ಉಡುಪಿ ಸಮೀಪದ ಹೆಬ್ರಿಯಲ್ಲಿನ ಮುದ್ರಾಡಿಯ ಗಣಪತಿ ದೇವಸ್ಥಾನದ ಎದುರು ರಸ್ತೆಯ ಪಕ್ಕದಲ್ಲಿ ನಿಲ್ಸ್ ಕಲ್ ಸಮಾಧಿ ಇರುವುದನ್ನು ಕ್ಷೇತ್ರ ಪರಿವೀಕ್ಷಣ ಆಸಕ್ತಿ ಹೊಂದಿದ ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೆಬೆಟ್ಟು ಅವರು ಶುಭ ಕಾರ್ಯಕ್ರಮದ ನಿಮಿತ್ತ ಮುದ್ರಾಡಿಯ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಅಲ್ಲಿ ಕ್ಷೇತ್ರವನ್ನು ವೀಕ್ಷಿಸುತ್ತಿರುವಾಗ ನಿಲ್ಸ್
ಉಡುಪಿ:06.07.2025ರ ಭಾನುವಾರದ೦ದು ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ ಮಠ,ಉಡುಪಿ ಇಂದು ಪ್ರಥಮೈಕಾದಶಿ ಪ್ರಯುಕ್ತ ಶ್ರೀಕೃಷ್ಣ ಮಠದ ಭೋಜನಶಾಲೆಯಲ್ಲಿ ಶ್ರೀ ಪುತ್ತಿಗೆ ಪರ್ಯಾಯ ಉಭಯ ಶ್ರೀಪಾದರು ಸಾವಿರಾರು ಭಕ್ತರಿಗೆ ತಪ್ತ ಮುದ್ರಾಧಾರಣೆ ನೆರವೇರಿಸಿದರು. ಅದೇ ರೀತಿಯಲ್ಲಿ ಕಾಣಿಯೂರು ಮಠದಲ್ಲಿ ಶ್ರೀವಿದ್ಯಾವಲ್ಲಭ ತೀರ್ಥಶ್ರೀಪಾದರು ಮತ್ತು ಕೃಷ್ಣಾಪುರಮಠದಲ್ಲಿ ಶ್ರೀವಿದ್ಯಾಸಾಗರ ತೀರ್ಥಶ್ರೀಪಾದರು ಹಾಗೂ
ಗುಜರಾತ್ನ ಅಹಮದಾಬಾದ್ನಲ್ಲಿ ಗುರುವಾರ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಕೇರಳದ ಪುಲ್ಲಾಡ್ ಮೂಲದ ರಂಜಿತಾ ಗೋಪಕುಮಾರ್ ಸಾವನ್ನಪ್ಪಿದ್ದಾರೆ. ಇವರ ಸಾವನ್ನು ಜಿಲ್ಲಾಧಿಕಾರಿಗಳು ಧೃಡಪಡಿಸಿದ್ದು, ಇಡೀ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿದೆ. ರಂಜಿತಾ ಪತ್ತನಂತಿಟ್ಟ ಜಿಲ್ಲೆಯಲ್ಲೇ ಸರ್ಕಾರಿ ಉದ್ಯೋಗದಲ್ಲಿದ್ದರು. ಆದರೆ ತಮ್ಮ ಸ್ವಂತ ಮನೆ ಹೊಂದುವ ಕನಸನ್ನು ನನಸಾಗಿಸಿಕೊಳ್ಳಲು, ವಿದೇಶದಲ್ಲಿ ಕೆಲಸ
ಮಳೆ ಧರೆಗೆ ಬಿತ್ತೇ೦ದರೆ ಸಾಕು ನೆಲದಡಿಯಿ೦ದ ಕೊಳೆತ ಮಣ್ಣಿನ ಸಾರದಿ೦ದಾಗಿ ಹುಟ್ಟಿ ಬರುವುದೇ ಕಲ್ಲಣಬೆ(ಲಾ೦ಬು)ಯಾಗಿದೆ. ಸುಮಾರು 40ವರುಷದ ಹಿ೦ದೆ ಈ ಲಾ೦ಬಿನ ದರ ಸೇರಿಗೆ 5 ರೂಪಾಯಿದಾಗಿತ್ತು. ಇದೀಗ ಚಿನ್ನದ ಏರಿಕೆಯಾದ೦ತೆ ಈ ಕಲ್ಲಣಬೆಯ ದರವೂ ಮಾರುಕಟ್ಟೆಯಲ್ಲಿ ಏರಿಕೆಯಾಗಿದೆ. ಕಲ್ಲಣಬೆಯು ಕೊ೦ಕಣಿ ಜನರಿಗೆ ಪ್ರಿಯವಾದ ವಿಟಮಿನ್ ಭರಿತ ಸಸ್ಯಹಾರ. ಇದರ ಪದಾರ್ಥವನ್ನು
ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಹಲವಾರು ಅಕ್ರಮ ಕಟ್ಟಡಗಳು ನಿರ್ಮಾಣವಾಗುತ್ತಿದೆ. ಸರಿಯಾದ ಸೆಟ್ ಬ್ಯಾಕ್ ಇಲ್ಲದೆ ಉಡುಪಿ ನಗರ ಸಭಾ ವ್ಯಾಪ್ತಿಯಲ್ಲಿ ಬನ್ನಂಜೆ ಹಾಗೂ ಸಿರಿಬೀಡು ವಾರ್ಡ್ ನಲ್ಲಿ ರಾಷ್ಟ್ರೀಯ ಹೆದ್ದಾರಿ 169A ಇದರ ಪಕ್ಕದಲ್ಲಿ ಕಟ್ಟಡಗಳು ನಿರ್ಮಾಣವಾಗುತ್ತಿದೆ. ಇದಕ್ಕೆ ಸಮರ್ಪಕವಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲ . ಉಡುಪಿಯ
ಮಂಗಳೂರು:ಮೇ.28,ಕಾರ್ಯಕ್ರಮವೊಂದರ ಫೋಟೊಗ್ರಾಫಿಗೆಂದು ಕಾರಿನಲ್ಲಿ ತೆರಳುತ್ತಿದ್ದ ಫೋಟೊಗ್ರಾಫರ್ ಕಾರೊಂದು ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕ ಇದ್ದ ತೋಡಿಗೆ ಮಗುಚಿ ಬಿದ್ದ ಘಟನೆ ಇಂದು ಮುಂಜಾನೆ ನಡೆದಿದೆ. ಅಪಘಾತದಲ್ಲಿ ಕಾರು ಚಾಲಾಯಿಸುತ್ತಿದ್ದ ಫೋಟೊಗ್ರಾಫರ್ ಸೂರ್ಯ ನಾರಾಯಣ (48)ಮೃತಪಟ್ಟಿದ್ದಾರೆ. ಸೂರ್ಯನಾರಾಯಣ ಅವರು ಪಣಂಬೂರು ಬಳಿಯ ನಂದೀಕೇಶ್ವರ ದೇವಸ್ಥಾನದಲ್ಲಿ ನಡೆಯುವ ಕಾರ್ಯಕ್ರಮದ ಫೋಟೊಗ್ರಾಫಿಗೆಂದು ತನ್ನ ಕಾರಲ್ಲಿ ಹೊರಟಿದ್ದರು.
