ಬೆಂಗಳೂರು:ಫೆ. 07.ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ವಿದೇಶದಿಂದ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 2.97 ಕೋಟಿ ರೂ. ಮೌಲ್ಯದ ಹೈಡ್ರೋಪೋನಿಕ್ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಆರೋಪಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಥಾಯ್ಲೆಂಡ್‌ನ ಪುಕೆಟ್ ಹಾಗೂ ಮಲೇಶಿಯಾದಿಂದ ಕೆಐಎಬಿಗೆ ಆಗಮಿಸಿದ್ದ ಮೂವರು
ಪಾಟ್ನಾ: 1995ರ ಪಾಟ್ನಾ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ತಡರಾತ್ರಿ ಪಪ್ಪು ಯಾದವ್ ಎಂದೂ ಕರೆಯಲ್ಪಡುವ ಪೂರ್ಣಿಯಾ ಸಂಸದ ರಾಜೇಶ್ ರಂಜನ್ ಅವರನ್ನು ಬಂಧಿಸಲಾಗಿದ್ದು, ನಂತರ ಆರೋಗ್ಯ ಸಮಸ್ಯೆಗಳ ಕಾರಣ ಅವರನ್ನು ಶನಿವಾರ ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (ಪಿಎಂಸಿಎಚ್) ದಾಖಲಿಸಲಾಗಿದೆ. ಬಂಧನದ ನಂತರ ಯಾದವ್ ಅವರನ್ನು ಶುಕ್ರವಾರ ರಾತ್ರಿ ಇಂದಿರಾ
ಸೊಲ್ಲಾಪುರ: ಬೆಂಗಳೂರು ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಘಟನೆ ಬೆನ್ನಲ್ಲೇ ಮತ್ತೊಬ್ಬ ಉದ್ಯಮಿ ದುರಂತ ಸಾವು ಕಂಡಿದ್ದಾರೆ. ಜನಪ್ರಿಯ ಮುಲ್ತಾನಿ ಬೇಕರಿ ಮಾಲೀಕ, ಶ್ರೀಮಂತ ಉದ್ಯಮಿ ಸುನಿಲ್ ಮೋತಿಲಾಲ್ (59) ಅವರು 17 ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಹಾರಾಷ್ಟ್ರದ ಸೋಲಾಪುರದ ಪನಾಶ್ ಅಪಾರ್ಟ್‌ಮೆಂಟ್‌ನ 17ನೇ ಮಹಡಿಯಿಂದ ಜಿಗಿದು ಬದುಕು ಅಂತ್ಯಗೊಳಿಸಿದ್ದಾರೆ. ಮಧ್ಯಾಹ್ನದ
ಮುಂಬೈ: ಮುಂಬೈ ಮಹಾನಗರಪಾಲಿಕೆಯ (ಬಿಎಂಸಿ) ಮೇಯರ್ ಚುನಾವಣೆಗೆ ರಿತು ತಾವಡೆ ಅವರನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಅಭ್ಯರ್ಥಿಯಾಗಿ ಶನಿವಾರ ಆಯ್ಕೆ ಮಾಡಿದೆ. ಅದರ ಮಿತ್ರ ಪಕ್ಷ ಶಿವಸೇನೆ ಸಂಜಯ್ ಘಾಡಿ ಅವರನ್ನು ಉಪ ಮೇಯರ್ ಹುದ್ದೆಗೆ ತನ್ನ ಅಭ್ಯರ್ಥಿಯಾಗಿ ಘೋಷಿಸಿದೆ. ರಿತು ತಾವಡೆ ವಾರ್ಡ್ ಸಂಖ್ಯೆ 132ರ ಕಾರ್ಪೊರೇಟರ್ ಆಗಿದ್ದಾರೆ.
