ಶ್ವೇತಭವನದಲ್ಲಿ ಪಾಕ್ ಸೇನಾ ಮುಖ್ಯಸ್ಥ ಮುನೀರ್ ಗೆ ಟ್ರಂಪ್ ಔತಣ: ಮೋದಿ ಆಲಿಂಗನಕ್ಕೆ ದೊಡ್ಡ ಹೊಡೆತ - ಕಾಂಗ್ರೆಸ್....

ಉಡುಪಿ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆ “ಉಡುಪಿ ದಿಂಡಿ” ಮೆರವಣಿಗೆ ಸಂಪನ್ನ

ಉಡುಪಿ:ಜೂ.01. ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆ ಉಡುಪಿ ಶತಮಾನೋತ್ತರ ರಜತ ಮಹೋತ್ಸವ 125 ವರ್ಷದ ಆಚರಣೆ ಪ್ರಯುಕ್ತ 125 ದಿನ ಅಹೋರಾತ್ರಿ ನಿರಂತರ ಭಜನಾ ಮೊಹೋತ್ಸವದ ಪರ್ವಕಾಲದಲ್ಲಿ ಶ್ರೀದೇವರ ಸನ್ನಿಧಿಯಲ್ಲಿ ವಿವಿಧ ಬಗೆಯ ಹೂ-ಹಣ್ಣು ಹ೦ಪಲುಗಳಿಂದ ವಿಶೇಷ ಅಲಂಕಾರ ನಡೆಸುವುದರೊ೦ದಿಗೆ ಹಾಗೂ ಸಂಜೆ 5 ಗಂಟೆಗೆ ಪುರಾಣ ಪ್ರಸಿದ್ಧ ಭಜನಾ ದಿಂಡಿ ಮೆರವಣಿಗೆ ನೆಡೆಯಿತು.

ಶ್ರೀ ಕಾಶೀ ಮಠ ಸಂಸ್ಥಾನದ ಮಠಾಧಿಪತಿ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀಪಾದಂಗಳವರು ದೇವಳಕ್ಕೆ ಆಗಮಿಸಿದಾಗ ದೇವಳದವತಿಯಿಂದ ಭವ್ಯ ಸ್ವಾಗತ ನೀಡಿ ಗೌರವಿಸಲಾಯಿತು. ಶ್ರೀಪಾದರು ಭಜನಾ ದಿಂಡಿ ಉತ್ಸವ ಮೆರವಣಿಗೆಗೆ ದೀಪ ಬೆಳಗಿಸಿ ಚಾಲನೆ ನೀಡಿದರು. ಶ್ರೀಪಾದರನ್ನು ವಿಶೇಷ ಹೂಗಳಿಂದ ಅಲಂಕೃತ ವಾಹನದಲ್ಲಿ ಪೀಠದಲ್ಲಿ ಕುಳಿತು ಭಜನಾ ದಿಂಡಿ ಉತ್ಸವದಲ್ಲಿ ಪಾಲ್ಗೊಂಡು ಭಕ್ತಾಧಿಗಳನ್ನು ಅನುಗ್ರಹಿಸಿದರು .

ಪರಪೂಜ್ಯ ಗುರುಗಳ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ಶತಮಾನೋತ್ಸವದ ಈ ಶುಭ ಸಂದರ್ಭದಲ್ಲಿ ಗುರುಗಳ ಆರಾಧನೆ ಅಂಗವಾಗಿ ದಿವ್ಯ ಸ್ವರ್ಣ ಪಾದುಕೆ ಮೆರವಣಿಗೆಯಲ್ಲಿ ಸಾಗಿಬಂತು.ಭಕ್ತರೂ ಅಲ್ಲಲ್ಲಿ ಆರತಿ ನೀಡಿ ಪೂಜೆ ಸಲ್ಲಿಸಿದರು.
ಶ್ರೀ ವಿಠೋಬಾ ರುಖುಮಾಯಿ ಸನ್ನಿಧಿಯಲ್ಲಿ ಸಮೂಹಿಕ ಪ್ರಾರ್ಥನೆ ಗೈದು ಉಡುಪಿ ದೇವಳದಿಂದ ಹೊರಟು ಐಡಿಯಲ್ ಸರ್ಕಲ್, ಹಳೇ ಡಯಾನ ಸರ್ಕಲ್ , ತ್ರಿವೇಣಿ ಸರ್ಕಲ್, ಚಿತ್ತರಂಜನ್ ವೃತ್ತ ,ಕೊಳದಪೇಟೆಯಾಗಿ ದೇವಳಕ್ಕೆ ಬಂದು ತಲುಪಿತು.

ಸಾವಿರಾರು ಭಕ್ತರೂ ಸಮವಸ್ತ್ರ ಧರಿಸಿ ಪಾಲ್ಗೊಂಡರು, ಮೆರವಣಿಗೆಯಲ್ಲಿ ವಿಶೇಷವಾಗಿ ಶ್ರೀವಿಠೋಬರುಖುಮಾಯಿ,ಶ್ರೀ ಪುರಂದರದಾಸ, ಶ್ರೀ ಕನಕದಾಸ ವೇಷ ಧರಿಸಿ ಮೆರಗಿ ಹೆಚ್ಚಿಸಿದರು. ಸಾವಿರಾರು ಪುರುಷರು,ಮಹಿಳಾಯರು,ಯುವಕ, ಯುವತಿಯರು ಭಜನೆ ಸಂಕೀರ್ತನೆ ಹಾಡಿ ನಲಿದು ಕುಣಿದಾಡಿದರು. ವಿಶೇಷ ಆಕರ್ಷಣೆಯ ಭವ್ಯ ದಿಂಡಿ ಉತ್ಸವದಲ್ಲಿ ಊರ ಪರಊರಿನ ವಿವಿಧ ಭಜನಾ ತಂಡಗಳು ಭಾಗವಹಿಸಿದ್ದರು.

ಸಮಾರಂಭದಲ್ಲಿ ಭಜನಾ ರೂವಾರಿ ಮಟ್ಟಾರ್ ಸತೀಶ್ ಕಿಣಿ , ಆಡಳಿತ ಮೊಕ್ತೇಸರ ಪಿ ವಿ ಶೆಣೈ, ನರಹರಿ ಪೈ, ವಿಶಾಲ್ ಶೆಣೈ, ಉಮೇಶ್ ಪೈ, ಭಾಸ್ಕರ್ ಶೆಣೈ, ದೀಪಕ್ ಭಟ್ , ದಯಾಘನ್ ಭಟ್ ಹಾಗೂ ಎ೦.ವಿಶ್ವನಾಥ್ ಭಟ್, ವಸಂತ ಕಿಣೆ ,ಅಲೆವೂರು ಗಣೇಶ್ ಕಿಣಿ, ಆಡಳಿತ ಮಂಡಳಿಯ ಸದಸ್ಯರು, ಜಿ.ಎಸ್. ಬಿ ಯುವಕ ಮಂಡಳಿ , ಭಗಿನಿ ವೃಂದ , ಜಿ ಎಸ್ ಬಿ ಮಹಿಳಾ ಮಂಡಳಿ, ಶತಮಾನೋತ್ತರ ರಜತ ಭಜನಾ ಮಹೋತ್ಸವ ಸಮಿತಿಯ ಸದಸ್ಯರು ಸಹಕರಿಸಿದರು.

kiniudupi@rediffmail.com

No Comments

Leave A Comment