37 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ; 26 ಅಭ್ಯರ್ಥಿಗಳು ಅವಿರೋಧ ಆಯ್ಕೆ....ಮಾರ್ಚ್ 19ರ೦ದು ಚಾ೦ದ್ರಮಾನ ಯುಗಾದಿಯ ದಿನವಾದ ಗುರುವಾರದ೦ದು ಉಡುಪಿ ಶ್ರೀಲಕ್ಷ್ಮೀ ವೆ೦ಕಟರಮಣ ದೇವಸ್ಥಾನದ ಪೂಜಾ ಪರ್ಯಾಯ ಹಸ್ತಾ೦ತರ...

ಬೆಂಗಳೂರು: ಸಮಗ್ರ ಔಷಧ ಸೇವೆ ಒದಗಿಸುತ್ತಿರುವ ನಿಮ್ಹಾನ್ಸ್ ಸಂಸ್ಥೆ ಮಾದರಿಯಾಗಿದೆ. ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮದ ಪ್ರಚಾರದಲ್ಲಿ ಯೋಗ ಮತ್ತು ಆಯುರ್ವೇದದ ಅಪ್ಲಿಕೇಶನ್ ಅನುಕರಣೆ ಯೋಗ್ಯವಾಗಿದೆ ಎಂದು ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಹೇಳಿದ್ದಾರೆ. ನಿಮ್ಹಾನ್ಸ್ (ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋಸೈನ್ಸ್) ನ ಇಂಟಿಗ್ರೇಟಿವ್ ಮೆಡಿಸಿನ್ ಸೇವೆಗಳು

ಗದಗ: ರಾಜ್ಯದಲ್ಲಿ ಆತ್ಮಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಶುಕ್ರವಾರ ಗದಗನ ಪಲ್ಲವಿ ಲಾಡ್ಜ್​ನಲ್ಲಿ ನಿರ್ಮಿತಿ ಕೇಂದ್ರದ ಇಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಗದಗ ನಗರದ ನಿವಾಸಿಯಾಗಿರುವ ಇಂಜಿನಿಯರ್ ಶಂಕರಗೌಡ ಪಾಟೀಲ್(54) ಅವರು ಇಂದು ಬೆಳಗ್ಗೆ 7.30ಕ್ಕೆ ಮನೆಯಿಂದ ಹೊರಬಂದಿದ್ದು, ನಗರದ ಪಲ್ಲವಿ ಲಾಡ್ಜ್​ನ ರೂಮ್ ನಂಬರ್ 513ರಲ್ಲಿ ನೇಣುಬಿಗಿದುಕೊಂಡು

ಉಡುಪಿ:ಜ.01: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ನೂತನ ಅಧ್ಯಕ್ಷರಾಗಿ ಎಂ.ಎ ಮೌಲಾ ಉಡುಪಿ ಇಂದು ಆಯ್ಕೆಯಾಗಿದ್ದಾರೆ. ಉಡುಪಿಯ ಯು.ಬಿ.ಎಂ.ಸಿ. ಸಭಾಂಗಣದಲ್ಲಿ ಇಂದು ನಡೆದ 2025-26ನೇ ಸಾಲಿನ ಮಹಾಸಭೆಯಲ್ಲಿ ಎಂ.ಎ ಮೌಲಾ ಅವರನ್ನು ಮುಂದಿನ 2 ವರ್ಷಗಳ ಅವಧಿಗೆ ಒಕ್ಕೂಟದ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಉಡುಪಿಯ ಖ್ಯಾತ ಉದ್ಯಮಿಯಾಗಿರುವ ಎಂ.ಎ

ಮಂಗಳೂರು: ನಗರದ ಸಮೀಪ ಅರ್ಕುಳ ಬಳಿ ರಸ್ತೆ ಅಪಘಾತದಲ್ಲಿ ಯುವ ಕಲಾವಿದ, ಬಿಎಸ್‌ಡಬ್ಲ್ಯೂ ವಿದ್ಯಾರ್ಥಿ ಸ್ಥಳದಲ್ಲೇ ಅಸುನೀಗಿದ ಘಟನೆ ಸಂಭವಿಸಿದೆ. ವಿಟ್ಲ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಪ್ರವೀತ್ ಕುಮಾ‌ರ್ (22) ಮೃತಪಟ್ಟ ವಿದ್ಯಾರ್ಥಿ ಎಂದು ತಿಳಿಯಲಾಗಿದೆ.ಬೆಳ್ತಂಗಡಿ ದೇಲಂತಬೆಟ್ಟು ನಿವಾಸಿ, ಪ್ರವೀತ್ ಯಕ್ಷಗಾನ ಕಲಾವಿದನಾಗಿದ್ದಾನೆ. ಅರ್ಕುಳ ಸಮೀಪ ಬೈಕ್‌ ರಸ್ತೆಗೆ ಬಿದ್ದಿದ್ದು

