ಹರಿಯಾಣ, ಗೋವಾ, ಲಡಾಖ್‌ಗೆ ಹೊಸ ರಾಜ್ಯಪಾಲರ ನೇಮಕ....Poster ಅಂಟಿಸುವ ಮುನ್ನ ಎಚ್ಚರ; Bengaluru Auto Driversಗೆ ಮತ್ತೆ ಶಾಕ್ ಕೊಟ್ಟ RTO ಅಧಿಕಾರಿಗಳು! 5 ಸಾವಿರ ದಂಡ!
ಚಕ್ರತೀರ್ಥ ಸಗ್ರಿ ಶ್ರೀಉಮಾಮಹೇಶ್ವರ ದೇವಸ್ಥಾನದ ನೂತನ ಧ್ವಜ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ,ರಥೋತ್ಸವ,ಶೃವೋತ್ಸವ ಕಾರ್ಯಕ್ರಮದ ಆಮ೦ತ್ರಣ ಬಿಡುಗಡೆ
ಉಡುಪಿ:ಉಡುಪಿ ಸಮೀಪದ ಚಕ್ರತೀರ್ಥ ಸಗ್ರಿಯಲ್ಲಿನ ಇತಿಹಾಸ ಪ್ರಸಿದ್ಧ ಶ್ರೀಉಮಾಮಹೇಶ್ವರ ದೇವಸ್ಥಾನದ ನೂತನ ಧ್ವಜ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ,ರಥೋತ್ಸವ,ಶೃವೋತ್ಸವ ಕಾರ್ಯಕ್ರಮದ ಆಮ೦ತ್ರಣ ಪತ್ರಿಕೆಯನ್ನು ಸೋಮವಾರದ೦ದು ಉಡುಪಿಯ ಶ್ರೀಕಾಣಿಯೂರು ಮಠಾಧೀಶರ ಶ್ರೀವಿದ್ಯಾವಲ್ಲಭ ತೀರ್ಥಶ್ರೀಪಾದರು ವಿದ್ಯುಕ್ತವಾಗಿ ಬಿಡುಗಡೆಮಾಡಿ ಶುಭಹಾರೈಸಿದರು.
ದೇವಸ್ಥಾನದ ಆಡಳಿತ ಅಧ್ಯಕ್ಷರಾದ ರುದ್ರಯ್ಯ ಕೆ ಆಚಾರ್ಯ, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ, ಮುರಹರಿ ಕೆ ಆಚಾರ್ಯ, ಅಶ್ವಥ್ ಆರ್ ಆಚಾರ್ಯ, ದಿನೇಶ್ ಅಮೀನ್,ಆನ೦ದ ಶೇರಿಗಾರ್ ಜೀರ್ಣೋದ್ದಾರ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.