ಉಡುಪಿ: ಮೇ 25 ; ಉಡುಪಿ ಬನ್ನಂಜೆ ಶ್ರೀ ಶನಿ ಕ್ಷೇತ್ರ ದಲ್ಲಿ ನೆಲೆ ನಿಂತಿರುವ ಶ್ರೀ ಶನಿ ದೇವರ 23 ಅಡಿ ಎತ್ತರದ ಏಕಶಿಲಾ ವಿಗ್ರಹದ ಸನ್ನಿಧಿಯಲ್ಲಿ ಪೂಜ್ಯ ಶ್ರೀ ಬನ್ನಂಜೆ ರಾಘವೇಂದ್ರ ತೀರ್ಥ ಶ್ರೀಪಾದರ ದಿವ್ಯ ಉಪಸ್ಥಿಯಲ್ಲಿ ಮೇ 24 ರಂದು ನೂತನ ಚಂದ್ರ ಮಂಡಲ
ಕಲ್ಯಾಣಪುರ: ಶ್ರೀಕ್ಷೇತ್ರ ಶ್ರೀ ವೆಂಕಟರಮಣ ದೇವಸ್ಥಾನವು ಕರಾವಳಿ ಕರ್ನಾಟಕ ರಾಜ್ಯದ ಉಡುಪಿಯಿಂದ ಸುಮಾರು ಆರು ಕಿಮೀ ದೂರದಲ್ಲಿರುವ ಕಲ್ಯಾಣಪುರ ಗ್ರಾಮದಲ್ಲಿದೆ. ‘ಸುವರ್ಣ’ ನದಿಯ ದಡದಲ್ಲಿ ಶ್ರೀ ವೆಂಕಟರಮಣ ದೇವರು ಪ್ರತಿಷ್ಠಿತರಾಗಿದ್ದಾರೆ. ಈ ದೇವಸ್ಥಾನವು ಸುಮಾರು 500 ವರ್ಷಗಳ ಇತಿಹಾಸವನ್ನು ಹೊಂದಿದೆ ಮತ್ತು ಜಿಎಸ್‌ಬಿ ಸಮುದಾಯಕ್ಕೆ ಸೇರಿದ 18 ಪೇಟೆ ದೇವಸ್ಥಾನಗಳಲ್ಲಿ
ಉಡುಪಿ:ಮೇ.20, ಉಡುಪಿಯಾದ್ಯಂತ ಭಾರೀ ಗಾಳಿ ಮಳೆಯಾಗುತ್ತಿದ್ದು ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನಗರದಲ್ಲಿ ಭಾರಿ ಮಳೆಯಿಂದಾಗಿ ಕೃತಕ ನೆರೆ ಸೃಷ್ಟಿಯಾಗಿದೆ. ಹವಾಮಾನ ಇಲಾಖೆ ಇಂದು ಮತ್ತು ನಾಳೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ಸೂಚನೆ ರವಾನೆ ಮಾಡಲಾಗಿದೆ. ಅದರಂತೆ ಇಂದು ಮುಂಜಾನೆಯಿಂದಲೇ ವರ್ಷಧಾರೆ ಆಗುತ್ತಿದೆ. ಸತತ
ರತ್ನಗಿರಿ: ಮೇ 19: ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಜಗಬುಡಿ ನದಿಗೆ ಕಾರು ಉರುಳಿ ಬಿದ್ದ ಪರಿಣಾಮ ಐವರು ಸಾವನ್ನಪ್ಪಿರುವ ಘಟನೆ ಸೋಮವಾರ ಮುಂಜಾನೆ ನಡೆದಿದೆ. ಮುಂಬೈ-ಗೋವಾ ಹೆದ್ದಾರಿಯಲ್ಲಿ ಮುಂಬೈನಿಂದ ದೇವ್ರುಖ್ಗೆ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಕಾರಿನ ಚಾಲಕನಿಗೆ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವರದಿಗಳ ಪ್ರಕಾರ, ಬೆಳಗ್ಗೆ