ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......

ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ 14 ಕೋಟಿ ರೂ.ಹಗರಣ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ- ಫೆ. 22ರಿಂದಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹಕ್ಕೆ ನಿರ್ಧಾರ

ಬ್ರಹ್ಮಾವರ:ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿರುವ ಹಗರಣದ ವಿರುದ್ಧ ಕಳೆದ ಎರಡು ವರ್ಷಗಳಿಗೂ ಅಧಿಕ ಸಮಯದಿಂದ ವಿವಿಧ ರೀತಿಯಲ್ಲಿ ಹೋರಾಟ ನಡೆಸಿಕೊಂಡು ಬರುತ್ತಿರುವ ಕುಂದಾಪುರದ ಮಾಜಿ ಶಾಸಕವಿಧಾನಪರಿಷತ್ ನ ಮಾಜಿ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ ಅಧ್ಯಕ್ಷತೆಯ ಉಡುಪಿ ಜಿಲ್ಲಾ ರೈತ ಸಂಘದ ನೇತೃತ್ವದಲ್ಲಿ ಇಂದು ಬ್ರಹ್ಮಾವರ ವ್ಯವ ಸಾಯ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಕರೆಯಲಾದ ಸಭೆಯ ಕೊನೆಯಲ್ಲಿ ಈ ಕುರಿತು ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.

ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಬಹುಕೋಟಿ ಹಗರಣದ ಕುರಿತು ರೈತ ಜಾಗೃತಿಗಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಸಕ್ಕರೆ ಕಾರ್ಖಾನೆಯ ಸದಸ್ಯರು, ವಿವಿಧ ರೈತ ಸಂಘಟನೆಗಳ ಪದಾಧಿಕಾರಿಗಳು, ಸಹಕಾರಿ ಕ್ಷೇತ್ರದ ಪ್ರಮು ಖರು, ಪಂಚಾಯತ್‌ರಾಜ್ ಒಕ್ಕೂಟದ ಪ್ರತಿನಿಧಿಗಳು ಮಾತ್ರವಲ್ಲದೇ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸೇರಿ ದಂತೆ 200ಕ್ಕೂ ಅಧಿಕ ಮಂದಿ ಭಾಗವಹಿಸಿ, ಭ್ರಷ್ಟಚಾರದ ವಿರುದ್ಧ ಸಂಘಟಿತ, ಗೆಲುವಿನ ತನಕ ಹೋರಾಟದ ನಿರ್ಣಯಕೈಗೊಂಡರು.

ರೈತರು, ಸಹಕಾರಿ ಕ್ಷೇತ್ರದ ಆಶಾಕಿರಣವಾಗಿದ್ದ ಈ ಕಾರ್ಖಾನೆಯಲ್ಲಿ ನಡೆದ ಭಾರೀ ಹಗರಣದ ತನಿಖೆಗೆ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಕಳೆದ ಎರಡು ವರ್ಷಗಳಿಂದ ರೈತ ಸಂಘ ವಿವಿಧ ಬಗೆಯ ಹೋರಾಟ ನಡೆಸಿದೆ. ಆದರೆ ಈವರೆಗೆ ಯಾವುದೇ ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲ. ಭ್ರಷ್ಟಾಚಾರದ ವಿರುದ್ಧ ಹೋರಾಟದಲ್ಲಿ ನಿರ್ಣಾಯಕ, , ಕಠಿಣ ನಿರ್ಧಾರ ತೆಗೆದು ಕೊಳ್ಳುವ ಸಮಯ ಈಗ ಬಂದಿದೆ ಎಂದು ಪ್ರತಾಪ್‌ಚಂದ್ರ ಶೆಟ್ಟಿ ನುಡಿದರು.

ಫೆ.22ರಂದು ಬೈಕಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ-66ರ ಪಕ್ಕದಲ್ಲೇ ಇರುವ ಸಕ್ಕರೆ ಕಾರ್ಖಾನೆಯ ಮುಂಭಾಗದಲ್ಲಿ ಧರಣಿಯನ್ನು ಪ್ರಾರಂಭಿಸಲಾ ಗುವುದು. ಈ ಧರಣಿ ದಿನದ 24 ಗಂಟೆಗಳ ಕಾಲ ಸರದಿಪ್ರಕಾರ ಅನಿರ್ಧಿಷ್ಟಾವಧಿಯ ವರೆಗೆ, ರೈತರಿಗೆ ನ್ಯಾಯಸಿಗುವವರೆಗೂ ಮುಂದುವರಿಯಲಿದೆ. ಪಕ್ಷಾತೀತವಾಗಿ ಭ್ರಷ್ಟತೆಯ ವಿರುದ್ಧ ನಡೆಯುವ ಈ ಹೋರಾಟದಲ್ಲಿ ಜಿಲ್ಲೆಯ ವಿವಿಧ ಸಂಘಟನೆಗಳು ಪಾಲ್ಗೊಳ್ಳುವ, ಬೆಂಬಲ ನೀಡುವ ಭರವಸೆ ನೀಡಿವೆ ಎಂದರು.

ಸರಕಾರಕ್ಕೆ ಎಲ್ಲಾ ವೇದಿಕೆಗಳ ಮೂಲಕ ಮಾಹಿತಿಯನ್ನು ನೀಡಿದ್ದೇವೆ. ಸರಕಾರ ಫೆ.22ರೊಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸಿದರೆ, ಧರಣಿಯನ್ನು ನಡೆಸುವ ಉದ್ದೇಶವನ್ನು ಹೊಂದಿಲ್ಲ. ಆದರೆ ಕಳೆದಎರಡೂವರೆ ವರ್ಷಗಳ ಹೋರಾಟದ ಬಳಿಕವೂ ಈ ಪರಿಸ್ಥಿತಿ ಬಂದಾಗ ನಾವು ಇಂಥ ನಿರ್ಣಯ ಕೈಗೊಳ್ಳಲೇಬೇಕಾಗಿದೆ. ಮಾಧ್ಯಮಗಳು ಮಾಡಬೇಕಾದ ಕೆಲಸವನ್ನು ನಾವು ರೈತ ಸಂಘದ ಮೂಲಕ ಮಾಡುತಿದ್ದೇವೆ ಎಂದು ಪ್ರತಾಪ್ ಚಂದ್ರ ಶೆಟ್ಟಿ ನುಡಿದರು.

ಈ ಹಗರಣದಲ್ಲಿ ಅಧಿಕಾರಿಗಳೂ ಸಂಪೂರ್ಣವಾಗಿ ಶಾಮೀಲಾಗಿದ್ದಾರೆ. ಹೀಗಾಗಿ ಅವರೇ ಯಾವುದೇ ತನಿಖೆಗೆಅಡ್ಡಗಾಲು ಹಾಕುತಿದ್ದಾರೆ ಎಂದು ಆರೋಪಿಸಿದ ಪ್ರತಾಪ್‌ಚಂದ್ರ ಶೆಟ್ಟಿ, ಹಿಂದಿನ ಸರಕಾರದ (ಬಿಜೆಪಿ) ಅವಧಿಯಲ್ಲಿ ಈ ಹಗರಣ ನಡೆದಿದ್ದರೂ ಈಗಿನ ಸರಕಾರವೂ ಅದರ ತನಿಖೆ ನಡೆಸಲು ಮುಂದಾಗಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.

kiniudupi@rediffmail.com

No Comments

Leave A Comment