Arnab ಬಳಿಕ ಮತ್ತೊಂದು ಇರುಸು 'ಮುರಸು': ನ.3ರಂದು ಆಂಧ್ರ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ!.....ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು: ಸಚಿವ ಅಶ್ವಿನಿ ವೈಷ್ಣವ್ ಚಾಲನೆ...
'ನಂದಿನಿ ಹಾಲು ದರ 8 ಅಲ್ಲ, ಗರಿಷ್ಠ 12 ರೂ ಏರಿಕೆ'; ರೊಚ್ಚಿಗೆದ್ದ ಗ್ರಾಹಕರು...
ಪಂಚಕುಲ: ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದ ಹರ್ಯಾಣ ಶಾಲೆ ದಾಳಿ ಪ್ರಕರಣದ ಸಂತ್ರಸ್ಥ ಬಾಲಕಿ LKG ವಿದ್ಯಾರ್ಥಿನಿ ಪ್ರಾಣಾಪಾಯದಿಂದ ಪಾರಾಗಿದ್ದು ಚಿಕಿತ್ಸೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾಳೆ ಎಂದು ತಿಳಿದುಬಂದಿದೆ.
ಹರಿಯಾಣದ ಪಂಚಕುಲದಲ್ಲಿರುವ ಸಂಸ್ಕೃತಿ ಮಾಡೆಲ್ ಶಾಲೆಯಲ್ಲಿ 3ನೇ ತರಗತಿ ಬಾಲಕನಿಂದ ತೀವ್ರ ಹಲ್ಲೆಗೀಡಾಗಿ ಸಾವುಬದುಕಿನ ನಡುವೆ ಹೋರಾಡುತ್ತಿದ್ದ LKG ಬಾಲಕಿ ಕೊನೆಗೂ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಸದ್ಯ ಚಂಡೀಗಢದ ಪಿಜಿಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿಯ ಆರೋಗ್ಯ ಸ್ಥಿರವಾಗಿದ್ದು, ಚೇತರಿಕೆಯ ಲಕ್ಷಣಗಳು ಕಾಣಿಸುತ್ತಿವೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಅಕ್ಟೋಬರ್ 28ರಂದು ಸೆಕ್ಟರ್ 20ರ ಸರ್ಕಾರಿ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ಓದುತ್ತಿದ್ದ ಎಂಟು ವರ್ಷದ ಬಾಲಕ, ಕೆಜಿ ತರಗತಿಯ ಬಾಲಕಿಯನ್ನು ನಿನ್ನ ತಂದೆ ಕಾಯುತ್ತಿದ್ದಾರೆ ಎಂದು ನಂಬಿಸಿ ಆಕೆಯನ್ನು ಮೇಲಿನ ಮಹಡಿಗೆ ಕರೆದೊಯ್ದು ಖಾಲಿ ಕೊಠಡಿಗೆ ಕರೆದೊಯ್ದು ಭೀಕರವಾಗಿ ಹಲ್ಲೆ ನಡೆಸಿದ್ದ.
ಕಲ್ಲು ಮತ್ತು ಹೂವಿನ ಕುಂಡದಿಂದ ಹಲ್ಲೆ ನಡೆಸಿ, ಆಕೆಯ ತಲೆಯನ್ನು ಡೆಸ್ಕ್ಗೆ ಬಡಿದಿದ್ದ. ಬಾಲಕಿ ಪ್ರಜ್ಞೆ ಕಳೆದುಕೊಂಡ ನಂತರವೂ ಹಲ್ಲೆ ಮುಂದುವರೆಸಿದ್ದ. ಸಿಸಿಟಿವಿಯಲ್ಲಿ ಈ ಕೃತ್ಯ ಸೆರೆಯಾಗಿತ್ತು.
ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಐಸಿಯುನಲ್ಲಿ ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಬಾಲಕಿ ಆರೋಗ್ಯ ಸ್ಥಿರ
ಚಂಡೀಗಢದ ಪಿಜಿಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಕೆಯ ಆರೋಗ್ಯ ಸ್ಥಿರವಾಗಿದ್ದು, ಚೇತರಿಕೆಯ ಲಕ್ಷಣಗಳು ಕಾಣಿಸುತ್ತಿವೆ. ಬಾಲಕಿ ಬದುಕುಳಿದಿರುವುದೇ ದೊಡ್ಡ ಸಮಾಧಾನ ಎಂದು ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಸಂತ್ರಸ್ಥ ಆಕೆಯನ್ನು ಮೊದಲು ಪಂಚಕುಲದ ಸೆಕ್ಟರ್ 6ರ ನಾಗರಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯಗಳ ಗಂಭೀರತೆಯನ್ನು ಗಮನಿಸಿ ಹೆಚ್ಚಿನ ಚಿಕಿತ್ಸೆಗಾಗಿ ಚಂಡೀಗಢದ ಪಿಜಿಐ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಬಾಲಕಿಗೆ ಮುಖ ಹಾಗೂ ಮೂಗಿನ ಮೂಳೆಗಳಿಗೆ ಗಾಯಗಳಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ವೈದ್ಯಕೀಯ ಮೂಲಗಳ ಪ್ರಕಾರ, ಆಕೆಯ ಸ್ಥಿತಿ ಸದ್ಯ ಸ್ಥಿರವಾಗಿದೆ ಮತ್ತು ಪ್ರಾಣಾಪಾಯದಿಂದ ಹೊರಬಂದಿದ್ದಾಳೆ.
