ಶ್ವೇತಭವನದಲ್ಲಿ ಪಾಕ್ ಸೇನಾ ಮುಖ್ಯಸ್ಥ ಮುನೀರ್ ಗೆ ಟ್ರಂಪ್ ಔತಣ: ಮೋದಿ ಆಲಿಂಗನಕ್ಕೆ ದೊಡ್ಡ ಹೊಡೆತ - ಕಾಂಗ್ರೆಸ್....
ಬಿಜೆಪಿ-ಜೆಡಿಎಸ್ ನಾಯಕರು ಸಾವಿನಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು ನೊಂದ ಕುಟುಂಬಗಳಿಗೆ ಸಾಂತ್ವನ ಹೇಳುವ ಕೆಲಸವನ್ನು ಮಾಡಲಿ- ಕೇಂದ್ರ ಸರಕಾರದಿಂದ ಪರಿಹಾರವನ್ನು ಒದಗಿಸಿಕೊಡಲಿ : ಸುರೇಶ್ ಶೆಟ್ಟಿ ಬನ್ನಂಜೆ
ಉಡುಪಿ:ಮೊನ್ನೆ ಬೆಂಗಳೂರಿನಲ್ಲಿ ನಡೆದ ದುರಂತ ಖಂಡಿತವಾಗಿಯೂ ಎಲ್ಲರನ್ನು ದುಃಖ ಭರಿತರನ್ನಾಗಿ ಮಾಡಿದೆ ಆದರೆ ಈ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಈ ದುಃಖದ ನಡುವೆ ತಮ್ಮ ರಾಜಕೀಯ ಇಚ್ಛಾ ಶಕ್ತಿ ಹಾಗೂ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿರುವುದು ನಮ್ಮೆಲ್ಲರ ದೊಡ್ಡ ದುರಂತ. ಇವರು ಅಧಿಕಾರಕ್ಕಾಗಿ ಯಾವ ಮಟ್ಟಕ್ಕೂ ಇಳಿಯುತ್ತಾರೆ.
ಕೇವಲ ಅಧಿಕಾರಕ್ಕಾಗಿ ಹೆಣಗಳ ಮೇಲೆ ರಾಜಕೀಯ ಮಾಡಿ ಹದ್ದುಗಳಂತೆ ವರ್ತಿಸುತ್ತಿದ್ದಾರೆ. ಎರಡು ಪಕ್ಷಗಳ ಬಗ್ಗೆ ಜನರು ಈಗಲೇ ತಿಳಿದುಕೊಂಡಿದ್ದು ಡೋಂಗಿತನ ನಮ್ಮ ರಾಜ್ಯದಲ್ಲಿ ನಡೆಯುವುದಿಲ್ಲ ಎಂಬುದನ್ನು ಈ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ತಿಳಿದಿರಲಿ. ಕೇಂದ್ರ ಸರಕಾರದಲ್ಲಿ ಆಟಕ್ಕಿಲ್ಲ ಲೆಕ್ಕಕ್ ಉಂಟು ಎಂಬುದು ಕುಮಾರಸ್ವಾಮಿಯವರ ಪರಿಸ್ಥಿತಿಯಾಗಿದೆ.
ಅವರಿಗೆ ಗತಿ ಇಲ್ಲದಂತಾಗಿದೆ ಅದಕ್ಕಾಗಿ ಇಲ್ಲಿ ಬಂದು ನಮ್ಮ ನಾಯಕರು ರಾಜೀನಾಮೆ ಕೊಡಬೇಕೆಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಇನ್ನು ಬಿಜೆಪಿಯ ಅಧ್ಯಕ್ಷ ವಿಜಯೇಂದ್ರ ಇವರ ಪರಿಸ್ಥಿತಿ ಇನ್ನೂ ಭಿನ್ನವಾಗಿದೆ ಇಡೀ ರಾಜ್ಯದಲ್ಲಿ ಶಿವಮೊಗ್ಗ ಜಿಲ್ಲೆ ಹೊರತುಪಡಿಸಿ ಎಲ್ಲಾ ಜಿಲ್ಲೆಗಳಲ್ಲಿ ಬಿಜೆಪಿ ಕಾರ್ಯಕರ್ತರು ಇವರನ್ನು ವಿರೋಧಿಸುತ್ತಿದ್ದಾರೆ. ಇದನ್ನೆಲ್ಲ ಮರೆಮಾಚಲು ನಮ್ಮ ರಾಜ್ಯದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರ ರಾಜೀನಾಮೆ ಕೇಳುತ್ತಿದ್ದಾರೆ ಇದರ ಹಿಂದೆ ಆರ್ ಎಸ್ ಎಸ್ ಕೈವಾಡ ಇದೆ.
ಪಹಲ್ ಗಾಮ್ ದಾಳಿಯ ಬಗ್ಗೆ ಕೇಂದ್ರ ಸರಕಾರದ ಗುಪ್ತಚರ ಇಲಾಖೆಯ ವೈಫಲ್ಯ ಇದ್ದು ಅಲ್ಲಿ 28 ಜನ ಮರಣ ಹೊಂದಿದ್ದು ಅದರ ಬಗ್ಗೆ ಕೇಂದ್ರ ಸರಕಾರದ ವಿರುದ್ಧ ಮೋದಿ ಹಾಗೂ ಅಮಿತ್ ಶಾ ರಾಜೀನಾಮೆ ಕೇಳದೆ ಕಣ್ಣು ಮುಚ್ಚಿ ಕುಳಿತು ಕೇವಲ ತಮ್ಮ ರಾಜಕೀಯ ಅಭಿಲಾಷೆಗಾಗಿ ರಾಜ್ಯ ಸರ್ಕಾರದ ವಿರುದ್ಧ ಹೇಳಿಕೆಯನ್ನು ನೀಡುತ್ತಿದ್ದಾರೆ. 40% ಕಮಿಷನ್ ಸಿಗದೆ ಈ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಹುಚ್ಚರಂತಾಗಿದ್ದಾರೆ ಅದಕ್ಕಾಗಿ ಮನವಂದಂತೆ ವರ್ತಿಸಿ ಹೆಣದ ಮೇಲೆ ರಾಜಕೀಯ ಮಾಡುತ್ತಾ ನಾಯಕರು ಹುಚ್ಚರಂತಾಗಿದ್ದಾರೆ. ಅದಕ್ಕಾಗಿ ಮನವಂದಂತೆ ವರ್ತಿಸಿ ಹೆಣದ ಮೇಲೆ ರಾಜಕೀಯ ಮಾಡುತ್ತಿದ್ದಾರೆ ಇದನ್ನು ನಮ್ಮ ರಾಜ್ಯದ ಜನಸಾಮಾನ್ಯರು ಅರ್ಥೈಸಿಕೊಂಡು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಉಡುಪಿ ಬ್ಲಾಕ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರು ಉಡುಪಿ ನಗರಸಭಾ ಸದಸ್ಯರಾದ ಸುರೇಶ್ ಶೆಟ್ಟಿ ಬನ್ನಂಜೆ ವಿನ೦ತಿಸಿಕೊ೦ಡಿದ್ದಾರೆ.