ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನ:126ನೇ ಭಜನಾ ಸಪ್ತಾಹ ಮಹೋತ್ಸವ 7ನೇ ದಿನವಾದ ಅತಿರಿಕ್ತ ಉಪವಾಸ:ಶ್ರೀದೇವರಿಗೆ "ಶ್ರೀರಾಮನ" ಅಲ೦ಕಾರ-ಮ೦ಗಳವಾರ ಬೆಳಿಗ್ಗೆ 2ಗ೦ಟೆಗೆ ಸಪ್ತಾಹದ ಸಾಳಿಯಲ್ಲಿ ಉರುಳುಸೇವೆ

ಮಹಿಳೆಯರಿಗಾಗಿ ‘ಋತುತಾರೆ’ ಯೋಜನೆ: ಆರೋಗ್ಯ ಸಚಿವ ಯು.ಟಿ.ಖಾದರ್ ಘೋಷಣೆ

ಬೆಂಗಳೂರು, ಆಗಸ್ಟ್​​ 04: ಮಹಿಳೆಯರಿಗಾಗಿ ‘ಋತುತಾರೆ’ ಎಂಬ ಹೊಸ ಯೋಜನೆಯೊಂದನ್ನು ರಾಜ್ಯ ಸರ್ಕಾರ ಜಾರಿಗೆ ತರುತ್ತಿದ್ದು, ಈ ಬಗ್ಗೆ ಸ್ವತಃ ಆರೋಗ್ಯ ಸಚಿವ ಯು.ಟಿ. ಖಾದರ್​ ಘೋಷಣೆ ಮಾಡಿದ್ದಾರೆ. ಮಹಿಳೆಯರು ಮಾನಸಿಕ ಒತ್ತಡ, ಸಮಸ್ಯೆ ಅನಭವಿಸುತ್ತಿದ್ದಾರೆ. ಹೀಗಾಗಿ ಮೆನೋಪಾಸ್ ಸಂಬಂಧ ಮಹಿಳಾ ತಜ್ಞೆ ಜೋಸ್ನಾ ಅಧ್ಯಕ್ಷೆತೆಯಲ್ಲಿ ಸಮಿತಿ ರಚಿಸಿದ್ದೇವೆ. ನಟಿ ರಮ್ಯಾ ಈ ಕಾರ್ಯಕ್ರಮದ ಬ್ರ್ಯಾಂಡ್ ಅಂಬಾಸಿಡರ್ ಆಗಿರಲಿದ್ದಾರೆ. ಆಶಾ ಕಾರ್ಯಕರ್ತೆಯರು ಮನೆಮನೆಗೆ ಹೋಗಿ ಮಹಿಳೆಯರ ಡೇಟಾ ತೆಗೆದುಕೊಳ್ಳಲಿದ್ದು, ಪ್ರೀ ಮೆನೋಪಾಸ್ ಹಾಗೂ ಪೋಸ್ಟ್ ಮೆನೋಪಾಸ್ ಕುರಿತು ಯಾವೆಲ್ಲಾ ಕ್ರಮ ತೆಗೆದುಕೊಳ್ಳಬೇಕು ಎನ್ನುವುದನ್ನು ತಿಳಿಸಲಿದ್ದಾರೆ ಎಂದವರು ತಿಳಿಸಿದ್ದಾರೆ.

ಮಹಿಳೆಯರನ್ನು ಕಾಡುತ್ತಿರುವ ಮೆನೋಪಾಸ್ ಸಮಸ್ಯೆ ಕುರಿತು ಸೂಕ್ತ ಕ್ರಮಕ್ಕೆ ನಟಿ ರಮ್ಯಾ ಒತ್ತಾಯಿಸಿದ್ದರು. ಈ ಹಿನ್ನಲೆ ಆರೋಗ್ಯ ಸಚಿವ ಯು.ಟಿ. ಖಾದರ್ ಜೊತೆ ನಟಿ ರಮ್ಯ ಹಾಗೂ ಇತರೆ ಪರಿಣಿತರೊಂದಿಗೆ ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಮಹತ್ವದ ಸಂವಾದ ನಡೆಸಲಾಗಿದ್ದು, ಎಲ್ಲರ ಸಲಹೆ ಮತ್ತು ಸೂಚನೆಗಳನ್ನು ಆಲಿಸಿದ ಬಳಿಕ ಸರ್ಕಾರ ಈ ತೀರ್ಮಾನ ಮಾಡಿರೋದಾಗಿ ಸಚಿವರು ತಿಳಿಸಿದ್ದಾರೆ.

