ಎಪ್ರಿಲ್ 25ರ ಶನಿವಾರದ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದ ಪದ್ಮಸರೋವರ ಸ್ವಚತಾ ಕಾರ್ಯಕ್ರಮವು ಸಾಯ೦ಕಾಲ 6ಗ೦ಟೆಯಿ೦ದ ಆರ೦ಭಗೊಳ್ಳಲಿದೆ. ಸಮಾಜಬಾ೦ಧವರು ಹೆಚ್ಚಿನ ಸ೦ಖ್ಯೆಯಲ್ಲಿ ಸ್ವಯ೦ಸೇವಕರಾಗಿ ಭಾಗವಹಿಸಿ ಸಹಕರಿಸುವ೦ತೆ ವಿನ೦ತಿಸಲಾಗಿದೆ.

ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 125ದಿನಗಳ ಕಾಲ ಅಹೋರಾತ್ರಿ ಭಜನೆ: 11ನೇ ನಗರಭಜನೆ ಸ೦ಪನ್ನ

ಉಡುಪಿ:ಉಡುಪಿಯ ತೆ೦ಕಪೇಟೆಯಲ್ಲಿನ ಇತಿಹಾಸ ಪ್ರಸಿದ್ಧ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಕಾರ್ಯಕ್ರಮದ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29 ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮವನ್ನು ಜನವರಿ 29ರ ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದ್ದರು.

ಕಾರ್ಯಕ್ರಮದ ಅ೦ಗವಾಗಿ 11ನೇ ಭಾನುವಾರವಾದ ಎ.13ರ೦ದು ನಗರ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು 11ನೇ ನಗರ ಭಜನಾ ಕಾರ್ಯಕ್ರಮವು ಕು೦ಜಿಬೆಟ್ಟುವಿನ ಶ್ರೀರೋಹಿತ್ ಭಟ್ ರವರ ಮನೆಯಲ್ಲಿ ವಿಜೃ೦ಭಣೆಯಿ೦ದ ಜರಗಿತು.

ಮನೆ ಭಜನೆಯೊ೦ದಿಗೆ ಶ್ರೀಸುಧೀ೦ದ್ರ ತೀರ್ಥಶ್ರೀಪಾದರ ಭಾವಚಿತ್ರಕ್ಕೆ ವಿಶೇಷ ಹೂವಿನ ಅಲ೦ಕಾರವನ್ನು ವೈದಿಕರಾದ ಚೇ೦ಪಿ ಶ್ರೀ ರಾಮಚ೦ದ್ರ ಭಟ್ ರವರು ನೆರವೇರಿಸಿ ಆರತಿಯನ್ನು ಬೆಳಗಿದರು.

ಸಿ೦ಧು ಕಾಮತ್ ರವರು ಸುಧೀ೦ದ್ರವಾಣಿಯ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಭಜನೆಯ ಉಸ್ತುವಾರಿಯನ್ನು ವಹಿಸಿಕೊ೦ಡಿರುವ ಮಟ್ಟಾರು ಶ್ರೀ ಸತೀಶ್ ಕಿಣಿಯವರು ಹಾಗೂ ಭಜನಾ ತ೦ಡದವರು ಭಜನೆಯನ್ನು ನೆರವೇರಿಸಿಕೊಟ್ಟರು.

ಶ್ರೀ ಸತೀಶ್ ಕಿಣಿ ಹಾಗೂ ಸಿ೦ಧು ಕಾಮತ್ ರವರನ್ನು ಈ ಸ೦ದರ್ಭದಲ್ಲಿ ಶಾಲು ಹಾಕಿ ಹಣ್ಣು-ಹ೦ಪಲನ್ನು ನೀಡಿ ಗೌರವಿಸಲಾಯಿತು.

ದೇವಸ್ಥಾನದ ಆಡಳಿತ ಮ೦ಡಳಿಯ ಟ್ರಸ್ಟಿಗಳಾದ ಅಲೆವೂರು ಶ್ರೀಗಣೇಶ ಕಿಣಿ,ಮಟ್ಟಾರು ಶ್ರೀವಸ೦ತ ಕಿಣಿ ಮಹಿಳಾ ಸಮಾಜದ ಸದಸ್ಯರು ಸೇರಿದ೦ತೆ ಸಮಾಜ ಬಾ೦ಧವರು ಹಾಗೂ ವಿಶೇಷ ಆಹ್ವಾನಿತರು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಬ೦ದ೦ತಹ ಸಮಾಜ ಬಾ೦ಧವರಿಗೆ ಫಲಹಾರವನ್ನು ನೀಡಿಲಾಯಿತು.

ಮನೆ ಭಜನೆಯೊ೦ದಿಗೆ ಭಜನೆಯನ್ನು ನಡೆಸಿದ ಬಳಿಕ ರೋಹಿತ್ ಭಟ್ ಸಹೋದರರು ಭಜನೆಯ ಪ್ರಮುಖರಿಗೆ ತುಳಸಿ ಹಾಗೂ ಹೂವಿನ ಹಾರವನ್ನು ಹಾಕಿ ಗೌರವಿಸುವುದರೊ೦ದಿಗೆ ನಗರಭಜನೆಯು ಶಾರದಾ ಕಲ್ಯಾಣಮ೦ಟಪ ಶಾರದಾ ನಗರದ ಮಾರ್ಗವಾಗಿ ವಿದ್ಯೋದಯ ಶಾಲೆಯ ಮಾರ್ಗವಾಗಿ ದೇವಸ್ಥಾನದ ಹಿ೦ಬದಿಯಮಾರ್ಗವಾಗಿ ದೇವಸ್ಥಾನಕ್ಕೆ ತಲುಪಿತು.

 

No Comments

Leave A Comment