ಎಪ್ರಿಲ್ 25ರ ಶನಿವಾರದ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದ ಪದ್ಮಸರೋವರ ಸ್ವಚತಾ ಕಾರ್ಯಕ್ರಮವು ಸಾಯ೦ಕಾಲ 6ಗ೦ಟೆಯಿ೦ದ ಆರ೦ಭಗೊಳ್ಳಲಿದೆ. ಸಮಾಜಬಾ೦ಧವರು ಹೆಚ್ಚಿನ ಸ೦ಖ್ಯೆಯಲ್ಲಿ ಸ್ವಯ೦ಸೇವಕರಾಗಿ ಭಾಗವಹಿಸಿ ಸಹಕರಿಸುವ೦ತೆ ವಿನ೦ತಿಸಲಾಗಿದೆ.

ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷರಾಗಿ ಎಂ ವಸಂತ್ ಕಿಣಿ ಆಯ್ಕೆ

ಉಡುಪಿ:ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ 33ನೇ ವಾರ್ಷಿಕ ಮಹಾಸಭೆಯು ತಾ .20-09-2025 ರಂದು ಅಧ್ಯಕ್ಷರಾದ ಹರೀಶ್ ಕುಂದರ್ ರವರ ಅಧ್ಯಕ್ಷತೆಯಲ್ಲಿ ಅಂಬಾಗಿಲಿನ ಅಮೃತ ಗಾರ್ಡನ್ ಸಭಾಂಗಣದಲ್ಲಿ ಜರುಗಿತು.

ಸಂಘದ ಮಾಜಿ ಅಧ್ಯಕ್ಷರಾದ ಕೆ ಪ್ರಶಾಂತ್ ಬಾಳಿಗಾ ಮತ್ತು ಎಲ್ಲ ಪೂರ್ವ ಅಧ್ಯಕ್ಷರು ಸೇರಿ ಎಂ ವಿಶ್ವೇಶ್ವರಯ್ಯ ಅವರ ಭಾವ ಚಿತ್ರಕ್ಕೆ ಮಾಲಾರ್ಪಣೆಗೈದು ಗೌರವ ಸೂಚಿಸಿದರು.

ಎಂ ವಸಂತ್ ಕಿಣಿ , ಆನಂದ್ ಪಾಲಿಮರ್ಸ್ ಹಿರಿಯಡ್ಕ ಇವರು 2025-26 ನೇ ಸಾಲಿನ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಉಪಾಧ್ಯಕ್ಷರಾಗಿ, ಎಂ ವಲ್ಲಭ್ ಭಟ್, ಹೃಷಿಕೇಶ್ ಹೆಗ್ಡೆ, ಹಾಗೂ ಕೃಷ್ಣ ಪ್ರಸಾದ್ ಶೆಟ್ಟಿ ಕಾರ್ಯದರ್ಶಿಯಾಗಿ ಕೆ ರಂಜನ್ ಕಲ್ಕೂರ , ಕೋಶಾಧಿಕಾರಿಯಾಗಿ ಆನಂದ್ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಕೆ. ಮಹೇಶ್ ಉಡುಪ, ಸಮೀರ್ ಮೊಹಮ್ಮದ್ ಹಾಗೂ ಸುರೇಂದ್ರ ನಾಯಕ್ ಅವರು ಅವಿರೋಧವಾಗಿ ಆಯ್ಕೆಯಾದರು.

ನಿಕಟ ಪೂರ್ವ ಅಧ್ಯಕ್ಷರಾದ ಹರೀಶ್ ಕುಂದರ್ ರವರು, ಕಾರ್ಯದರ್ಶಿ ಕೃಷ್ಣ ಪ್ರಸಾದ್ ಶೆಟ್ಟಿ ಹಾಗೂ ರಂಜಾನ್ ಕಲ್ಕೂರ ರವರು ಹೊಸದಾಗಿ ಆಯ್ಕೆಯಾದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಖಜಾಂಚಿ ಯವರಿಗೆ ಅಧಿಕಾರ ಹಸ್ತಾಂತರಿಸಿದರು.

ಸಂಘದ ಸ್ಥಾಪಕ ಅಧ್ಯಕ್ಷರಾದ ವಿನ್ಸೆಂಟ್ ಪಿಂಟೋ ರವರ ಸುಧೀರ್ಘ ಸೇವೆಗಾಗಿ ಸಂಘದ ವತಿಯಿಂದ ಸನ್ಮಾನಿಸಲಾಯಿತು. ತಮ್ಮ ನುಡಿಯಲ್ಲಿ ಸಂಘವು ನಡೆದು ಬಂದ ಹಾದಿಯ ಬಗ್ಗೆ ಹಾಗೂ ಸಂಘದ ಪದಾಧಿಕಾರಿಗಳ ಶುಭಾಂಶನೆಗೈದರು.

ಸಂಘದ ಮಾಜಿ ಅಧ್ಯಕ್ಷರುಗಳಾದ ಎಂ. ವಿಶ್ವನಾಥ ಭಟ್ , ಜಾನ್ ಡಿ ಸಿಲ್ವಾ ಹಾಗೂ ಎಂ. ಚಿತ್ತರಂಜನ್ ಭಟ್ ರವರು ಶುಭಾಂಶನೆಗೈದರು.  ಸಂಘದ ಮಾಜಿ ಅಧ್ಯಕ್ಷರಾದ ಎಂ.ಗಣೇಶ್ ಕಿಣಿ ಹಾಗೂ ಸದಸ್ಯರಾದ ಎಂ.ವಾಮನ್ ಭಟ್ ಕಾರ್ಯಕ್ರಮ ನಿರ್ವಹಿಸಿದರು.

No Comments

Leave A Comment