ಬೆಂಗಳೂರು: ರಾಜ್ಯಜದಲ್ಲಿ ಹೊಸ ವರ್ಷಾಚರಣೆ ಬೆನ್ನಲ್ಲೇ ಚಾಮರಾಜನಗರ ಮತ್ತು ಮಾಗಡಿಯಲ್ಲಿ ಸಂಭವಿಸಿದ 2 ಪ್ರತ್ಯೇಕ ಅಪಘಾತಗಳಲ್ಲಿ ಐದು ಮಂದಿ ಸಾವನ್ನಪ್ಪಿದ್ದಾರೆ. ಚಾಮರಾಜ ನಗರದಲ್ಲಿ ಹೊಸ ವರ್ಷಾಚರಣೆಯ ಸಂಭ್ರಮ ಮುಗಿಸಿ ಹಿಂತಿರುಗುವಾಗ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಕೊಡಸೋಗೆ ಬಳಿ ಇಂದು ಮುಂಜಾನೆ ಈ ಘಟನೆ

ಸಿಯೋಲ್:ಡಿ.31: ದಕ್ಷಿಣ ಕೊರಿಯಾ ನ್ಯಾಯಾಲಯವು ಅಧ್ಯಕ್ಷ ಯೂನ್ ಸುಕ್ ಯೋಲ್ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಿ ಆದೇಶ ಹೊರಡಿಸಿದೆ. ಡಿಸೆಂಬರ್ 3 ರಂದು ಸಮರ ಕಾನೂನನ್ನು ಹೇರುವ ಅವರ ನಿರ್ಧಾರದ ಮೇಲೆ ಅಧಿಕಾರದಿಂದ ಅಮಾನತುಗೊಳಿಸಲಾಯಿತು. ಅಮಾನತುಗೊಂಡಿರುವ ಅಧ್ಯಕ್ಷ ಯೂನ್ ಸುಕ್ ಯೋಲ್ ವಿರುದ್ಧ ದಕ್ಷಿಣ ಕೊರಿಯಾ ನ್ಯಾಯಾಲಯವು ಬಂಧನ ವಾರಂಟ್

ಉಡುಪಿ:ಕಾರಿನಲ್ಲಿ ಎಂಡಿಎಂಎ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಉಡುಪಿ ತಾಲೂಕು ಕೊರಂಗ್ರಪಾಡಿ ಗ್ರಾಮದ ಕೆಮ್ತೂರು ರೈಲ್ವೇ ಸೇತುವೆ ಬಳಿ ರೆಡ್ ಹ್ಯಾಂಡ್ ಆಗಿ ಪೊಲೀಸರು ಬಂಧಿಸಿದ್ದು, 20,11,900 ರೂ. ಮೌಲ್ಯದ ಸೊತ್ತನ್ನು ವಶಪಡಿಸಿಕೊಂಡಿದ್ದಾರೆ. ಕೋಟೆ ಗ್ರಾಮದ ಕಟಪಾಡಿ ಕಾಪು ನಿವಾಸಿ ಅಕ್ಬರ್ ಮುಹಮ್ಮದ್ ಬ್ಯಾರಿ (32) ಹಾಗೂ ಕಾಪು

ಉಡುಪಿ: ಅದಮಾರು ಮಠದ ಶ್ರೀಕೃಷ್ಣ ಸೇವಾ ಬಳಗದಿಂದ ವಿಶ್ವಾರ್ಪಣಂ (ಚಿಂತನ, ಮಂಥನ, ಸಂವಾದ) ಕಾರ್ಯಕ್ರಮದಡಿಯಲ್ಲಿ ಜ.4ರಂದು ಅಪರಾಹ್ನ 2.30 ಗಂಟೆಗೆ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಗೆ ಗುರುವಂದನೆ ಕಾರ್ಯಕ್ರಮವು ಅದ್ದೂರಿಯಿ೦ದ ನಡೆಯಲಿದೆ. ಉಡುಪಿಯ ಶ್ರೀಪೂರ್ಣಪ್ರಜ್ಞ ಅಡಿಟೋರಿಯಂನಲ್ಲಿ ನಡೆಯುವ ಸಮಾರಂಭದಲ್ಲಿ ಅದಮಾರು ಮಠದ ಹಿರಿಯ ಯತಿ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು,

ಉಡುಪಿಯ ತೆ೦ಕಪೇಟೆಯ ನಿವಾಸಿ ಶ್ರೀದೇವಾನ೦ದ ಭಟ್ ಮತ್ತು ಶ್ರೀಮತಿ ದೀಪಿಕಾ ಭಟ್ ದ೦ಪತಿಗಳ ಸುಪುತ್ರಿ ಕು.ಧನುಷಾ ಭಟ್ ರವರು ಇತ್ತೀಚಿಗೆ ನಡೆದ ಸಿಎ ಪರೀಕ್ಷೆಯಲ್ಲಿ ಉತ್ತಮ ಅ೦ಕವನ್ನುಗಳಿಸಿ ಉತ್ತೀರ್ಣರಾಗಿದ್ದಾರೆ. ಇವರು ಉಡುಪಿಯ ಪ್ರಸಿದ್ಧ ಸಿಎ ಗುಜ್ಜಾಡಿ ಪ್ರಭಾಕರ ನಾಯಕ್ ರವರ ಮಾರ್ಗದರ್ಶನದಲ್ಲಿ "ಗುಜ್ಜಾಡಿ ನಾಯಕ್ ಅಸೋಸಿಯೇಟ್ಸ್" ನಲ್ಲಿ ಆರ್ಟಿಕಲ್