ಶ್ವೇತಭವನದಲ್ಲಿ ಪಾಕ್ ಸೇನಾ ಮುಖ್ಯಸ್ಥ ಮುನೀರ್ ಗೆ ಟ್ರಂಪ್ ಔತಣ: ಮೋದಿ ಆಲಿಂಗನಕ್ಕೆ ದೊಡ್ಡ ಹೊಡೆತ - ಕಾಂಗ್ರೆಸ್....

ಉಡುಪಿಯಲ್ಲಿ ಮಳೆ ಆರ್ಭಟ- ಮಣಿಪಾಲ ರಸ್ತೆಯಲ್ಲಿ ಕೃತಕ ನೆರೆ ಸೃಷ್ಟಿ- ಸಂಚಾರ ಅಸ್ತವ್ಯಸ್ತ

ಉಡುಪಿ:ಮೇ.20, ಉಡುಪಿಯಾದ್ಯಂತ ಭಾರೀ ಗಾಳಿ ಮಳೆಯಾಗುತ್ತಿದ್ದು ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನಗರದಲ್ಲಿ ಭಾರಿ ಮಳೆಯಿಂದಾಗಿ ಕೃತಕ ನೆರೆ ಸೃಷ್ಟಿಯಾಗಿದೆ.

ಹವಾಮಾನ ಇಲಾಖೆ ಇಂದು ಮತ್ತು ನಾಳೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ಸೂಚನೆ ರವಾನೆ ಮಾಡಲಾಗಿದೆ. ಅದರಂತೆ ಇಂದು ಮುಂಜಾನೆಯಿಂದಲೇ ವರ್ಷಧಾರೆ ಆಗುತ್ತಿದೆ.

ಸತತ 3 ತಾಸಿನಿಂದ ಗಾಳಿ ಮಳೆಯಾಗಿದ್ದು ಬೆಳಗ್ಗಿನ ಸಮಯ ಜನರು ಕೆಲಸ ಕಾರ್ಯಗಳಿಗೆ ಹೋಗಲು ಪರದಾಡಬೇಕಾಯಿತು. ತಗ್ಗು ಪ್ರದೇಶಗಳಲ್ಲಿ ಕೃತಕ ನೆರೆ ಸೃಷ್ಟಿಯಾಗಿದ್ದು ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತು.

ಮಣಿಪಾಲದ ಐನಾಕ್ಸ್ ಬಳಿಯ ರಸ್ತೆ ಸಂಪೂರ್ಣವಾಗಿ ಮುಳುಗಿ, ಹರಿಯುವ ನದಿಯಂತೆ ಕಾಣುತ್ತಿತ್ತು, ಇದರಿಂದಾಗಿ ಅನೇಕ ವಾಹನಗಳು ಉಡುಪಿಯಿಂದ ಮಣಿಪಾಲ ತಲುಪಲು ಪರ್ಯಾಯ ಮಾರ್ಗಗಳನ್ನು ಹುಡುಕಬೇಕಾಯಿತು.

ಅವೈಜ್ಞಾನಿಕ ಚರಂಡಿ ನಿರ್ಮಾಣ ಮತ್ತು ಏಕಾಏಕಿ ಗಾಳಿ ಮಳೆ ಜೊತೆ ಕೆಸರು ಮಿಶ್ರಿತ ನೀರು ಬಂದ ಕಾರಣ ತಗ್ಗು ಪ್ರದೇಶದ ಅಂಗಡಿಗಳು ಮನೆಗಳು ಜಲಾಮಯವಾಗಿದೆ.

 

kiniudupi@rediffmail.com

No Comments

Leave A Comment