.........ನಾಡಿನ ಸಮಸ್ತ ಜನತೆಗೆ, ನಮ್ಮ ಎಲ್ಲಾ ಓದುಗರಿಗೆ,ನಮ್ಮ ಎಲ್ಲಾ ಅಭಿಮಾನಿಗಳಿಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ "ಕನ್ನಡರಾಜೋತ್ಸವ"ದ ಶುಭಾಶಯಗಳು .......
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಶಿಕ್ಷೆ ಕೊಡಿಸಿದ್ದ ತನಿಖಾಧಿಕಾರಿಗಳು ಸೇರಿ ರಾಜ್ಯ 6 ಅಧಿಕಾರಿಗಳಿಗೆ ಕೇಂದ್ರ ಗೃಹಮಂತ್ರಿ ದಕ್ಷತಾ ಪದಕ
ನವದೆಹಲಿ: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ತನಿಖೆ ನಡೆಸಿ, ಆರೋಪಿಗೆ ಶಿಕ್ಷೆ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಎಸ್‌ಐಟಿ (SIT) ಹಾಗೂ ಸಿಐಡಿ (CID) ವಿಭಾಗದ ಮೂವರು ಅಧಿಕಾರಿಗಳು (ಇನ್ಸ್‌ಪೆಕ್ಟರ್ ಶೋಭಾ, ಎಎಸ್‌ಐ ರತ್ನಮ್ಮ ಮತ್ತು ಸಿಎಚ್‌ಸಿ ಬಾಲಕೃಷ್ಣ) ಸೇರಿದಂತೆ ರಾಜ್ಯದ 6 ಅಧಿಕಾರಿಗಳು ಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕಕ್ಕೆ ಭಾಜನರಾಗಿದ್ದಾರೆ.
ಬೆಂಗಳೂರು ನಗರದ ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶೋಭ ಎನ್, ಬೆಂಗಳೂರಿನ ಪ್ರಧಾನ ಕಛೇರಿಯ ಪೊಲೀಸ್ ಇನ್ಸ್‌ಪೆಕ್ಟರ್ ಎಂ. ಶ್ರೀನಿವಾಸ್ ರಾವ್, ರಾಯಚೂರಿನ ದೇವದುರ್ಗ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಮಂಜುನಾಥ್, ಬೆಳಗಾವಿ ನಗರದ ಮಾಳಮಾರುತಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಬಾವುದ್ದೀನ್ ರುಕ್ಷುದ್ದೀನ್ ಗಡೇಕರ್, ಬೆಂಗಳೂರು ನಗರ ಪೂರ್ವ ವಿಭಾಗದ ಮಹಿಳಾ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ASI) ರತ್ನಮ್ಮ ಕೆ ಹಾಗೂ ಬೆಂಗಳೂರಿನ ಸಿಐಡಿ ಘಟಕದ ಸಿಹೆಚ್‌ಸಿ ಬಾಲಕೃಷ್ಣ ವೈ ಅವರು ತನಿಖಾ ವಿಭಾಗದ ಪದಕಕ್ಕೆ ಭಾಜನರಾಗಿದ್ದಾರೆ.
ವಿಧಿವಿಜ್ಞಾನ ವಿಭಾಗದಲ್ಲಿ ನೀಡಲಾಗುವ ದಕ್ಷತಾ ಪದಕಕ್ಕೆ ಮೈಸೂರಿನ ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯದ (RFSL) ಉಪನಿರ್ದೇಶಕರಾದ ಡಾ. ಚಂದ್ರಶೇಖರ್ ಭಾಜನರಾಗಿದ್ದಾರೆ.