.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........
ಇರಾನ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವವರೆಗೂ ದಿಗ್ಬಂಧನ ತೆರವುಗೊಳಿಸಲ್ಲ: ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಶಾಂತಿ ಒಪ್ಪಂದಕ್ಕೆ ಸಹಿ ಹಾಕುವವರೆಗೆ ಅಮೆರಿಕ ಇರಾನ್ ಬಂದರುಗಳ ಮೇಲಿನ ದಿಗ್ಬಂಧನ ತೆಗೆದುಹಾಕುವುದಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದಾರೆ. ದಿಗ್ಬಂಧನ ಇರಾನ್ ನ್ನು ನಾಶಪಡಿಸುತ್ತಿದ್ದು, ಒಪ್ಪಂದ ಅಂತಿಮವಾಗುವವರೆಗೂ ಅದನ್ನು ನಾವು ತೆರವುಗೊಳಿಸುವುದಿಲ್ಲ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.
ಇರಾನ್ ದಿನಕ್ಕೆ $500 ಮಿಲಿಯನ್ ಡಾಲರ್ ಕಳೆದುಕೊಳ್ಳುತ್ತಿದ್ದಾರೆ. ಅಲ್ಪಾವಧಿಯಲ್ಲಿಯೂ ಸಹ ಇದು ಸಮರ್ಥನೀಯವಲ್ಲದ ಸಂಖ್ಯೆಯಾಗಿದೆ. ಇರಾನ್ ಮತ್ತು ಅಮೆರಿಕ ಎರಡೂ ಪ್ರತ್ಯೇಕ ದಿಗ್ಬಂಧನ ವಿಧಿಸುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಹಡಗು ಸಂಚಾರಕ್ಕೆ ಮತ್ತೆ ಅಡಚಣೆಯಾಗಿದೆ.
ಮತ್ತೊಂದೆಡೆ ಟ್ರಂಪ್ ಎಚ್ಚರಿಕೆಗೆ ತಿರುಗೇಟು ನೀಡಿರುವ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್, ಇರಾನ್‌ನಲ್ಲಿ ಅಮೆರಿಕ ಸರ್ಕಾರದ ಬಗ್ಗೆ ಅಪನಂಬಿಕೆ ಇದೆ ಮತ್ತು ಇರಾನಿಯನ್ನರು ಬಲವಂತಕ್ಕೆ ಮಣಿಯುವುದಿಲ್ಲ ಎಂದು ಹೇಳಿದ್ದಾರೆ.
ಬದ್ಧತೆಗಳನ್ನು ಗೌರವಿಸುವುದು ಅರ್ಥಪೂರ್ಣ ಸಂವಾದದ ಆಧಾರವಾಗಿದೆ. ಅಮೆರಿಕ ಸರ್ಕಾರದ ನಡವಳಿಕೆಯ ಬಗ್ಗೆ ಇರಾನ್‌ನಲ್ಲಿ ಅಪನಂಬಿಕೆ ಉಳಿದಿದೆ, ಆದರೆ ಅಮೆರಿಕ ಅಧಿಕಾರಿಗಳು ಇರಾನ್‌ನ ಶರಣಾಗತಿಯನ್ನು ಬಯಸುತ್ತಾರೆ. ಇರಾನಿಯನ್ನರು ಬಲವಂತಕ್ಕೆ ಮಣಿಯುವುದಿಲ್ಲ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.
ಅಮೆರಿಕದ ನಿಯೋಗ ಪಾಕಿಸ್ತಾನಕ್ಕೆ ತೆರಳಲು ಸಿದ್ಧತೆ ನಡೆಸುತ್ತಿದ್ದಂತೆ ಅಮೆರಿಕದೊಂದಿಗೆ ಹೊಸ ಸುತ್ತಿನ ಶಾಂತಿ ಮಾತುಕತೆಗೆ ಹಾಜರಾಗಬೇಕೆ ಅಥವಾ ಬೇಡವೇ ಎಂಬುದನ್ನು ಇನ್ನೂ ನಿರ್ಧರಿಸಿಲ್ಲ ಎಂದು ಇರಾನ್ ಹೇಳಿದೆ.