ನವೆ೦ಬರ್ 26ರ ಗುರುವಾರ ಲಕ್ಷದೀಪೋತ್ಸವ ಮತ್ತು 27ರ ಶುಕ್ರವಾರದ೦ದು ಓಕುಳಿಯು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವರ್ಷ೦ಪತ್ರಿಯ ವಾಡಿಕೆಯ೦ತೆ ಲಕ್ಷದೀಪೋತ್ಸವವು ಜರಗಲಿದೆ....

ಬೆಳಗಾವಿ: ಬೆಂಕಿ ಕೆನ್ನಾಲಿಗೆಗೆ 28 ಎಕರೆ ಕಬ್ಬು ಭಸ್ಮ; 1 ಕೋಟಿ ರೂ. ನಷ್ಟ, ರೈತರ ಬದುಕಿಗೆ ಬರಸಿಡಿಲು..!

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ನದಿ ಇಂಗಳಗಾವಿ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಕಬ್ಬಿನ ಹೊಲಗಳಿಗೆ ಬೆಂಕಿ ಹೊತ್ತಿಕೊಂಡು ಸುಮಾರು 28 ಎಕರೆ ಪ್ರದೇಶದ ಬೆಳೆ ಸುಟ್ಟು ಭಸ್ಮವಾಗಿದೆ.

ಈ ಅವಘಡದಿಂದ ಸುಮಾರು 1 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದ್ದು, ರೈತರ ಬದುಕಿಗೆ ಬರಸಿಡಿಲು ಬಡಿದಂತಾಗಿದೆ

ಸ್ಥಳೀಯ ರೈತರಾದ ಬಸಪ್ಪ ಚನ್ನಣ್ಣವರ, ಈರಪ್ಪ ಚನ್ನಣ್ಣವರ, ಗುರುಬಸು ತೇವರಮನಿ, ಚನಗೌಡ ರಾಚಗೌಡರ, ಅಪ್ಪಾಸಾಬ್ ಗಿರಿಮಲ್ಲಣ್ಣವರ ಮತ್ತು ರಾಮಣ್ಣ ಗಿರಿಮಲ್ಲಣ್ಣವರ ಅವರಿಗೆ ಸೇರಿದ ಕಬ್ಬಿನ ಗದ್ದೆಗಳಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ಹೊಲಗಳಾದ್ಯಂತ ವ್ಯಾಪಿಸಿದ್ದು, ಕಬ್ಬಿನ ಬೆಳೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಗ್ರಾಮಸ್ಥರ ನೆರವಿನೊಂದಿಗೆ ಬೆಂಕಿ ನಂದಿಸಲು ಪ್ರಯತ್ನಿಸಿದರೂ, ಅಷ್ಟರಲ್ಲಾಗಲೇ ಹೆಚ್ಚಿನ ಪ್ರಮಾಣದ ಬೆಳೆ ಬೆಂಕಿಗೆ ಆಹುತಿಯಾಗಿತ್ತು.

No Comments

Leave A Comment