....ನಾಡಿನ ಎಲ್ಲೆಡೆಯಲ್ಲಿ ಇ೦ದಿನಿ೦ದ (ಭಾನುವಾರದಿ೦ದ)ಎಲ್ಲಾ ದೇವಾಲಯಗಳಲ್ಲಿ ನವರಾತ್ರೆಯ ಸ೦ಭ್ರಮ...16ರ೦ದು ಶ್ರೀಶಾರದಾ ಪೂಜೆ...

ಬನ್ನಂಜೆ ಜಯಲಕ್ಷ್ಮಿ ಸಿಲ್ಕ್ ಎದುರಿರುವ ಅವೈಜ್ಞಾನಿಕ ಡಿವೈಡರ್ ಅಗಲೀಕರಣ ಕೂಡಲೇ ಮುಚ್ಚಿಸಿ; ಸುರೇಶ್ ಶೆಟ್ಟಿ ಬನ್ನಂಜೆ

ಉಡುಪಿ ನಗರಸಭೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 169ಎ ಈ ಈ ರಸ್ತೆಗೆ ತಾಗಿಕೊಂಡಿರುವ ಜಯಲಕ್ಷ್ಮಿ ಸಿಲ್ಕ್ ಎಂಬ ದೊಡ್ಡಮಟ್ಟದ ಬಟ್ಟೆಯ ಮಾರಾಟ ಮಳಿಗೆ ಇದ್ದು.ಕೇವಲ ಇವರಿಗೆ ವ್ಯಾಪಾರಕ್ಕಾಗಿ ಮಾತ್ರ ನಮ್ಮ ಲೋಕಸಭಾ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ ಮತ್ತು ಶಾಸಕ ಯಶ್ಪಾಲ್ ಸುವರ್ಣ ಮತ್ತು ಅಂದು ಉಡುಪಿ ನಗರಸಭೆಯ ಆಡಳಿತ ನಡೆಸುತ್ತಿದ್ದ ಬಿಜೆಪಿಯ ನಗರಸಭಾ ಅಧ್ಯಕ್ಷ ಮತ್ತು ಸ್ಥಳೀಯ ಬಿಜೆಪಿಯ ನಗರಸಭಾ ಸದಸ್ಯರು  ಇವರ ಮಹತ್ವದ ಬೆಂಬಲದಿಂದಾಗಿ ಈ ರಸ್ತೆಯ ಡಿವೈಡರ್ ಅಗಲ ಗೊಂಡಿದೆ .

ಹಿಂದೆ ನಗರಸಭಾ ಅಧಿವೇಶನದಲ್ಲಿ ಈ ಬಗ್ಗೆ ಆಕ್ಷೇಪಿಸಿದ್ದು ನನ್ನ ವಿರುದ್ಧವೇ ಈ ಬಿಜೆಪಿಯ ನಗರಸಭಾ ಸದಸ್ಯರು ಮುಗಿವಿದ್ದು ಕ್ಷಮೆ ಕೇಳಿಕೊಳ್ಳಬೇಕೆಂದು ಒತ್ತಾಯಿಸಿರುತ್ತಾರೆ? ಆದರೂ ನಾನು ಅದಕ್ಕೆ ಬಗ್ಗದೆ ನನ್ನ ಆಕ್ಷೇಪಣೆಯನ್ನು ಸಮರ್ಥಿಸಿಕೊಂಡಿದ್ದೇನೆ.

ಈ ಬಗ್ಗೆ ಜಿಲ್ಲಾ ಅಧಿಕಾರಿಯವರ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ರಾಷ್ಟ್ರೀಯ ಹೆದ್ದಾರಿಯ ಪ್ರಾಧಿಕಾರ ಇದರ ಅಧಿಕಾರಿಗಳನ್ನು ಕರೆಯಿಸಿ ಈ ಡಿವೈಡರ್ ಅನ್ನು ಹಿಂದೆ ಇರುವಂತೆ ಮಾಡಬೇಕಾಗಿ ನಾನು ಈ ಕೂಡಲೇ ಒತ್ತಾಯಿಸುತ್ತಿದ್ದೇನೆ.

ಮುಂದಿನ ದಿನಗಳಲ್ಲಿ ಇಲ್ಲಿ ಏನಾದರೂ ಅಪಘಾತವಾಗಿ ಪ್ರಾಣ ಹಾನಿ ಸಂಭವಿಸಿದರೆ ಅದಕ್ಕೆ ಅಂಗಡಿಯ ಮಾಲಕರು ಮತ್ತು ಅದಕ್ಕೆ ಸಹಕರಿಸಿದ ತಾವೆಲ್ಲರೂ ಹೊಣೆ ಹೊರಬೇಕಾಗಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರು ಮತ್ತು ಉಡುಪಿ ನಗರಸಭೆಯ ಪ್ರಸ್ತುತ ನಾಮ ನಿರ್ದೇಶಕ ಸದಸ್ಯರಾದ ಸುರೇಶ್ ಶೆಟ್ಟಿ ಬನ್ನಂಜೆ ತಿಳಿಸಿರುತ್ತಾರೆ.

No Comments

Leave A Comment