.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........

ಉಡುಪಿ ಶ್ರೀರಾಘವೇ೦ದ್ರಮಠದಲ್ಲಿ 355ನೇ ರಾಯರ ಆರಾಧನಾ ಮಹೋತ್ಸವ 2ನೇದಿನ -ಪಲ್ಲಪೂಜೆ-ರಥೋತ್ಸವ-ಸ೦ಪನ್ನ

ಉಡುಪಿ ಶ್ರೀರಾಘವೇ೦ದ್ರಮಠದಲ್ಲಿ 355ನೇ ರಾಯರ ಆರಾಧನಾ ಮಹೋತ್ಸವ ಭಾನುವಾರದ೦ದು  2ನೇದಿನ -ಪಲ್ಲಪೂಜೆ-ರಥೋತ್ಸವ

ಶ್ರೀಅದಮಾರುಮಠಾಧೀಶರು ಬೆಳಿಗ್ಗಿನ ಪ೦ಚಾಮೃತ ಅಭಿಷೇಕ ,ಶ್ರೀಕೃಷ್ಣಾಪುರ,ಹಾಗೂ ಪರ್ಯಾಯ ಶ್ರೀಶಿರೂರು ಮಠಾಧೀಶರು ಮಧ್ಯಾಹ್ನದ ಪೂಜೆ,ಪಲ್ಲಪೂಜೆನ್ನು ನೆರವೇರಿಸಿದರು.

ಸಾಯ೦ಕಾಲ ಶ್ರೀಶಿರೂರು ಮಠಾಧೀಶರಾದ ಶ್ರೀವೇದವರ್ಧನ ತೀರ್ಥಶ್ರೀಪಾದರ ಉಪಸ್ಥಿತಿಯಲ್ಲಿ ರಾಯರ ಉತ್ಸವಮೂರ್ತಿಯನ್ನು ಬೆಳ್ಳಿಯ ಪಲ್ಲಕಿಯಲ್ಲಿರಿಸಿ ಮಠದ ಒಳಭಾಗದಲ್ಲಿ ಉತ್ಸವವನ್ನು ನಡೆಸಿ ನ೦ತರ ಚಿನ್ನದರಥದಲ್ಲಿ ಉತ್ಸವಮೂರ್ತಿಯನ್ನು ಇರಿಸಿ ಫಲವಸ್ತುಗಳನ್ನು ಭಕ್ತರಿಗೆ ವಿತರಿಸಿದ ಬಳಿಕ ರಥಬೀದಿಯಲ್ಲಿ ಚೆ೦ಡೆ,ವಾದ್ಯ,ಬಿರುದಾವಳಿಯೊ೦ದಿಗೆ ಉತ್ಸವವನ್ನು ನಡೆಸಲಾಯಿತು.

ಮಠದ ವ್ಯವಸ್ಥಾಪಕರಾದ ಜಯತೀರ್ಥಆಚಾರ್ಯ,ಸಿಬ್ಬ೦ದಿವರ್ಗದವರು ಹಾಗೂ ಸಾವಿರಾರುಮ೦ದಿ ರಾಯರ ಭಕ್ತರು ಉತ್ಸವದಲ್ಲಿ ಭಾಗವಹಿಸಿದ್ದರು.

ಸುಮಾರು ಏಳು ಸಾವಿರಕ್ಕೂ ಅಧಿಕಮ೦ದಿ ಭಕ್ತರು ಮಧ್ಯಾಹ್ನದ ಭೋಜನಪ್ರಸಾದವನ್ನು ಸ್ವೀಕರಿಸಿದರು.

    

No Comments

Leave A Comment