Arnab ಬಳಿಕ ಮತ್ತೊಂದು ಇರುಸು 'ಮುರಸು': ನ.3ರಂದು ಆಂಧ್ರ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ!.....ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು: ಸಚಿವ ಅಶ್ವಿನಿ ವೈಷ್ಣವ್ ಚಾಲನೆ... 'ನಂದಿನಿ ಹಾಲು ದರ 8 ಅಲ್ಲ, ಗರಿಷ್ಠ 12 ರೂ ಏರಿಕೆ'; ರೊಚ್ಚಿಗೆದ್ದ ಗ್ರಾಹಕರು...

ಭೂ ಕಬಳಿಕೆ ಹಾಗೂ ವಂಚನೆ ಪ್ರಕರಣದ ತನಿಖೆಗೆ ಆಗ್ರಹ, ಪ್ರತಿಭಟನೆಯ ಎಚ್ಚರಿಕೆ

ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಶ್ರೀ ಕೃಷ್ಣಾ ಪುರ ಮಠದ ಹಾಗೂ ಸರ್ಕಾರದ ಸುಮಾರು ಎರಡೂವರೆ ಎಕರೆ ಜಮೀನನ್ನು ಷರತ್ತುಗಳನ್ನು ಉಲ್ಲಂಘಿಸಿ ಪರಭಾರೆ, ಅಕ್ರಮವಾಗಿ ಕಟ್ಟಡ ನಿರ್ಮಾಣ,ಕಂದಾಯ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರ, ನಗರ ಸಭೆ ಕಚೇರಿಗಳಿಂದ ಭೂಮಿಯ ದಾಖಲೆ ವಂಚನೆಯಿಂದ ತಿದ್ದುಪಡಿ ಮಾಡಿದರ ವಿರುದ್ಧ ವಿವಿಧ ಬ್ರಾಹ್ಮಣ ಸಂಘಟನೆಗಳ ಪ್ರಮುಖರು, ಧಾರ್ಮಿಕ ಮುಖಂಡರು ಜಿಲ್ಲಾಧಿಕಾರಿಗಳಿಗೆ ತನಿಖೆಗೆ ಆಗ್ರಹಿಸಿ ಮನವಿ ಸಲ್ಲಿಸಿದರು.

ಮಠದಿಂದ ಲೀಸಿಗೆ ಪಡೆದ ಜಾಗವನ್ನು “ಮದರ್ ಆಫ್ ಸಾರೋಸ್ ಚರ್ಚ್” ನವರು ನಕಲಿ ದಾಖಲೆಗಳೊಂದಿಗೆ ತಮ್ಮ ಹೆಸರಿಗೆ ಪಹಣಿ ಮಾಡಿಕೊಂಡು ವಂಚನೆ ಎಸಗಿರುತ್ತಾರೆ. ನಗರ ಪ್ರಾಧಿಕಾರದ ಎಲ್ಲಾ ನಿಯಮಾವಳಿಗಳನ್ನು ಗಾಳಿಗೆ ತೂರಿ, ಸರಕಾರಿ ಜಾಗವನ್ನು ಒತ್ತುವರಿ ಮಾಡಿ, ಏಕ ವಿನ್ಯಾಸ ಪಡೆದು, ಕಟ್ಟಡ ದುರಸ್ತಿಗೆ ಪರವಾನಿಗೆ ಪಡೆದು, ಹೊಸ ಕಟ್ಟಡಗಳನ್ನು ಕಟ್ಟಲು ಪ್ರಾರಂಭಿಸಿ ಅನ್ಯಾಯವೆಸಗಿರುತ್ತಾರೆ.

ಏಕ ವಿನ್ಯಾಸ ನಕ್ಷೆಯಲ್ಲಿ ಪ್ರಸ್ತುತ ಇರುವ ಕಟ್ಟಡಗಳನ್ನು ನಮೂದಿಸದೆ, ಸರಕಾರಿ ಜಾಗದ ಒತ್ತುವರಿಯನ್ನು ನಿರ್ಲಕ್ಷಿಸಿ, ರಸ್ತೆಯ ಅಗಲವನ್ನು ತಪ್ಪಾಗಿ ಬರೆದು, ರಸ್ತೆ ಅಗಲೀಕರಣವನ್ನು ಕೈ ಬಿಟ್ಟು ಮತ್ತು ಕಟ್ಟಡ ರೇಖೆಯನ್ನು ತೋರಿಸದೆ ಅನ್ಯಾಯ ಎಸಗಲಾಗಿದೆ. ಮಠದ ವತಿಯಿಂದ ಲೀಸ್ ಬಾಡಿಗೆ ಮೊತ್ತವನ್ನು ತಿರಸ್ಕರಿಸಿದ್ದು, ನ್ಯಾಯಾಲಯದಲ್ಲಿ ಈ ಅಕ್ರಮಗಳ ಬಗ್ಗೆ ವ್ಯಾಜ್ಯ ಹೂಡಲಾಗಿದೆ.

ಕಾನೂನು ಮೀರಿ ತಯಾರಿಸಿದ ಎಲ್ಲಾ ದಸ್ತಾವೇಜುಗಳು, ದಾಖಲೆಗಳು, ಮಂಜೂರಾತಿಗಳು ಮತ್ತು ಪರವಾನಿಗೆಗಳನ್ನು ರದ್ದುಪಡಿಸಬೇಕು. ಹಾಗೂ ಕೂಡಲೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದ ಪ್ರಮುಖರು ಇಲ್ಲವಾದಲ್ಲಿ ಮುಂದಿನ ಕೆ.ಡಿ.ಪಿ.ಸಭೆಯಂದು ಪ್ರತಿಭಟನೆಯ‌ ಎಚ್ಚರಿಕೆ ನೀಡಿದರು.

ಇದೇ ಸಂದರ್ಭದಲ್ಲಿ ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ ಅವರಿಗೂ ಮನವಿ ಸಲ್ಲಿಸಿದಾಗ ಮಾನ್ಯ ಶಾಸಕರು ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ವಿವಿಧ ಸಂಘಟನೆಗಳ ಪ್ರತಿನಿಧಿಗಳಾಗಿ ಬಾಲಾಜಿ ರಾಘವೇಂದ್ರ ಆಚಾರ್ಯ, ಕೃಷ್ಣ ರಾಜ ಬಲ್ಲಾಳ್, ರಾಘವೇಂದ್ರ ಕಲ್ಕೂರ, ಜಲಂಚಾರ್ ರಘುಪತಿ ತಂತ್ರಿ, ಮಧುಕರ ಮುದ್ರಾಡಿ, ರವಿಪ್ರಕಾಶ್ ಭಟ್, ಕೃಷ್ಣ ಮೂರ್ತಿ ಸೇವಾಧಾಮ, ಚಂದ್ರಕಾಂತ್ ಭಟ್, ಮಟ್ಟು ಲಕ್ಷ್ಮೀ ನಾರಾಯಣ ರಾವ್, ಜಯರಾಂ ಆಚಾರ್ಯ ಬೈಲೂರು, ಸಂದೀಪ್ ಮಂಜ, ಮೋಹನ್ ಭಟ್ ಮುಂತಾದವರು ಉಪಸ್ಥಿತರಿದ್ದರು.

No Comments

Leave A Comment