....ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ವರ್ಷ೦ಪ್ರತಿಯ ವಾಡಿಕೆಯ೦ತೆ ನಡೆಯಲಿರುವ ಭಜನಾ ಸಪ್ತಾಹವು ಅಗಸ್ಟ್ 18ರಿ೦ದ ಆರ೦ಭವಾಗಲಿದೆ...126ನೇ ವರ್ಷದ ಭಜನಾ ಸಪ್ತಾಹ ಇದಾಗಿದೆ...
ಜುಲೈ 20ರ ನಂತರ ನಿಮ್ಮನ್ನು ದೆವ್ವವಾಗಿ ಕಾಡುತ್ತೇನೆ: ವಿದ್ಯಾರ್ಥಿಗಳಿಗಾಗಿ ಪ್ರಾಣ ತ್ಯಾಗಕ್ಕೂ ಸಿದ್ಧರಾದ ವಾಂಗ್‌ಚುಕ್!
ನವದೆಹಲಿ: ನೀಟ್ ಅಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಒತ್ತಾಯಿಸಿ ಶಿಕ್ಷಣತಜ್ಞ ಮತ್ತು ಪರಿಸರ ಕಾರ್ಯಕರ್ತ ಸೋನಮ್ ವಾಂಗ್ಚೂಕ್ ಅವರು ಜಂತರ್ ಮಂತರ್‌ನಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಶುಕ್ರವಾರ 20ನೇ ದಿನಕ್ಕೆ ಕಾಲಿಟ್ಟಿದೆ.
ವೈದ್ಯರ ಗಂಭೀರ ಎಚ್ಚರಿಕೆಯ ನಡುವೆಯೂ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮುಂದುವರೆಸಿರುವ ಸೋನಮ್ ವಾಂಗ್‌ಚುಕ್ ಅವರು, ನಾನು “ಯಾವುದೇ ಬೆಲೆ ತೆತ್ತಾದರೂ ಜುಲೈ 20 ರವರೆಗೆ ಜೀವಂತವಾಗಿರುತ್ತೇನೆ” ಎಂದು ಪ್ರತಿಪಾದಿಸಿದ್ದಾರೆ.
ಪರೀಕ್ಷಾ ಅಕ್ರಮಗಳ ವಿರುದ್ಧ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಕ್ಷದ(ಸಿಜೆಪಿ) ನಡೆಸುತ್ತಿರುವ ಪ್ರತಿಭಟನೆ ಇಂದು 28ನೇ ದಿನಕ್ಕೆ ಕಾಲಿಟ್ಟಿದ್ದು, ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು ವಾಂಗ್‌ಚುಕ್ ಮತ್ತು ಇತರ ಪ್ರತಿಭಟನಾಕಾರರನ್ನು ಭೇಟಿ ಮಾಡಿ ತಮ್ಮ ಬೆಂಬಲ ಸೂಚಿಸಿದ್ದಾರೆ.
ಈ ವೇಳೆ ಪ್ರತಿಭಟನಾ ಸ್ಥಳದಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ವಾಂಗ್‌ಚುಕ್ ಅವರು, ನಾನು ದೈಹಿಕವಾಗಿ ದುರ್ಬಲವಾಗಿದ್ದೇನೆ ಎಂದು ಒಪ್ಪಿಕೊಂಡರು. ಆದರೆ ತಮ್ಮ ನಿರ್ಧಾರ ಅಚಲವಾಗಿದೆ ಎಂದು ಹೇಳಿದರು.
“ನಾನು ಹೊರಗಿನಿಂದ ದುರ್ಬಲನಾಗಿದ್ದೇನೆ. ಆದರೆ ಒಳಗೆ ತುಂಬಾ ಬಲಶಾಲಿ. ನೀವೆಲ್ಲರೂ ಒಳಗಿನಿಂದ ಮತ್ತು ಹೊರಗಿನಿಂದ ಬಲಶಾಲಿಗಳು ಎಂದು ನನಗೆ ಖಚಿತವಾಗಿದೆ. ಜುಲೈ 20 ರಂದು ಸಂಸತ್ತಿಗೆ ಶಾಂತಿಯುತ ಮೆರವಣಿಗೆ ನಡೆಸಲು ನಮಗೆ ಈ ಶಕ್ತಿ ಬೇಕು. ನಾವು ಒಟ್ಟಾಗಿ ಹೋಗಿ ಪ್ರಜಾಪ್ರಭುತ್ವದ ದೇವಾಲಯದಲ್ಲಿ ನಮ್ಮ ಮನವಿಯನ್ನು ಮಂಡಿಸುತ್ತೇವೆ” ಎಂದು ಅವರು ಹೇಳಿದರು.
“ನಾನು ಜುಲೈ 20 ರವರೆಗೆ ಜೀವಂತವಾಗಿರುತ್ತೇನೆ. ನೀವು ಬರದಿದ್ದರೆ ಮತ್ತು ಜುಲೈ 20 ಪ್ರತಿಭಟನಾ ಮೆರವಣಿಗೆ ಯಶಸ್ವಿಯಾಗದಿದ್ದರೆ, ನಾನು ದೆವ್ವವಾಗಿ ಕಾಡುತ್ತೇನೆ” ಎಂದು ಅವರು ಹೇಳುವ ಮೂಲಕ ವಿದ್ಯಾರ್ಥಿಗಳಿಗಾಗಿ ತಾವು ಪ್ರಾಣ ತ್ಯಾಗಕ್ಕೂ ಸಿದ್ಧ ಎಂಬ ಸಂದೇಶ ರವಾನಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ ವಾಂಗ್ಚುಕ್ ಅವರು ಮತ್ತೆ 350 ಗ್ರಾಂ ತೂಕ ಕಳೆದುಕೊಂಡಿದ್ದು, ಇದರೊಂದಿಗೆ ಉಪವಾಸ ಆರಂಭಿಸಿ 20 ದಿನಗಳಲ್ಲಿ ಅವರ ಒಟ್ಟು 9.5 ಕೆಜಿ ತೂಕ ಕಳೆದುಕೊಂಡಿದ್ದಾರೆ.
ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯಕೀಯ ತಂಡವು ಬಿಡುಗಡೆ ಮಾಡಿದ ಆರೋಗ್ಯ ಬುಲೆಟಿನ್ ಪ್ರಕಾರ, ವಾಂಗ್ಚುಕ್ ಈಗ 56.55 ಕೆಜಿ ತೂಕ ಹೊಂದಿದ್ದಾರೆ. ಅವರ ರಕ್ತದೊತ್ತಡ 108/68 ಎಂಎಂ ಎಚ್‌ಜಿ, ರಕ್ತದ ಸಕ್ಕರೆ 80 ಮಿಗ್ರಾಂ/ಡಿಎಲ್, ನಾಡಿಮಿಡಿತ ನಿಮಿಷಕ್ಕೆ 72 ಬಡಿತಗಳು ಮತ್ತು ಆಮ್ಲಜನಕದ ಶುದ್ಧತ್ವವು ಶೇಕಡಾ 96 ರಷ್ಟಿದೆ ಎಂದು ಹೇಳಿದೆ.