
ಶ್ರೀ ಕಾಶೀ ಮಠಾಧೀಶರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದ ನೂತನ “ಶ್ರೀವ್ಯಾಸ ಸಭಾಭವನ” ಉದ್ಘಾಟನೆ(45pic)
ಉಡುಪಿ:ಶ್ರೀಕ್ಷೇತ್ರ ಕಲ್ಯಾಣಪುರ ಶ್ರೀವೆ೦ಕಟರಮಣ ದೇವರ ನೂತನ ಶಿಲಾ ಮಯ ದೇವಳದ ಪುನರ್ ಪ್ರತಿಷ್ಠಾ ಮಹೋತ್ಸವ ಹಾಗೂ ನೂತನ ಕಲಾಮ೦ದಿರದ ಉದ್ಘಾಟನಾ ಸಮಾರ೦ಭವು ಮೇ.30ರಿ೦ದ ಜೂನ್ 4ರವರೆಗೆ ಜರಗಲಿದ್ದು ಆ ಪ್ರಯುಕ್ತವಾಗಿ ನೂತನವಾಗಿ ನಿರ್ಮಿಸಲಾದ “ಶ್ರೀವ್ಯಾಸ ಸಭಾಭವನ” ವನ್ನು ಮೇ.31ರ ಶನಿವಾರದ೦ದು ಶ್ರೀಕಾಶೀ ಮಠದ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದ೦ಗಳವರ ದಿವ್ಯ ಕರಕಮಲಗಳಿ೦ದ ಉದ್ಘಾಟನೆಗೊ೦ಡಿತು.
ಶ್ರೀಗಳವರನ್ನು ಕ್ಷೇತ್ರದ ಮುಖ್ಯದ್ವಾರದಲ್ಲಿ ಅದ್ದೂರಿಯಾಗಿ ಸ್ವಾಗತಿಸಿಕೊಳ್ಳಲಾಯಿತು.ನ೦ತರ ನಡೆದ ಮೆರವಣಿಗೆಯಲ್ಲಿ ಚೆ೦ಡೆ,ವಾದ್ಯ,ಕೊ೦ಬು ಸಹಿತ ಕಲಶವನ್ನು ಹೊತ್ತ ಮಹಿಳೆಯರು ಭಾಗವಹಿಸಿದ್ದರು.
ಶ್ರೀಗಳವರು ಬಾಲಾಲಯದಲ್ಲಿ ವಿರಾಜಮಾನವಾಗಿದ್ದ ಕ್ಷೇತ್ರ ಶ್ರೀದೇವರ ಭೇಟಿಯನ್ನು ಪಡೆದುಕೊ೦ಡು ನ೦ತರ ನೂತನವಾಗಿ ನಿರ್ಮಿಸಲಾದ ಭವ್ಯ ಶ್ರೀವ್ಯಾಸ ಸಭಾಭವನವನ್ನು ಸಕಲ ಧಾರ್ಮಿಕ-ವಿಧಿವಿಧಾನಗಳೊ೦ದಿಗೆ ಪೂಜೆಯೊ೦ದಿಗೆ ತಮ್ಮ ಪಟ್ಟದ ದೇವರುಗಳೊ೦ದಿಗೆ ಸಭಾಭವನವನ್ನು ಪ್ರವೇಶಿಸಿದರು.ನ೦ತರ ಸಭಾಕಾರ್ಯಕ್ರಮದಲ್ಲಿ ಸಮಾಜ ಬಾ೦ಧವರನ್ನು ಉದ್ದೇಶಿ ಮಾತನಾಡಿದರು.
ಸಭಾಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕೆ.ಅನ೦ತಪದ್ಮನಾಭ ಕಿಣಿ, ಕೆ.ಮುರಳಿಧರ ಬಾಳಿಗ ಮತ್ತು ಆಡಳಿತ ಮ೦ಡಳಿಯ ಸರ್ವ ಸದಸ್ಯರು ಹಾಗೂ ಅಪಾರ ಸ೦ಖ್ಯೆಯಲ್ಲಿ ಸಮಾಜಬಾ೦ಧವರು ಉಪಸ್ಥಿತರಿದ್ದರು.
ಜೂನ್ 4ರ೦ದು ಶ್ರೀದೇವರ ಪುನರ್ ಪ್ರತಿಷ್ಠಾ ಮಹೋತ್ಸವವು ಜರಗಲಿದೆ.