.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........
ಡೊನಾಲ್ಡ್ ಟ್ರಂಪ್ ಮಾತು ಕೇಳಿ ಪಾಕಿಸ್ತಾನದ ವಿರುದ್ಧ ಕದನ ವಿರಾಮ ಘೋಷಿಸಿದ ಮೋದಿಯವರ ನಡೆ ಎಷ್ಟು ಸರಿ- ಸುರೇಶ್ ಶೆಟ್ಟಿ ಬನ್ನಂಜೆ
ಉಡುಪಿ:ಪಹಲ್ಗಾಮ್ ನಲ್ಲಿ ಭಾರತದ ಪ್ರವಾಸಿಗರನ್ನು ಗುರಿಯಾಗಿಸಿ ಕೊಲೆ ಮಾಡಿದಂತ ಪಾಕ್ ಭಯೋತ್ಪಾದಕರನ್ನು ಸದೆ ಬಡಿದ ಆಪರೇಷನ್ ಸಿಂಧೂರ ಯಶಸ್ವಿಯಾಗಿ ಪಾಕಿಸ್ತಾನದ ದುಷ್ಕರ್ಮಿಗಳನ್ನು ನಾಶ ಮಾಡಿ ಅವರ ಬಂಕರ್ ಗಳನ್ನು ಹೊಡೆದುರುಳಿಸಿ ಪಾಕಿಸ್ತಾನವನ್ನೇ ನಡುಗಿಸಿದ ನಮ್ಮ ಭಾರತೀಯ ಸೈನ್ಯಕ್ಕೆ ದೊಡ್ಡ ಸೆಲ್ಯೂಟ್. ಇಡೀ ಭಾರತ ದೇಶವೇ ಭಾರತೀಯ ಸೇನೆಯ ಜೊತೆಗಿದ್ದು ಪಾಕಿಸ್ತಾನವನ್ನು ಅಲ್ಲಿನ ಭಯೋತ್ಪಾದಕನೇ ಕೃತ್ಯವನ್ನು ಅಡಗಿಸಲು ಮುನ್ನುಗ್ಗಿದಂತಹ ಭಾರತೀಯ ಸೇನೆಯ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತಿರುವಾಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇವರ ಮಾತನ್ನು ಕೇಳಿ ಮಾನ್ಯ ಮೋದಿಯವರು ಪಾಕಿಸ್ತಾನದ ವಿರುದ್ಧ ಕದನ ವಿರಾಮ ಘೋಷಿಸಿದ್ದು ಎಷ್ಟು ಸರಿ.
ಭಾರತೀಯ ಸೇನೆಯ ಎಲ್ಲಾ ಅಧಿಕಾರಿಗಳನ್ನು ಹಾಗೂ ಸರ್ವ ಪಕ್ಷ ಸಭೆ ಕರೆದು ಕದನ ವಿರಾಮ ಘೋಷಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸ ಬಹುದಿತ್ತು ಆದರೆ ಏಕಾಏಕಿಯಾಗಿ ಈ ತೀರ್ಮಾನ ಕೈಗೊಂಡಿರುವುದು ಸರಿಯಲ್ಲ .ಅಷ್ಟು ಮಾತ್ರವಲ್ಲದೆ ಪಾಕಿಸ್ತಾನವನ್ನು ಕೂಡ ಶಕ್ತಿಶಾಲಿ ರಾಷ್ಟ್ರವೆಂದು ಅಮೆರಿಕದ ಅಧ್ಯಕ್ಷರು ಹೇಳುತ್ತಿದ್ದಾರೆಂದರೆ ಇಂಥವರ ಮಾತನ್ನು ಕೇಳುವ ಅಗತ್ಯತೆ ನಮ್ಮ ದೇಶಕ್ಕೆ ಇತ್ತೆ .
ಎಂಬುದನ್ನು ಪ್ರಶ್ನೆಸಬೇಕಾಗಿದೆ ಇಡೀ ಪಾಕಿಸ್ತಾನವನ್ನು ನಡುಗಿಸಿ ಅಲ್ಲಿನ ಭಯೋತ್ಪಾದಕರ ಹುಟ್ಟಡಗಿಸಿದ
ನಮ್ಮ ಭಾರತ ದೇಶದ ಸೈನಿಕರಿಗೆ ಅಭಿನಂದನೆಗಳು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಬನ್ನಂಜೆ ಇವರು ತಿಳಿಸಿರುತ್ತಾರೆ.