5) ಮೃತ ಬಾಲಕಿ. ಗಂಗಾವಳಿ ನದಿಯಲ್ಲಿ ತೇಲಿ ಹೋಗಿ ಗೋಕರ್ಣ ಬ್ರಿಡ್ಜ್ ಬಳಿ ಆವಂತಿಕ ಮೃತದೇಹ ಪತ್ತೆಯಾಗಿದೆ. ಒಟ್ಟು ಆರು ಜನ ಮೃತಪಟ್ಟಿರುವ ಮಾಹಿತಿಯಿದೆ. ಸದ್ಯ ಈಗ ಐದು ಜನರ ಮೃತದೇಹ

ಉಡುಪಿ, ಜುಲೈ 16: ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಮುಸ್ಲಿಮರ ವಿರುದ್ಧ ಕೋಮುಭಾವನೆ ಕೆರಳಿಸುವ ಪೋಸ್ಟ್ ಮಾಡಿದ ಆರೋಪದ ಮೇಲೆ ವೈದ್ಯರೊಬ್ಬರ ಮೇಲೆ ಉಡುಪಿ ಜಿಲ್ಲಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಕೀರ್ತನ್ ಉಪಾಧ್ಯ ಎಂಬವರು ಉಡುಪಿಯ ಬ್ರಹ್ಮಾವರದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜುಲೈ 13 ರಂದು ಎಕ್ಸ್​​ನಲ್ಲಿ

ಉತ್ತರ ಕನ್ನಡ: ಪಶ್ಚಿಮ ಘಟ್ಟಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜಲಪಾತಗಳ ಜಿಲ್ಲೆಯಲ್ಲಿ ಫಾಲ್ಸ್​ಗಳು ಮೈತುಂಬಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳು ಪ್ರವಾಸಿಗರ ವೀಕ್ಷಣೆಗೆ ನಿಷೇಧ ಹೇರಿದ್ದಾರೆ. ಜಲಪಾತಗಳ ವೀಕ್ಷಣೆ ವೇಳೆ ಹತ್ತಿರದಲ್ಲಿ ನಿಂತು ಜನರು ಸೆಲ್ಫೀ ಹಾಗೂ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾಗುತ್ತಾರೆ. ಈ ವೇಳೆ ದುರಂತ ಸಂಭವಿಸಿ ಸಾವುಗಳು ಎದುರಾದ

ಶಿರಸಿ: ಇಲ್ಲಿನ ರಾಷ್ಟ್ರೀಯ‌ ಹೆದ್ದಾರಿ ಶಿರಸಿ-ಕುಮಟಾ ಮಾರ್ಗದಲ್ಲಿ‌ಕತಗಾಲ‌ ಸಮೀಪದ ಚಂಡಿಕಾ‌ ನದಿ‌ ತುಂಬಿ‌ ಹರಿಯುತ್ತಿರುವುದರಿಂದ ಶಿರಸಿಯಿಂದ ತೆರಳುವ ವಾಹನಗಳಿಗೆ ಬದಲಿ ‌ಮಾರ್ಗ ಸೂಚಿಸಲಾಗಿದೆ. ಸಿದ್ದಾಪುರ ಭಾಗದಲ್ಲಿ ಸುರಿಯುತ್ತಿರುವ ಅತಿಯಾದ ಮಳೆಯಿಂದಾಗಿ ಸಂಚಾರ ವ್ಯತ್ಯಯವಾಗಿದ್ದು, ರಸ್ತೆ ಇಕ್ಕೆಲದಲ್ಲಿ ಅನೇಕ ವಾಹನಗಳು ನಿಂತು ಕೊಂಡಿವೆ. ಶಿರಸಿಯಿಂದ ಕರಾವಳಿ ಭಾಗಕ್ಕೆ ದೇವಿಮನೆ ಘಟ್ಟ ಪ್ರದೇಶ ಬಳಸಿ‌

ಕಾರ್ಕಳ: ಜೂ.30,ಹಾಲಿನ ಬೆಲೆ ಏರಿಕೆಯನ್ನು ನೆಪವಾಗಿಸಿಕೊಂಡು ಶಾಸಕ ಸುನೀಲ್ ಕುಮಾರ್ ಕಾರ್ಕಳದಲ್ಲಿ ಹಾಲಿಲ್ಲದ ಚಾಹ ಮಾಡುವ ಮೂಲಕ ಪ್ರತಿಭಟನೆಯನ್ನು ಮಾಡಿದ್ದಾರೆ. ಶಾಸಕರಿಗೆ ಈ ರೀತಿ ಪ್ರತಿಭಟನೆ ಸಾಮಾನ್ಯವಾಗಬಹುದು ಯಾಕೆಂದರೆ ಕಂಚೇ ಇಲ್ಲದೆ ಕಂಚಿನ ಪ್ರತಿಮೆ ಮಾಡಿದ ಮಹಾನುಭಾವರಿಗೆ ಹಾಲಿಲ್ಲದ ಚಾಹ ಮಾಡುವುದು ದೊಡ್ಡ ವಿಷಯವಾಗಲಿಕ್ಕಿಲ್ಲ ಎಂದು ಬ್ಲಾಕ್ ಕಾಂಗ್ರೇಸ್

ಬೆಂಗಳೂರು, ಜೂನ್.20: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ದಿನಸಿ ವಸ್ತುಗಳು, ತರಕಾರಿಗಳ ದರ ಏರಿಕೆ ನಡುವೆ ಸರ್ಕಾರ ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟಿದೆ. ರಾಜ್ಯದಲ್ಲಿ ದುಬಾರಿ ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಇಳಿಸಲು ಸರ್ಕಾರ ಮುಂದಾಗಿದ್ದು ಜುಲೈ 1ರಿಂದ ಭಾರಿ ಬೆಲೆಯ ಬ್ರ್ಯಾಂಡ್‌ಗಳ ಮದ್ಯದ ದರ ಅಗ್ಗವಾಗಲಿದೆ.