....ನಾಡಿನ ಎಲ್ಲೆಡೆಯಲ್ಲಿ ಇ೦ದಿನಿ೦ದ (ಭಾನುವಾರದಿ೦ದ)ಎಲ್ಲಾ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ...16ರ೦ದು ಶ್ರೀಶಾರದಾ ಪೂಜೆ...

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಶ್ರೀಶಾರದಾ ಮಹೋತ್ಸವ ಕಾರ್ಯಕ್ರಮ…

ಉಡುಪಿ:ಅ15: ನಗರದ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಶ್ರೀ ಶಾರದೋತ್ಸವ ಸಮತಿ ವತಿಯಿಂದ ನಡೆಯುತ್ತಿರುವ 24ನೇ ವರ್ಷದ ಶಾರದಾ ಮಹೋತ್ಸವದ ಪ್ರಯುಕ್ತ ಅ. 15ರಂದು ಸಂಜೆ 6.30ಕ್ಕೆ ಗಣೇಶ ಚಿತ್ರಕಲಾದಿಂದ ಶ್ರೀ ಶಾರದಾ ದೇವಿಯ ವಿಗ್ರಹವನ್ನು ಮೆರವಣಿಗೆಯಲ್ಲಿ ಗುರುವಾರದ೦ದು ತರಲಾಯಿತು.

ಅ. 16ರಂದು ಬೆಳಗ್ಗೆ 8.30ಕ್ಕೆ ಶ್ರೀ ಶಾರದಾ ದೇವಿಯ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗುವುದು. 22ರ ವರೆಗೆ

ಪೂಜೆ ನಡೆಯಲಿದೆ.

19ರಂದು ದುರ್ಗಾಷ್ಟಮಿಯಂದು ಸಾಮೂಹಿಕ ದುರ್ಗಾ ನಮಸ್ಕಾರ, 20ರಂದು ರಾತ್ರಿ 8ಕ್ಕೆ ದೀಪಾಲಂಕಾರ ಸೇವೆ, 21ರಂದು ಬೆಳಗ್ಗೆ 7.35ಕ್ಕೆ ಚಂಡಿಕಾ ಹವನ, 22ರಂದು ಶ್ರೀ ಶಾರದಾ ದೇವಿಯ ವಿಗ್ರಹ ವಿಸರ್ಜನೆಯ ಶೋಭಾಯಾತ್ರೆ ಸಂಜೆ 6.05ರಿಂದ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮ, ಭಜನೆ, ವಿವಿಧ ಸ್ಪರ್ಧೆಗಳು ಜರಗಲಿವೆ ಎಂದು ಪ್ರಕಟಣೆ ತಿಳಿಸಿದೆ.

No Comments

Leave A Comment