..........ನಾಡಿನ ಎಲ್ಲೆಡೆಯಲ್ಲಿನ ದೇವಿದೇವಸ್ಥಾನ ಸೇರಿದ೦ತೆ ಎಲ್ಲಾ ದೇವಾಲಯಗಳಲ್ಲಿ ನವರಾತ್ರೆಗೆ ಬಿರುಸಿನ ಸಿದ್ದತೆ........ಕಳಚಿ ಹೋಯಿತು ಉದುಪಿ ತೆ೦ಕಪೇಟೆಯ ವಾರ್ಡಿನ ಬಿಜೆಪಿಯ ಜಿ.ಎಸ್.ಜಿ ಸಮಾಜದ ನಗರ ಸಭೆಯ ಸದಸ್ಯತ್ವ ಸ್ಥಾನಮಾನ. ಬ್ರಾಹ್ಮಣ ಸಮಾಜದ ತೆಕ್ಕೆಗೆ. ಮಧುಕರ್ ಮುದ್ರಾಡಿ ಮು೦ದಿನ ನಗರ ಸಭೆಯ ಚುನಾಣೆಯ ಬಿ.ಜೆ.ಪಿ ಪಕ್ಷದ ಅಭ್ಯರ್ಥಿ...

ಉಡುಪಿಯ ಗು೦ಡಿಬೈಲಿನ ಅಭಿರಾಮಧಾಮದಲ್ಲಿ 3ನೇ ವರ್ಷದ ಜಿಲ್ಲಾಮಟ್ಟದ ರಾಷ್ಟ್ರ – ಭಕ್ತಿ ಉದ್ಧೀಪನಾ ಅಭಿಯಾನ-2026-ಆ.11,12ರ೦ದು ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ

ಉಡುಪಿ : ಭಾರತದ 80ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಇಲ್ಲಿನ ಗುಂಡಿಬೈಲಿನ ಅಭಿರಾಮಧಾಮದಲ್ಲಿ 3ನೇವರ್ಷದ ಜಿಲ್ಲಾ ಮಟ್ಟದ ರಾಷ್ಟ್ರ–ಭಕ್ತಿ ಉದ್ಧೀಪನಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ಸಮಸ್ತ ಶಾಲಾ ಮಕ್ಕಳಲ್ಲಿ ರಾಷ್ಟ್ರ-ಭಕ್ತಿ ಉದ್ಧೀಪನಗೊಳಿಸಲೆಂದೇ ದಿನಾಂಕ 11 ಮತ್ತು 12 ಆಗಸ್ಟ್‌ 2026ರಂದು ದೇಶ ಭಕ್ತಿಗೀತೆ ಗಾಯನ, ಪ್ರಬಂಧ ಸ್ಫರ್ಧೆ, ಭಾಷಣ/ಚರ್ಚಾ ಸ್ಫರ್ಧೆ, ಐತಿಹಾಸಿಕ ಏಕಪಾತ್ರಾಭಿನಯ ಬೆಳಿಗ್ಗೆ 9.30ರಿಂದ ಸಂಜೆ 5.00ರ ತನಕ ಆಯೋಜಿಸಲಾಗಿದೆ ಎ೦ದು ಅಭಿಯಾನದ ಆಯೋಜಕರಾದ ಪರ್ಲತ್ತಾಯ ಡಾ. ಸುದರ್ಶನ ಭಾರತೀಯ ತಿಳಿಸಿದ್ದಾರೆ.

ಪ್ರಾಥಮಿಕ ಶಾಲೆಯ 5, 6, 7ನೇ ತರಗತಿಯ ಮಕ್ಕಳಿಗೆ ಕಿರಿಯರ ವಿಭಾಗದಲ್ಲಿ ರೂ.1,000/-, 700/-, 300/-ರಂತೆಯೂ, ಫ್ರೌಢ ಶಾಲೆಯ 8, 9, 10ನೇ ತರಗತಿಯ ಮಕ್ಕಳಿಗಾಗಿ ಹಿರಿಯರ ವಿಭಾಗದಲ್ಲಿ ರೂ.1,500/-, 1,000/-, 500/-ರಂತೆಯೂ, ಈ ನಾಲ್ಕು ಸ್ಫರ್ಧೆಗಳಲ್ಲಿ ತಲಾ ಮೂರು ಬಹುಮಾನಗಳನ್ನು ವಿದ್ಯಾರ್ಥಿಗಳು ಗೆಲ್ಲಬಹುದಾಗಿದೆ. ಅತೀ ಹೆಚ್ಚು ಬಹುಮಾನ ಗಳಿಸಿದ ಶಾಲೆಗೆ ಸ್ವರ ಸಾಮ್ರಾಟ್‌ – ವಿದ್ವಾನ್‌ ಅಭಿರಾಮ ಭರತವಂಶಿ ಜಿಲ್ಲಾ ಮಟ್ಟದ ವಿಶಿಷ್ಟ ದೇಶ-ಭಕ್ತಿ ಪರ್ಯಾಯ ಪ್ರಶಸ್ತಿ ಟ್ರೋಫಿಯನ್ನಿತ್ತು ಸನ್ಮಾನಿಸಲಾಗುತ್ತದೆ.

ಇದಲ್ಲದೇ ಹತ್ತೈವತ್ತು ಮೆಡಲ್‌ ಗಳೂ, ಪ್ರಶಸ್ತಿ, ಪ್ರಮಾಣ ಪತ್ರಗಳೂ ದೇಶ-ಭಕ್ತ ಮಕ್ಕಳ ಕೈಸೇರಲು ಕಾತರದಿ ಕಾಯುತ್ತಿವೆ ಎಂದು ಅಭಿಯಾನದ ಆಯೋಜಕರಾದ ಪರ್ಲತ್ತಾಯ ಡಾ. ಸುದರ್ಶನ ಭಾರತೀಯ ತಿಳಿಸಿದ್ದಾರೆ.

ಶಾಲಾ ಮಕ್ಕಳಿಗೇ ಮೀಸಲಾದ ಈ ಸ್ಫರ್ಧೆಗಳಲ್ಲಿ ಯಾವುದೇ ಸ್ಫರ್ಧಿಗಳು ವೈಯಕ್ತಿಕವಾಗಿಯೂ / ಶಾಲಾ ತಂಡದಿಂದಲೂ ಭಾಗವಹಿಸಬಹುದು. ಎಲ್ಲಾ ಸ್ಫರ್ಧಿಗಳು ತಮ್ಮ ತಮ್ಮ ಶಾಲೆಯ ಸಮವಸ್ತ್ರ ಧರಿಸಿ, ಶಾಲಾ ಮುಖ್ಯಸ್ಥರ ಸಹಿ/ಸೀಲು ಹಾಕಿರುವ ಗುರುತಿನ ಚೀಟಿಯನ್ನು ಸ್ಫರ್ಧಾ ವೇಳೆಯಲ್ಲಿ ಪ್ರಸ್ತುತ ಪಡಿಸತಕ್ಕದ್ದು. ನೋಂದಾಯಿಸಲು ಕೊನೆಯ ದಿನಾಂಕ 08 ಆಗಸ್ಟ್ 2026. ಪ್ರಬಂಧ ಹಾಗೂ ಭಾಷಣ ಸ್ಫರ್ಧೆಯ ವಿಷಯವನ್ನು ತಿಳಿಯಲು ಶ್ರೀ ಅಭಿರಾಮ ಧಾಮಕ್ಕೆ ಕರೆಮಾಡಿ (7022274686) ತಿಳಿದು ಭಾಗವಹಿಸಿ.

No Comments

Leave A Comment