.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........
ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಸಂಘ ಉಡುಪಿ ಘಟಕ -ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ…
ಉಡುಪಿ:09.03.2026 ರಂದು ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಸಂಘ ಉಡುಪಿ ಇದರ ಮಹಿಳಾ ಸದಸ್ಯರಿಂದ ಉಡುಪಿಯ ಸಿಂಡಿಕೇಟ್ ಟವರ್ಸ್ ನಲ್ಲಿ” “ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ – ನಾರಿ ಶಕ್ತಿ” ಯನ್ನು ಆಚರಿಸಲಾಯಿತು.
ಮುಖ್ಯ ಅತಿಥಿ ಯಾಗಿ ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಗೆ ಭಾಜನರಾದ, “ವಾತ್ಸಲ್ಯದ ಒಸಗೆ ” ಪುಸ್ತಕದ ಲೇಖಕಿ , ಹೆಸರಾಂತ ವೈದ್ಯೆ Dr ರಾಜಲಕ್ಷ್ಮಿ ಯವರು ” ಆರೋಗ್ಯ ಮತ್ತು ಮಹಿಳೆ” ಬಗ್ಗೆ ಉಪಯುಕ್ತ ಮಾಹಿತಿಯನ್ನು , ನೀಡಿದರು.
ಮಹಿಳೆಯರು ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಉತ್ತಮ ಆಹಾರ, ಧ್ಯಾನ, ವಿವಿಧ ಹವ್ಯಾಸ ಗಳ ಮೂಲಕ ಪಡೆದುಕೊಳ್ಳಬಹುದಾಗಿದೆ ಎಂದರು. ಶ್ರಿಯುತ ಯೋಗೀಶ್ ಭಟ್, ಸಂಚಾಲಕಿ ಶ್ರೀಮತಿ ವೈಜಯಂತಿ ಕಾಮತ್ ಹಾಗೂ ಅಧ್ಯಕ್ಷೆ ಶ್ರೀಮತಿ ಮಾಲತಿ ತಂತ್ರಿ ಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಲಾಯಿತು.ಶ್ರೀಮತಿ ವೈಜಯಂತಿ ಕಾಮತ್ ಸ್ವಾಗತಿಸಿ, ಶ್ರೀಮತಿ ಶಶಿಕಲಾ ರಾಜವರ್ಮ ಮುಖ್ಯ ಅತಿಥಿ ಯನ್ನು ಪರಿಚಯಿಸಿದರು. ಪ್ರಸ್ತುತ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ತೀರ ಅವಶ್ಯಕತೆ ಯಾಗಿರುವುದು ” ಸುರಕ್ಷಿತ ವಾತಾವರಣ ಹಾಗೂ ಭಧ್ರತೆ” ಎಂದು ಅಧ್ಯಕ್ಷೆ ಮಾಲತಿ ತಂತ್ರಿ ಯವರು ಅಭಿಪ್ರಾಯ ಪಟ್ಟರು.ಕೆ ಎಂ ನಾಯಕ್ ಕೇಂದ್ರೀಯ ಸಮಿತಿ ಸದಸ್ಯರು, ಸುಧೀಂದ್ರ ಭಂಡಾರಿ ಪ್ರಾದೇಶಿಕ ಕಾರ್ಯದರ್ಶಿ ಹಾಗೂ ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ನಿರೂಪಣೆ ಯನ್ನು ಶ್ರೀಮತಿ ಶಾಂತಲಾ ರಾವ್ ಅವರು ನಿರ್ವಹಿಸಿದರು. ಶ್ರೀಮತಿ ಜಯಲಕ್ಷ್ಮಿ ಬಡಕಿಲ್ಲಾಯರು ಧನ್ಯವಾದ ಸಮರ್ಪಿಸಿದರು. ಕೆಲವು ಮನೋರಂಜನಾ ಆಟಗಳು, “ಅದೃಷ್ಟ ಲಕ್ಷ್ಮೀ” ಎಂಬ ಲಕ್ಕಿ ಡ್ರಾ ಗಳಿದ್ದವು. ನಂತರ ಸಮೂಹ ಗಾನ, ಹಾಸ್ಯನಾಟಕ, ಅಷ್ಟ ಲಕ್ಷ್ಮೀ ರೂಪಕ ದ ಪ್ರದರ್ಶನದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.