.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........

ಅಡುಗೆ ಅನಿಲ ಬೆಲೆ ಏರಿಕೆ ಬಗ್ಗೆ ರಾಜ್ಯದ ಬಿಜೆಪಿ ನಾಯಕರು ಯಾಕೆ ಮಾತನಾಡುತ್ತಿಲ್ಲ ನೀವು ಬಾಯಿ ಬರದ ಮೂಖರೆ? ಸುರೇಶ್ ಶೆಟ್ಟಿ ಬನ್ನಂಜೆ ಸವಾಲು…

ಉಡುಪಿ:ರಾಜ್ಯದ ಬಿಜೆಪಿ ನಾಯಕರುಗಳು ನಮ್ಮ ರಾಜ್ಯದ ಜನಸಾಮಾನ್ಯರಿಗೆ ಕಾಂಗ್ರೆಸ್ ಪಕ್ಷದ ನೀಡುತ್ತಿರುವ ಗ್ಯಾರೆಂಟಿಯ ವಿರುದ್ಧ ದಿನನಿತ್ಯ ಯಾವುದಾದರೂ ಒಂದು ಹೇಳಿಕೆಯನ್ನು ನೀಡಿ ಜನರನ್ನು ತಪ್ಪು ದಾರಿಗೆ ಕೊಂಡೊಯ್ಯಲು ಪ್ರಯತ್ನಿಸುತ್ತಿದ್ದಾರೆ. ಈ ಬಿಜೆಪಿಯು ಯಾವತ್ತೂ ಈ ಗ್ಯಾರಂಟಿ ಯೋಜನೆಯ ವಿರೋಧಿಗಳು ಎಂಬುದು ಸಾಬೀತುಪಡಿಸಿದ್ದಾರೆ.

ಇದೀಗ ಅಮೆರಿಕದ ಕೈ ಗೊಂಬೆಯಾಗಿ ಕೇಂದ್ರ ಸರಕಾರ ನಡೆದುಕೊಂಡಿದ್ದು ನಮ್ಮ ದೇಶದ 150 ಕೋಟಿ ಜನಸಾಮಾನ್ಯರ ದೌರ್ಭಾಗ್ಯ. ಕೇಂದ್ರದ ಈ ಬಿಜೆಪಿ ಸರಕಾರದ ನಡೆಯಿಂದಾಗಿ ಜನಸಾಮಾನ್ಯರು ಬೆಲೆ ಏರಿಕೆಯಲ್ಲಿ ಬಾಳಬೇಕಾದಂತ ಪರಿಸ್ಥಿತಿ ಬಂದಿದೆ. ಇದಕ್ಕೆ ಪ್ರಮುಖ ಕಾರಣ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಮೋದಿಯ ಆಡಳಿತವೇ ಕಾರಣ.ಜನಸಾಮಾನ್ಯರು ಬಳಸುವಂತಹ ಗ್ರಹ ಬಳಕೆಯ ಅನಿಲದ ಬೆಲೆಯನ್ನು ಏರಿಸಿ ಜನಸಾಮಾನ್ಯರಿಗೆ ದ್ರೋಹ ಮಾಡುತ್ತಿರುವ ಈ ಮೋದಿ ಸರಕಾರದ ವಿರುದ್ಧ ರಾಜ್ಯದ ಬಿಜೆಪಿ ನಾಯಕರು ಮೂಕ ಪ್ರೇಕ್ಷಕರಂತೆ ಬಾಯಿ ಮುಚ್ಚಿಕೊಂಡು ಕುಳಿತಿರುವುದನ್ನು ನೋಡಿದರೆ ಇವರಿಗೆ ಜನಸಾಮಾನ್ಯರ ಬಗ್ಗೆ ಕಾಳಜಿ ಇಲ್ಲ ಎಂಬುದು ತೋರುತ್ತಿದೆ.

ಈ ಹಿಂದೆ ಕಾಂಗ್ರೆಸ್ ಸರ್ಕಾರ ನೀಡುತ್ತಿದ್ದ ಗ್ಯಾಸ್ ಸಬ್ಸಿಡಿಯನ್ನು ತೆಗೆದು ಜನರಿಗೆ ಮೋಸ ಮಾಡಿದ ಮೋದಿ ಸರ್ಕಾರ.ಇದೀಗ ನಿರಂತರವಾಗಿ ಬೆಲೆ ಏರಿಕೆಯನ್ನು ಮಾಡಿ ಜನಸಾಮಾನ್ಯರು ನೆಮ್ಮದಿಯಿಂದ ಬದುಕಲು ಬಿಡುತ್ತಿಲ್ಲ.ನಮ್ಮ ದೇಶದ ಜನಸಾಮಾನ್ಯರು ಸಂತೋಷದಿಂದ ಬಾಳಿ ಬದುಕಬೇಕಾದರೆ ಈ ಮೋದಿ ಸರ್ಕಾರ ಕೂಡಲೇ ಅಧಿಕಾರದಿಂದ ಕೆಳಗಿಳಿಯಬೇಕು . ನಾವು ಭಾರತೀಯರು ಅಮೆರಿಕದ ಕೈ ಗೊಂಬೆಗಳು ಅಲ್ಲ ಎಂಬುದನ್ನು ಎಲ್ಲಾ ಬಿಜೆಪಿ ನಾಯಕರು ಅರಿತುಕೊಳ್ಳಬೇಕು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರು ಹಾಗೂ ನಗರಸಭಾ ಸದಸ್ಯರಾದ ಸುರೇಶ್ ಶೆಟ್ಟಿ ಬನ್ನಂಜೆ ಇವರು ತಿಳಿಸಿರುತ್ತಾರೆ.

No Comments

Leave A Comment