ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
instagram ಗೀಳು, ಯೂಟ್ಯೂಬರ್ ಜೊತೆ ಅಕ್ರಮ ಸಂಬಂಧ; ಪ್ರಶ್ನಿಸಿದ ಪತಿಯನ್ನೇ ಕೊಂದ ಪತ್ನಿ, CCTV ಹೇಳಿದ ಸತ್ಯ
ಚಂಡೀಗಢ: ಮೀರತ್‌ನಲ್ಲಿ ನಡೆದ ಸೌರಭ್ ಕೊಲೆ ಪ್ರಕರಣವನ್ನೇ ನೆನಪಿಸುವ ಮತ್ತೊಂದು ಭೀಕರ ಹತ್ಯೆ ಹರ್ಯಾಣದಲ್ಲಿ ವರದಿಯಾಗಿದ್ದು, ಸಾಮಾಜಿಕ ಜಾಲತಾಣದ ಗೀಳು ಹಚ್ಚಿಸಿಕೊಂಡಿದ್ದ ಪತ್ನಿ ಯೂಟ್ಯೂಬರ್ ಜೊತೆ ಅಕ್ರಮ ಸಂಬಂಧ ಹೊಂದಿ ಅದನ್ನು ಪ್ರಶ್ನಿಸಿದ ಗಂಡನನ್ನೇ ಕೊಂದು ಮುಗಿಸಿದ್ದಾಳೆ.
ಹರ್ಯಾಣದ ಭಿವಾನಿಯಲ್ಲಿ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದು, ಪತಿ ಪ್ರವೀಣ್ ನನ್ನು ಕೊಲೆ ಮಾಡಿದ ಆರೋಪದ ಮೇರೆಗೆ ಆತನ ಪತ್ನಿ ರವೀನಾ ಮತ್ತು ಹರ್ಯಾಣದ ಯೂಟ್ಯೂಬರ್ ಸುರೇಶ್ ಎಂಬುವವರರನ್ನು ಪೊಲೀಸರು ಬಂಧಿಸಿದ್ದಾರೆ. ಈ ಕೊಲೆ ಸ್ಥಳೀಯ ಸಮುದಾಯವನ್ನು ಬೆಚ್ಚಿಬೀಳಿಸಿದ್ದು, ಸಾಮಾಜಿಕ ಮಾಧ್ಯಮದ ಗೀಳು ಮತ್ತು ವಿವಾಹೇತರ ಸಂಬಂಧಗಳ ಕರಾಳ ಮುಖವನ್ನು ಬೆಳಕಿಗೆ ತಂದಿದೆ.
ಭಿವಾನಿಯ ಹಳೆಯ ಬಸ್ ನಿಲ್ದಾಣದ ಬಳಿಯ ಗುಜ್ರೋನ್ ಕಿ ಧಾನಿಯ ನಿವಾಸಿ ಪ್ರವೀಣ್ (35), ರೇವಾರಿ ಜಿಲ್ಲೆಯ ಜೂಡಿ ಗ್ರಾಮದ ರವೀನಾ (32) ಅವರನ್ನು ವಿವಾಹವಾಗಿದ್ದರು. ದಂಪತಿಗೆ ಆರು ವರ್ಷದ ಮಗ ಮುಕುಲ್ ಇದ್ದಾನೆ. ಪ್ರಸುತ ಈ ಮಗು ತನ್ನ ಅಜ್ಜ ಸುಭಾಷ್ ಮತ್ತು ಚಿಕ್ಕಪ್ಪ ಸಂದೀಪ್ ಜೊತೆ ವಾಸಿಸುತ್ತಿದ್ದಾನೆ.
ಇನ್ಸ್ಟಾಗ್ರಾಂ ಗೀಳು ಹಚ್ಚಿಸಿಕೊಂಡಿದ್ದ ರವೀನಾ…
ರವೀನಾ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿ ಕಾಣಿಸಿಕೊಂಡು ಹೆಸರುವಾಸಿಯಾಗಿದ್ದಳು. ಇನ್‌ಸ್ಟಾಗ್ರಾಮ್‌ನಲ್ಲಿ 34,000 ಕ್ಕೂ ಹೆಚ್ಚು ಫಾಲೋವರ್ಸ್ ರನ್ನು ಕೂಡ ಹೊಂದಿದ್ದಳು. ಈಗ್ಗೇ ರವೀನಾಗೆ ಸಾಮಾಜಿಕ ಜಾಲತಾಣದಲ್ಲಿ ಯೂಟ್ಯೂಬರ್ ಸುರೇಶ್ ಪರಿಚಯವಾಗಿದ್ದು, ಕ್ರಮೇಣ ಇಬ್ಬರೂ ಸೇರಿ ಇನ್ ಸ್ಟಾ ರೀಲ್ಸ್ ಮಾಡುತ್ತಿದ್ದರು. ಸುರೇಶ್ ಮೂಲತಃ ಹಿಸಾರ್‌ನ ಪ್ರೇಮ್‌ನಗರ ನಿವಾಸಿಯಾಗಿದ್ದು ಈತ ಕೂಡ ಯೂಟ್ಯೂಬ್ ನಲ್ಲಿ ಸಕ್ರಿಯನಾಗಿದ್ದ.
ಇನ್‌ಸ್ಟಾಗ್ರಾಮ್‌ನಲ್ಲಿ ಸಂಪರ್ಕ ಸಾಧಿಸಿದ ನಂತರ ತಾನು ಮತ್ತು ರವೀನಾ ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ಸಂಪರ್ಕದಲ್ಲಿದ್ದರು. ಇಬ್ಬರೂ ಒಟ್ಟಿಗೆ ಸಣ್ಣ ಸಣ್ಣ ವೀಡಿಯೊಗಳನ್ನು ಮಾಡುತ್ತಿದ್ದರು. ಇದು ರವೀನಾ ಪತಿ ಪ್ರವೀಣ್ ಗೆ ಇಷ್ಟವಿರಲಿಲ್ಲ. ಆತನಿಗೆ ರವೀನಾ ದಾರಿ ತಪ್ಪುತ್ತಾಳೆ ಎಂಬ ಭಯವಿತ್ತು. ಹೀಗಾಗಿ ರೀಲ್ಸ್ ಮಾಡದಂತೆ ಬುದ್ದಿ ಹೇಳುತ್ತಿದ್ದ. ಆದಾಗ್ಯೂ ರವೀನಾ ವಿಡಿಯೋಗಳನ್ನು ಮಾಡುವುದುನ್ನು ಮುಂದುವರೆಸಿದ್ದಳು.
ಪತ್ನಿ ರವೀನಾಳ ಈ ನಡೆಯಿಂದಾ ಪ್ರವೀಣ್ ಆಗಾಗ ಆಕ್ರೋಶಗೊಳ್ಳುತ್ತಿದ್ದ. ಇದೇ ಕಾರಣಕ್ಕೆ ದಂಪತಿಗಳ ನಡುವೆ ಆಗಾಗ ಜಗಳ ಕೂಡ ನಡೆಯುತ್ತಿತ್ತು. ಹಲವು ಬಾರಿ ರವೀನಾ ವಿಡಿಯೋ ಶೂಟ್ ಮಾಡಲು ಪತಿಗೆ ಹೇಳದೇ ಹೋಗುತ್ತಿದ್ದಳು. ಇದು ಪ್ರವೀಣ್ ಆಕ್ರೋಶಕ್ಕೆ ಕಾರಣವಾಗುತ್ತಿತ್ತು.