..........ನಾಡಿನ ಎಲ್ಲೆಡೆಯಲ್ಲಿನ ದೇವಿದೇವಸ್ಥಾನ ಸೇರಿದ೦ತೆ ಎಲ್ಲಾ ದೇವಾಲಯಗಳಲ್ಲಿ ನವರಾತ್ರೆಗೆ ಬಿರುಸಿನ ಸಿದ್ದತೆ........ಕಳಚಿ ಹೋಯಿತು ಉದುಪಿ ತೆ೦ಕಪೇಟೆಯ ವಾರ್ಡಿನ ಬಿಜೆಪಿಯ ಜಿ.ಎಸ್.ಜಿ ಸಮಾಜದ ನಗರ ಸಭೆಯ ಸದಸ್ಯತ್ವ ಸ್ಥಾನಮಾನ. ಬ್ರಾಹ್ಮಣ ಸಮಾಜದ ತೆಕ್ಕೆಗೆ. ಮಧುಕರ್ ಮುದ್ರಾಡಿ ಮು೦ದಿನ ನಗರ ಸಭೆಯ ಚುನಾಣೆಯ ಬಿ.ಜೆ.ಪಿ ಪಕ್ಷದ ಅಭ್ಯರ್ಥಿ...
ಪಡುಬಿದ್ರಿ: ಮುದರಂಗಡಿ ಗ್ರಾಪಂ ಮಾಜಿ ಅಧ್ಯಕ್ಷ ಡೇವಿಡ್ ಡಿಸೋಜರನ್ನು ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು
ಉಡುಪಿ:ಆ.7, ಶಿರ್ವ ಸಮೀಪದ ಮುದರ೦ಗಡಿಯಲ್ಲಿ ಖ್ಯಾತ ಉದ್ಯಮಿ, ಮುಖಂಡ ಡೇವಿಡ್ ಡಿ’ಸೋಜಾ ಅವರ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ಉಡುಪಿ ಜಿಲ್ಲೆಯ ಮುದರಂಗಡಿಯಲ್ಲಿ ಶುಕ್ರವಾರ ನಡೆದಿದೆ.
ಶಿರ್ವಾ ಪ್ರದೇಶದ ಖ್ಯಾತ ಉದ್ಯಮಿ ಡೇವಿಡ್ ಡಿ’ಸೋಜಾ ಅವರು ಯಶಸ್ವಿ ಅರ್ಥ್ಮೂವರ್ಸ್ ಸೇರಿದಂತೆ ಹಲವು ವ್ಯವಹಾರಗಳನ್ನು ನಡೆಸುತ್ತಿದ್ದು, ಸ್ಥಳೀಯವಾಗಿ ಪರಿಚಿತ ವ್ಯಕ್ತಿಯಾಗಿದ್ದಾರೆ.
ದಾಳಿಯ ಹಿಂದಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಅಲ್ಲದೆ, ಗಾಯಗೊಂಡಿರುವ ಡೇವಿಡ್ ಡಿ’ಸೋಜಾ ಅವರ ಆರೋಗ್ಯ ಸ್ಥಿತಿಯ ಬಗ್ಗೆಯೂ ಅಧಿಕೃತ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಘಟನೆಯ ಕುರಿತು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ದಾಳಿ ನಡೆಸಿದ ಆರೋಪಿಗಳನ್ನು ಪತ್ತೆಹಚ್ಚಲು ತನಿಖೆ ಆರಂಭಿಸಲಾಗಿದೆ.