ಜನರ ಪ್ರೀತಿ ವಿಶ್ವಾಸವೇ ನನಗೆ ಹಾರೈಕೆ; ಸಹಕಾರ ರಂಗದ ಕೆಲಸ ಭಗವಂತನ ಕೆಲಸವೆಂದು ಭಾವಿಸಿ ಇನ್ನೂ ಮುಂದೆಯೂ ಮಾಡುತ್ತೇನೆ: ಡಾ. ರಾಜೇಂದ್ರ ಕುಮಾರ್
ಮಂಗಳೂರು; ವೈದ್ಯರ ಆರೈಕೆ ಯೊಂದಿಗೆ ಜನರು ನೀಡಿದ ಪ್ರೀತಿ ವಿಶ್ವಾಸ ನನ್ನನ್ನು ಗುಣಮುಖನನ್ನಾಗಿ ಮಾಡಿದೆ. ಸಹಕಾರ ರಂಗ,ಸ್ವ ಸಹಾಯ ಗುಂಪುಗಳ ಅಭಿವೃದ್ಧಿಯ ಕೆಲಸ ಭಗವಂತನ ಕೆಲಸ ಎಂದು ಭಾವಿಸಿ ಇನ್ನು ಮುಂದೆಯೂ ಮಾಡುತ್ತೇನೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ‘ ಸಹಕಾರ ರತ್ನ ‘ ಡಾ.ಎಂ.ಎನ್.ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
ಉಡುಪಿ ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ಮಾಡುತ್ತಾ,ಸಮಾಜದ ಕಟ್ಟ ಕಡೆಯ ವ್ಯಕ್ತಿಗಳು,ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಶ್ರಮಿಸುತ್ತಾ ಇರುವ ಕುಮಾರ್ ಅವರಿಗೆ ಭಗವಂತನ ಆಶೀರ್ವಾದ ಇದೆ.ಆಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ಒಂದು ಕೋಟಿ ಹಾಗೂ ಹಲವಾರು ಧಾರ್ಮಿಕ ಸ್ಥಳಗಳ ಅಭಿವೃದ್ಧಿ ಗೆ ಆರ್ಥಿಕ ಸಹಾಯ ನೀಡುತ್ತಾ ಬಂದಿರುವ ಡಾ.ಎಂ.ರಾಜೇಂದ್ರ ಕುಮಾರ್ ಅವರಿಗೆ ನವರಾತ್ರಿಯ ಪರ್ವ ಕಾಲದಲ್ಲಿ ದೇವರು ಆರೋಗ್ಯ ಸಂಪತ್ತು ಹಾಗೂ ಅವರ ಇಚ್ಛೆ ಗಳನ್ನು ಪೂರೈಸುವಂತಾಗಲಿ ಮುಂದೆಯೂ ಸಮಾಜಕ್ಕೆ ಅವರ ಸಹಾಯ ದೊರೆಯು ವಂತಾಗಲಿ ಎಂದು ಶುಭ ಹಾರೈಸಿದರು.