ನವೆ೦ಬರ್ 26ರ ಗುರುವಾರ ಲಕ್ಷದೀಪೋತ್ಸವ ಮತ್ತು 27ರ ಶುಕ್ರವಾರದ೦ದು ಓಕುಳಿಯು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವರ್ಷ೦ಪತ್ರಿಯ ವಾಡಿಕೆಯ೦ತೆ ಲಕ್ಷದೀಪೋತ್ಸವವು ಜರಗಲಿದೆ....

ಇರಾನ್‌ನಲ್ಲಿ ಮರ್ಯಾದಾ ಹತ್ಯೆ: ವಿಷವುಣಿಸಿ, ಉಸಿರುಗಟ್ಟಿಸಿ ಗರ್ಭಿಣಿ ಮಗಳನ್ನೇ ಕೊಂದ ಪೋಷಕರು!

ಇರಾನ್: 19 ವರ್ಷದ ಗರ್ಭಿಣಿ ಮಗಳನ್ನು ಆಕೆಯ ಪೋಷಕರೇ ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಯುವಕನೊಂದಿಗಿನ ಸಂಬಂಧದ ಬಗ್ಗೆ ತಿಳಿದ ನಂತರ ಕುಟುಂಬದವರು ಆಕೆಯ ಮೇಲೆ ಹಲ್ಲೆ ನಡೆಸಿ, ಮಾತ್ರೆಗಳನ್ನು ಬಲವಂತವಾಗಿ ನುಂಗಿಸಿ, ಬಳಿಕ ದಿಂಬಿನಿಂದ ಉಸಿರುಗಟ್ಟಿಸಿ ಕೊಂದಿದ್ದಾರೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ಆರೋಪಿಸಿವೆ.

ಹೆಲಿಯಾ ಫತ್ತಾಹಿ ಎಂದು ಗುರುತಿಸಲಾದ ಈ ಯುವತಿ, ಒಬ್ಬ ಯುವಕನೊಂದಿಗಿನ ಸಂಬಂಧದ ಪರಿಣಾಮವಾಗಿ ಎರಡು ತಿಂಗಳ ಗರ್ಭಿಣಿಯಾಗಿದ್ದಳು. ಕಳೆದ ವಾರ ಆಕೆ ಈ ವಿಷಯವನ್ನು ತನ್ನ ಕುಟುಂಬದವರಿಗೆ ತಿಳಿಸಿದಾಗ, ಆಕೆಯ ಪೋಷಕರು ತೀವ್ರ ಆಕ್ರೋಶಗೊಂಡಿದ್ದಾರೆ.

ಪೋಷಕರು ಆಕೆಗೆ ಸುಮಾರು 30 ಮಾತ್ರೆಗಳನ್ನು ಬಲವಂತವಾಗಿ ನುಂಗಿಸಿ ತೀವ್ರವಾಗಿ ಥಳಿಸಿದರು. ನಂತರ ದಿಂಬಿನಿಂದ ಉಸಿರುಗಟ್ಟಿಸಿ ಆಕೆಯನ್ನು ಕೊಲೆ ಮಾಡಿರುವುದಾಗಿ ಆರೋಪಿಸಿರುವ ಮಾನವ ಹಕ್ಕುಗಳ ಸಂಘಟನೆ ಈ ಘಟನೆಯನ್ನು ‘ಮರ್ಯಾದಾ ಹತ್ಯೆ’ ಎಂದು ಕರೆಯಲಾಗಿದೆ.

ನವೆಂಬರ್ 21ರಂದು ಪೋಷಕರು ನ್ಯಾಯಾಲಯಕ್ಕೆ ತೆರಳಿ ಮಗಳ ವಿರುದ್ಧ ದೂರು ದಾಖಲಿಸಲು ಪ್ರಯತ್ನಿಸಿದ್ದರು. ಮನೆಗೆ ಹಿಂದಿರುಗಿದ ಬಳಿಕ ಆಕೆಗೆ ಸುಮಾರು 30 ಮಾತ್ರೆಗಳನ್ನು ಬಲವಂತವಾಗಿ ನುಂಗಿಸಿದ್ದಾರೆ. ಇದರಿಂದಲೂ ಆಕೆ ಮೃತಪಟ್ಟಿಲ್ಲ ಎಂದು ತಿಳಿದಾಗ ದಿಂಬಿನಿಂದ ಉಸಿರುಗಟ್ಟಿಸಿ ಕೊಂದಿದ್ದಾರೆ ಎಂದು ಹೆಂಗಾವ್ ಮಾನವ ಹಕ್ಕುಗಳ ಸಂಘಟನೆ ತಿಳಿಸಿದೆ.

ಹತ್ಯೆ ಆರೋಪದ ಮೇಲೆ ತಂದೆ ವೊರಿಯಾ ಫತ್ತಾಹಿ ಮತ್ತು ತಾಯಿ ಲೀಲಾ ವೀಸ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಇಬ್ಬರೂ ತಮ್ಮ ಮಗಳ ಸಾವಿಗೆ ತಾವೇ ಕಾರಣ ಎಂದು ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಇರಾನ್‌ನ ಪೊಲೀಸ್ ಅಧಿಕಾರಿಗಳ ಪ್ರಕಾರ, ಮನೆಯೊಂದರಲ್ಲಿ ಅನುಮಾನಾಸ್ಪದ ಸಾವು ಸಂಭವಿಸಿರುವ ಬಗ್ಗೆ ಮಾಹಿತಿ ಬಂದಿತ್ತು. ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ನಡೆಸಿದಾಗ ಹತ್ಯೆ ನಡೆದಿರುವುದು ತಿಳಿದುಬಂದಿದೆ. ಬಳಿಕ ಯುವತಿಯ ಪೋಷಕರನ್ನು ಬಂಧಿಸಿ, ಪ್ರಕರಣವನ್ನು ನ್ಯಾಯಾಂಗ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ ಎಂದು ಇರಾನ್‌ವೈರ್ ವರದಿ ಮಾಡಿದೆ.

ಮಹಿಳೆಯರು ಮತ್ತು ಮಕ್ಕಳನ್ನು ಕೌಟುಂಬಿಕ ದೌರ್ಜನ್ಯದಿಂದ ರಕ್ಷಿಸಲು ಪರಿಣಾಮಕಾರಿ ಕಾನೂನುಗಳನ್ನು ಜಾರಿಗೊಳಿಸುವಲ್ಲಿ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ವಿಫಲವಾಗಿದೆ.

ಕಾನೂನಿನಲ್ಲಿರುವ ಲೋಪದೋಷಗಳು ಮತ್ತು ‘ಗೌರವ ಹತ್ಯೆ’ ಎಸಗುವವರಿಗೆ ವಿಧಿಸುವ ಸೌಮ್ಯ ಶಿಕ್ಷೆಗಳು, ಮಹಿಳೆಯರನ್ನು ವ್ಯವಸ್ಥಿತ ಹಿಂಸಾಚಾರಕ್ಕೆ ತುತ್ತಾಗುವಂತೆ ಮಾಡುತ್ತವೆ, ಆರೋಪಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಸಂಸ್ಕೃತಿಯನ್ನು ಹೆಚ್ಚಿಸುತ್ತಿವೆ ಎಂದು ಮಾನವ ಹಕ್ಕುಗಳ ಸಂಘಟನೆ ‘ಹೆಂಗಾವ್’ ಹೇಳಿದೆ.

No Comments

Leave A Comment