ಬೆಂಗಳೂರಿನಲ್ಲಿ ವರುಣಾರ್ಭಟ: ಹಲವು ಕಡೆ 1 ಗಂಟೆಗೂ ಹೆಚ್ಚು ಕಾಲ ಸುರಿದ ಮಳೆ; ಸಂಚಾರ ಅಸ್ತವ್ಯಸ್ತ...ಅ. 15ರಿಂದ UPI ಪಾವತಿಗೆ ಶುಲ್ಕ ಜಾರಿ: 2,000ಕ್ಕಿಂತ ಹೆಚ್ಚಿನ UPI ಪಾವತಿಗಳಿಗೆ ಶೇ. 0.4ರಷ್ಟು MDR ಶುಲ್ಕ!...

ಆ.28 ರಿಂದ ಸೆ.13 ರವರೆಗೆ ಮಹಿಳಾ ಏಷ್ಯಾಕಪ್​ ಟೂರ್ನಿಗೆ ಡೇಟ್ ಫಿಕ್ಸ್..!

ಮಹಿಳಾ ಟಿ20 ಏಷ್ಯಾಕಪ್ 2026 ರ ಪಂದ್ಯಾವಳಿಯು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ನಲ್ಲಿ ಆಗಸ್ಟ್ 28 ರಿಂದ ಸೆಪ್ಟೆಂಬರ್ 13 ರವರೆಗೆ ನಡೆಯಲಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಈ ಟೂರ್ನಿಗಾಗಿ ಡೇಟ್ ಫಿಕ್ಸ್ ಮಾಡಿದ್ದು, ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎಂದು ವರದಿಯಾಗಿದೆ.

ಎಸಿಸಿ ಇಮೇಲ್ ಮತ್ತು ಲೋಗೋ ಹಂಚಿಕೆ:

ಜುಲೈ 22 ರಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಏಷ್ಯಾಕಪ್ ಟೂರ್ನಿಯಲ್ಲಿ ಭಾಗವಹಿಸುವ ತಂಡಗಳಿಗೆ ಅಧಿಕೃತ ಇಮೇಲ್ ಒಂದನ್ನು ಕಳುಹಿಸಿದೆ. ಅದರಲ್ಲಿ ಪಂದ್ಯಾವಳಿಯ ಅಧಿಕೃತ ಲೋಗೋವನ್ನು ಹಂಚಿಕೊಳ್ಳಲಾಗಿದ್ದು, ಆತಿಥೇಯ ದೇಶದ ಕ್ರೀಡಾಂಗಣಗಳನ್ನು ಅಂತಿಮಗೊಳಿಸಲಾಗುತ್ತಿದೆ ಎಂದು ತಿಳಿಸಲಾಗಿದೆ.

ಇದರೊಂದಿಗೆ, ಎಲ್ಲಾ ತಂಡಗಳು ಆಗಸ್ಟ್ 27 ರೊಳಗೆ ಯುಎಇ ತಲುಪಬೇಕು ಮತ್ತು ಸೆಪ್ಟೆಂಬರ್ 13 ರಂದು ಫೈನಲ್ ಪಂದ್ಯ ಜರುಗಲಿದೆ ಎಂದು ಇಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಪಿಸಿಬಿ  ಮುಖ್ಯಸ್ಥರಾಗಿರುವ ಮೊಹ್ಸಿನ್ ನಖ್ವಿ ಅವರು ಎಸಿಸಿ ಅಧ್ಯಕ್ಷರಾಗಿದ್ದು, ಅವರ ಅಂತಿಮ ಅನುಮೋದನೆ ಸಿಕ್ಕ ತಕ್ಷಣ ಅಧಿಕೃತ ವೇಳಾಪಟ್ಟಿ ಬಿಡುಗಡೆಯಾಗಲಿದೆ.

ಬಿಸಿಸಿಐ ಎಡವಟ್ಟು!

ಈ ಪಂದ್ಯಾವಳಿಯ ಸಿದ್ಧತೆ ಎಷ್ಟು ವೇಗವಾಗಿ ನಡೆಯುತ್ತಿದೆ ಎಂದರೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇತ್ತೀಚೆಗೆ ಪಂದ್ಯಾವಳಿಗಾಗಿ ಭಾರತ ತಂಡವನ್ನು ಪ್ರಕಟಿಸಿತ್ತು. ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಈ ತಾತ್ಕಾಲಿಕ ತಂಡದಲ್ಲಿ ಪ್ರೇಮಾ ರಾವತ್ ಸೇರಿದಂತೆ ಪ್ರಮುಖ ಆಟಗಾರ್ತಿಯರ ಹೆಸರಿತ್ತು. ಆದರೆ, ಎಸಿಸಿ ಇನ್ನು ಅಧಿಕೃತವಾಗಿ ವಿಂಡೋ ತೆರೆಯದ ಕಾರಣ ಬಿಸಿಸಿಐ ತಕ್ಷಣವೇ ಆ ಪೋಸ್ಟ್ ಅನ್ನು ತನ್ನ ಸಾಮಾಜಿಕ ಜಾಲತಾಣಗಳಿಂದ ಡಿಲೀಟ್ ಮಾಡಿದೆ.

8 ದೇಶಗಳ ಕದನ:

ಮುಂಬರುವ ಮಹಿಳಾ ಏಷ್ಯಾಕಪ್​ನಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಆ ತಂಡಗಳಾವುವು ಎಂದರೆ…

ಮುಖಾಮುಖಿಯಾಗಲಿರುವ 8 ಬಲಿಷ್ಠ ತಂಡಗಳು

  1. ಭಾರತ

  2. ಶ್ರೀಲಂಕಾ

  3. ಪಾಕಿಸ್ತಾನ್

  4. ಬಾಂಗ್ಲಾದೇಶ್

  5. ನೇಪಾಳ

  6. ಮಲೇಷ್ಯಾ

  7.  ಥಾಯ್ಲೆಂಡ್

  8. ಯುಎಇ

ಈ ಏಷ್ಯಾ ಕಪ್ ವೇಳಾಪಟ್ಟಿಯು ಫೈನಲ್ ತಲುಪುವ ತಂಡಗಳಿಗೆ ಹೊಸ ಸಮಸ್ಯೆಯನ್ನುಂಟು ಮಾಡಲಿದೆ. ಏಕೆಂದರೆ ಜಪಾನ್‌ನ ನಾಗೋಯಾದಲ್ಲಿ ನಡೆಯಲಿರುವ 2026 ರ ಏಷ್ಯನ್ ಗೇಮ್ಸ್ ಮಹಿಳಾ ಕ್ರಿಕೆಟ್ ಪಂದ್ಯಾವಳಿಯು ಸೆಪ್ಟೆಂಬರ್ 17 ರಿಂದ 24 ರವರೆಗೆ ನಿಗದಿಯಾಗಿದೆ. ಏಷ್ಯಾ ಕಪ್ ಫೈನಲ್ ಮುಗಿದ ಕೇವಲ 4 ದಿನಗಳಲ್ಲಿ ಆಟಗಾರ್ತಿಯರು ಯುಎಇಯಿಂದ ಜಪಾನ್‌ಗೆ ಪ್ರಯಾಣ ಬೆಳೆಸಿ, ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಲಿದೆ.

No Comments

Leave A Comment