ಪಣಜಿ: ಗೋವಾ ರಾಜ್ಯದ ಕಡಲತೀರಗಳಲ್ಲಿ ವಿದೇಶಿ ಪ್ರಜೆಗಳಿಗೆ ಕಿರುಕುಳ ನೀಡುವ ದೇಶಿ ಪ್ರವಾಸಿಗರ ವಿರುದ್ಧ ಗೋವಾ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಬೀಚ್‌ಗಳಲ್ಲಿ ವಿದೇಶಿಯರೊಂದಿಗೆ ಅವರ ಒಪ್ಪಿಗೆಯಿಲ್ಲದೆ ಬಲವಂತವಾಗಿ ಸೆಲ್ಫಿ ತೆಗೆದುಕೊಳ್ಳುವುದು ಅಥವಾ ಫೋಟೋಗೆ ಒತ್ತಾಯಿಸುವುದು ಕಂಡುಬಂದರೆ ಅವರನ್ನು ಸ್ಥಳದಲ್ಲೇ ಬಂಧಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ದೇಶೀಯ ಪ್ರವಾಸಿಗರು
ಹುಣಸೂರು: ಪತ್ರಕರ್ತರ ಬಳಗದಲ್ಲಿ ಬ್ರದರ್ ಎಂದೇ ಹೆಸರಾಗಿದ್ದ ಹಿರಿಯ ಪತ್ರಕರ್ತ, ಗಾಂಧಿವಾದಿ ಕೆ.ವಿ.ಶ್ರೀನಿವಾಸನ್ (81) ಅವರು ಶುಕ್ರವಾರ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀನಿವಾಸನ್ ಅವರು ಶುಕ್ರವಾರ ಸಂಜೆ ಹುಣಸೂರು ನಗರದ ಕಲ್ಕುಣಿಕೆಯ ಸ್ವಗೃಹದಲ್ಲಿ ನಿಧನರಾಗಿದ್ದಾರೆಂದು ತಿಳಿದುಬಂದಿದೆ. ಇವರ ಅಂತ್ಯಕ್ರಿಯೆ ಫೆ.7ರ ಶನಿವಾರ ಮಧ್ಯಾಹ್ನ 1 ಗಂಟೆಗೆ ಕಲ್ಕುಣಿಕೆ ಸರ್ಕಲ್ ಬಳಿಯ
ಕುಂದಾಪುರ: ಮಾಜಿ ಶಾಸಕ ರಾಜಕೀಯ, ಧಾರ್ಮಿಕ, ಸಹಕಾರ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಹಿರಿಯ ನಾಯಕ ಬಸ್ರೂರು ಅಪ್ಪಣ್ಣ ಹೆಗ್ಡೆ ಇಂದು ಶನಿವಾರ ನಿಧನರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಅವರು ಕೊನೆಯುಸಿರೆಳೆದರು. 1983-1985 ಅವಧಿಯಲ್ಲಿ ಜನತಾ ಪಕ್ಷದಿಂದ ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದ
ಕಾರವಾರ:ಫೆ.06, ಕಲರ್ಫುಲ್ ರೀಲ್ಸ್ ಮಾಡಿಕೊಂಡು ಸಂಸಾರದಿಂದ ದೂರವಾಗಿ ನೌಟಂಕಿ ಆಡುತ್ತಿದ್ದ ಕಲಾಕರ್ ಸುಚಿತ್ರಾ ಕಥೆಗಳೇ ಬೆಚ್ಚಿ ಬೀಳಿಸುವಂತಿವೆ. ಗಂಡ, ಮಕ್ಕಳಿಗಿಂತ ಜ್ಯೋತಿಷಿ ಕಮಲಾಕರ್ನೇ ಹೆಚ್ಚು ಅಂತಿದ್ದವಳಿಗೆ ಒಬ್ಬಿಬ್ಬರ ಸಹವಾಸ ಇರಲಿಲ್ವಂತೆ. ಸುಚಿತ್ರಾ ಮೊಬೈಲ್ ಇಣಕಿದ ಪೊಲೀಸರಿಗೆ ಆಕೆಯ ಸಂಪರ್ಕ ಕ್ರಾಂತಿಯೇ ಅನಾವರಣ ಆಗಿವೆ. ಹೌದು.. ವಸಂತ್ ನಾಯ್ಕ್ ಕೊಲೆ
ಬೆಂಗಳೂರು: ಉದ್ಯಮಿಯೊಬ್ಬರನ್ನು ಅಪಹರಿಸಿ ಹಣ ಸುಲಿಗೆ ಮಾಡಿದ್ದ ಪ್ರಕರಣದ ಆರೋಪಿಯ ಬಂಧನಕ್ಕೆ ತೆರಳಿದ್ದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಆರೋಪದಡಿ ಮಾಜಿ ರೌಡಿಶೀಟರ್ ಯಶಸ್ವಿನಿ ಗೌಡಳನ್ನು ಸಿಸಿಬಿಯ ಸಂಘಟಿತ ಅಪರಾಧ ನಿಯಂತ್ರಣ ದಳದ ಪೊಲೀಸರು ಬಂಧಿಸಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಮೋದಿ ಆಸ್ಪತ್ರೆ ರಸ್ತೆಯಲ್ಲಿ ಸೆ.26ರಂದು ಸಂಜೆ 6.30ರ ಸುಮಾರಿಗೆ
ಉಡುಪಿ: ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ಬಳಿಕ ಯುವಕನೊಬ್ಬನ ಮೇಲೆ ತಲವಾರು ಹಾಗೂ ಕಬ್ಬಿಣದ ಚಯರ್‌ನಿಂದ ಹಲ್ಲೆ ನಡೆಸಿದ ಘಟನೆ ಶುಕ್ರವಾರ ತಡರಾತ್ರಿ ಉಡುಪಿಯಲ್ಲಿ ನಡೆದಿದೆ. ತೀವ್ರ ಹಲ್ಲೆಗೊಳಾಗದ ಯುವಕನನ್ನು ಉಡುಪಿ ಕಾಂಗ್ರೆಸ್ ನ NSUI ಉಪಾಧ್ಯಕ್ಷ ಚಿಟ್ಟಾಡಿ ಬೈಲೂರು ನಿವಾಸಿ ಶರತ್ ಕುಂದರ್ (25) ಎಂದು ತಿಳಿದುಬಂದಿದೆ. ಶರತ್ ಕುಂದರ್ ಜ.30