ಮಹಿಳಾ ತಜ್ಞರು ಹೇಳಿದ್ದೇನು?

ಮಹಿಳೆಯರಿಗೆ ಋತುಬಂಧ ಯಾವ ಸಮಯದಲ್ಲಿ ಬಂದಿದೆ? ಯಾವ ರೀತಿ ಬಂದಿದೆ? ಅನ್ನೋದನ್ನ ತಿಳಿದುಕೊಳ್ಳಬೇಕು. ನಾರ್ಮಲ್ ಹಾಗೂ ಸರ್ಜಿಕಲ್ ಮೆನೋಪಾಸ್ ಎಂಬ ಎರಡು ವಿಭಾಗಗಳಿವೆ. ಮೆನೋ ಪಾಸ್ ಸಮಯದಲ್ಲಿ ಹೃದಯ ಸಂಬಂಧಿ, ಮೂಳೆ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಇದೆ. ಹೀಗಾಗಿ ಸರ್ಜಿಕಲ್ ಆಪರೇಷನ್ ಆದವರು ಹೆಚ್ಚಿನ ಗಮನ ಹರಿಸಬೇಕು. ನಾರ್ಮಲ್ ಮೆನೋಪಾಸ್ ಸಮಯದಲ್ಲಿ ತೊಂದರೆಯಾಗೋರಿಗೆ ಆಹಾರದಲ್ಲೇ ಸರಿಮಾಡಬಹುದು ಎಂದು ಮಹಿಳಾ ತಜ್ಞೆ ಜೋಸ್ನಾ ತಿಳಿಸಿದ್ದಾರೆ.

‘ಬ್ರ್ಯಾಂಡ್​​ ಅಂಬಾಸಿಡರ್​​ ಮಾಡಿರುವುದು ಖುಷಿ ಇದೆ’

ಇನ್ನು ಸರ್ಕಾರದ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ರಮ್ಯಾ, ಬೇರೆ ದೇಶಗಳಿಗೆ ಹೋಲಿಸಿದ್ರೆ ಭಾರತದಲ್ಲಿ ಮೆನೋಪಾಸ್ ಬೇಗ ಕಾಣಿಸಿಕೊಳ್ಳುತ್ತೆ. ಸಿಟಿಯಲ್ಲಿ ಅತಿ ಹೆಚ್ಚಿನ ಮಹಿಳೆಯರು ಮೆನೋಪಾಸ್‌ ಸಮಯದಲ್ಲಿ ಸಮಸ್ಯೆಯಿಂದ ಬಳಲುತ್ತಾರೆ. ಯಾವೆಲ್ಲಾ ಸಮಸ್ಯೆಗಳು ಕಾಣಿಸಿಕೊಳ್ಳುತ್ತೆ? ಮತ್ತು ಟ್ರೀಟ್‌ಮೆಂಟ್‌ ಏನೆಂಬ ಬಗ್ಗೆ ಸಿಟಿ ಭಾಗದವರಿಗೂ ಹೆಚ್ಚಾಗಿ ಗೊತ್ತಿಲ್ಲ. ಗ್ರಾಮೀಣ ಭಾಗದವರಿಗಂತೂ ಇದರ ಬಗ್ಗೆ ಮಾಹಿತಿ ಅತಿ ಕಡಿಮೆ ಇದೆ. ಹೀಗಾಗಿ ಇದರ ಬಗ್ಗೆ ಗೃಹಾರೋಗ್ಯ ಪುಸ್ತಕದಲ್ಲಿ ಸೇರಿಸಿ ಅಂತ ಮನವಿ ಇಟ್ಟುಕೊಂಡು ಬಂದಿದ್ದೆವು. ಆದರೆ ಘೋಷಿಸಿರುವ ಯೋಜನೆಗೆ ಸರ್ಕಾರ ತನ್ನನ್ನೇ ಬ್ರ್ಯಾಂಡ್​​ ಅಂಬಾಸಿಡರ್​​ ಮಾಡಿರುವುದು ಖುಷಿ ಇದೆ ಎಂದವರು ತಿಳಿಸಿದ್ದಾರೆ.

No Comments

Leave A Comment