ಆಹಾರ ಸೇವಿಸಿದ ಬಾಲಕಿ
ಇನ್ನು ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿ ಇದೀಗ ಚೇತರಿಸಿಕೊಂಡಿದ್ದು, ತಾಯಿಯಿಂದ ಆಹಾರ ಸೇವಿಸುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಆರೋಪಿ ಬಾಲಕ ವೀಕ್ಷಣಾ ಗೃಹಕ್ಕೆ
ಪ್ರಕರಣದ ಆರೋಪಿ ಎಂಟು ವರ್ಷದ ಬಾಲಕನನ್ನು ಬಾಲ ನ್ಯಾಯ ಮಂಡಳಿ ಅಕ್ಟೋಬರ್ 31ರಂದು ಅಂಬಾಲಾದ ವೀಕ್ಷಣಾ ಗೃಹಕ್ಕೆ ಕಳುಹಿಸಲು ಆದೇಶಿಸಿದೆ ಎನ್ನಲಾಗಿದೆ.
ಈ ಕುರಿತು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದು, ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವವರೆಗೆ ಆತನನ್ನು ಸುರಕ್ಷಿತ ಸ್ಥಳದಲ್ಲಿ ಇರಿಸುವಂತೆ ಮಂಡಳಿ ಸೂಚಿಸಿದೆ. ಬಾಲಕನ ಮಾನಸಿಕ ಸ್ಥಿತಿಯನ್ನು ಪರಿಶೀಲಿಸಲು ವೈದ್ಯಕೀಯ ಮೌಲ್ಯಮಾಪನಕ್ಕೂ ಸೂಚಿಸಲಾಗಿದೆ.
ಶಾಲಾ ಆಡಳಿತದ ವಿರುದ್ಧ ಎಫ್ಐಆರ್, ಇಬ್ಬರು ಶಿಕ್ಷಕರ ಅಮಾನತು
ಶಾಲೆಯಲ್ಲಿ ಮಕ್ಕಳ ಮೇಲ್ವಿಚಾರಣೆಯಲ್ಲಿ ನಿರ್ಲಕ್ಷ್ಯ ನಡೆದಿರುವ ಸಾಧ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಶಾಲಾ ಆಡಳಿತದ ಲೋಪ ಕಂಡುಬಂದ ಹಿನ್ನೆಲೆಯಲ್ಲಿ ಪ್ರಾಂಶುಪಾಲರು, ತರಗತಿಯ ಉಸ್ತುವಾರಿ ಶಿಕ್ಷಕಿ ಮತ್ತು ಶಾಲೆಯ ಕಾವಲುಗಾರನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಶಿಕ್ಷಕರ ಕೊರತೆ
ಘಟನೆ ನಡೆದಾಗ ಶಿಕ್ಷಕರ ಕೊರತೆಯಿಂದ ಎರಡು ತರಗತಿಗಳ ಸುಮಾರು 80 ಮಕ್ಕಳನ್ನು ಒಬ್ಬರೇ ಶಿಕ್ಷಕರು ನೋಡಿಕೊಳ್ಳುತ್ತಿದ್ದರು ಎಂಬ ಅಂಶವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹರಿಯಾಣ ಶಿಕ್ಷಣ ಸಚಿವ ಮಹಿಪಾಲ್ ಧಾಂಡಾ ಪ್ರಕರಣದ ತನಿಖೆಗೆ ಸೂಚಿಸಿದ್ದು, ಪಂಚಕುಲ ಜಿಲ್ಲಾಡಳಿತವೂ ನಾಲ್ವರು ಸದಸ್ಯರ ಸಮಿತಿಯನ್ನು ರಚಿಸಿದೆ. ಬಾಲಕಿಯ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸುವುದಾಗಿ ತಿಳಿಸಿದೆ.