ಶ್ವೇತಭವನದಲ್ಲಿ ಪಾಕ್ ಸೇನಾ ಮುಖ್ಯಸ್ಥ ಮುನೀರ್ ಗೆ ಟ್ರಂಪ್ ಔತಣ: ಮೋದಿ ಆಲಿಂಗನಕ್ಕೆ ದೊಡ್ಡ ಹೊಡೆತ - ಕಾಂಗ್ರೆಸ್....
ಉಡುಪಿ ಬನ್ನಂಜೆ ಶ್ರೀ ಶನಿ ಕ್ಷೇತ್ರ ; ನೂತನ ಚಂದ್ರ ಮಂಡಲ ರಥದ ಶೋಭಾ ಯಾತ್ರೆ
ಉಡುಪಿ: ಮೇ 25 ; ಉಡುಪಿ ಬನ್ನಂಜೆ ಶ್ರೀ ಶನಿ ಕ್ಷೇತ್ರ ದಲ್ಲಿ ನೆಲೆ ನಿಂತಿರುವ ಶ್ರೀ ಶನಿ ದೇವರ 23 ಅಡಿ ಎತ್ತರದ ಏಕಶಿಲಾ ವಿಗ್ರಹದ ಸನ್ನಿಧಿಯಲ್ಲಿ ಪೂಜ್ಯ ಶ್ರೀ ಬನ್ನಂಜೆ ರಾಘವೇಂದ್ರ ತೀರ್ಥ ಶ್ರೀಪಾದರ ದಿವ್ಯ ಉಪಸ್ಥಿಯಲ್ಲಿ ಮೇ 24 ರಂದು ನೂತನ ಚಂದ್ರ ಮಂಡಲ ರಥದ ಶೋಭಾ ಯಾತ್ರೆ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಪ್ರಾರ್ಥನೆ ಗೈದು ಮುಖ್ಯ ರಸ್ತೆಯಾಗಿ ಸಾಗಿ ಬಂದು ಶ್ರೀ ಶನಿ ಕ್ಷೇತ್ರ ಕ್ಕೆ ಬಂದು ತಲುಪಿತು .
ಚಂದ್ರ ಮಂಡಲ ರಥದ ಶೋಭಾ ಯಾತ್ರೆಯಲ್ಲಿ ತಟ್ಟೀರಾಯ , ಕೀಲುಕುದುರೆ , ಬಿರಿದವಾಳಿ , ಚಂಡೆವಾದನ , ಕುಣಿತ ಭಜನೆ , ಶ್ರೀ ಮದ್ವಾಚಾರ್ಯ ಮೂರ್ತಿ , ಮಂಗಳವಾದ್ಯ ದೊಂದಿಗೆ ನೂರಾರು ಭಕ್ತರೂ ಮುಖ್ಯರಸ್ತೆಯಲ್ಲಿ ಮೆರವಣಿಗೆ ಸಾಗಿ ಬಂದು ಶನಿ ಕ್ಷೇತ್ರ ಕ್ಕೆ ಬಂದು ತಲುಪಿತು .
ಕೊರಂಗ್ರಪಾಡಿ ಕುಮಾರಗುರು ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ಪೂಜಾ ಕಾರ್ಯಗಳಾದ ರಥಶುದ್ಧಿ ರಥಾದಿವಸ ,ರಥ ಸಮರ್ಪಣೆ ಪೂಜೆಗಳನ್ನು ನೆರವೇರಿಸಿದರು. ದೇವಳದ ಪ್ರಧಾನ ಅರ್ಚಕರಾದ ಸತ್ಯನಾರಾಯಣ ಆಚಾರ್ಯ , ವಿಜಯಲಕ್ಷ್ಮೀ ಆಚಾರ್ಯ , ಪ್ರಹ್ಲಾದ ಆಚಾರ್ಯ ,ಪೂರ್ಣಿಮಾ ಆಚಾರ್ಯ , ಯತೀಶ್ ಆಚಾರ್ಯ ಹಾಗೂ ನೂರಾರು ಭಕ್ತರೂ ಉಪಸಿತರಿದ್ದರು.
ಮೇ 26 ಸಗ್ರಹಮಖ ಶನಿಶಾಂತಿ , ನರಸಿಂಹ ಯಾಗ , ಶನೈಶ್ವರ ಉತ್ಸವ , ಪಲ್ಲಪೂಜೆ , ಸಾರ್ವಜನಿಕ ಅನ್ನಸಂತರ್ಪಣೆ , ಸಂಜೆ ಚಕ್ರಾಬ್ದ ಮಂಡಲ ಪೂಜೆ ಬಳಿಕ ನೂತನ ರಥದಲ್ಲಿ ಶ್ರೀ ಶನೈಶ್ವರ ದೇವರ ರಥೋತ್ಸವ ನಡೆಯಿತು.