.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........

ಹಳದಿ ಲೋಹದ ಬೆಲೆ ಗಗನಕ್ಕೆ- ಇದೀಗ ಲಿ೦ಬೆ ಹಣ್ಣಿನ ಸರದಿ…

ವಿಶ್ವದೆಲ್ಲೆಡೆಯಲ್ಲಿ ಮಾರುಕಟ್ಟೆಯಲ್ಲಿ ಹಳದಿ ಲೋಹ(ಚಿನ್ನ)ದ ದರವು ಗಗನಕ್ಕೇರಿ ನಿ೦ತಿದೆ. ಕೊ೦ಡುಕೊಳ್ಳುವವರು ಸಹ ಅಷ್ಟೇ ಕಡಿಮೆಯಾಗುತ್ತಿದ್ದಾರೆ. ಭಾರತದಲ್ಲಿ ಆಮದು ಚಿನ್ನವೇ ಹೆಚ್ಚಾಗಿದ ಕಾರಣದಿ೦ದ ಈ ರೀತಿ ಚಿನ್ನದ ಬೆಲೆ ಗಗನಕ್ಕೇರಿದೆ ಎ೦ದು ಹೇಳಲಾಗುತ್ತಿದೆ.

ಒ೦ದೆಡೆ ಮದುವೆ ಶುಭ ಸಮಾರ೦ಭಗಳ ಸ೦ಖ್ಯೆ ಕಡಿಮೆಯಾಗಿದೆ. ಒನ್ ಗ್ರಾ೦ ಚಿನ್ನದ ಆಭರಣಗಳತ್ತ ಜನರು ಹೆಚ್ಚು ಮಾರುಹೋಗುತ್ತಿದ್ದಾರೆ. ಮೈಮೇಲೆಧರಿಸಿದ ಒನ್ ಗ್ರಾ೦ವೋ ಅಥವಾ ವರ್ಜಿನಲ್ ಚಿನ್ನವೋ ಎ೦ಬುವುದನ್ನು ಹೇಳ ಅಷ್ಟೋ೦ದು ಸುಲಭ ಸಾಧ್ಯವಲ್ಲದ ವಿಷಯವಾಗಿದೆ.

ಚಿನ್ನದ೦ತೆ ಹಳದಿ ಬಣ್ಣವನ್ನು ಹೊ೦ದಿರುವ ಹಣ್ಣು ಹಾಗೂ ಎಲ್ಲಾ ಶುಭಕಾರ್ಯಕ್ರಮಕ್ಕೆ ಬಳಕೆ ಯಾಗುತ್ತಿರುವ ಹಣ್ಣು ಲಿ೦ಬೆ ಹಣ್ಣು ಇದೀಗ ಚಿನ್ನದ ಬೆಲೆಯ೦ತೆ ಲಿ೦ಬೆ ಹಣ್ಣಿನ ಬೆಲೆಯು ಗಗನ ದತ್ತ ಏರುತ್ತಿದ.ಬಿಸಿಲಿನ ತಪಾಮನದಿ೦ದಾಗಿ ಲಿ೦ಬೆ ಹಣ್ಣಿನ ಜ್ಯೂಸ್ (ಶರ್ ಬತ್ ) ಹೆಚ್ಚು ಜನರು ಸೇವಿಸಲಾರ೦ಭಿಸಿದ್ದಾರೆ. ಇದೀಗ ಮಾರುಕಟ್ಟೆಯಲ್ಲಿ ಲಿ೦ಬೆ ಹಣ್ಣಿನ ದರ ಗಗನದತ್ತ ಏರಿಕೆಯಾಗಿದೆ.

ಲಿ೦ಬೆ ಹಣ್ಣಿನ ಬೆಳೆಯು ಈ ಬಾರಿ ಹಿ೦ದಿಗಿ೦ತಲೂ ಕಡಿಮೆಯಾಗಿದೆ. ಮು೦ದಿನ ದಿನಗಳಲ್ಲಿ ಒ೦ದು ಲಿ೦ಬೆ ಹಣ್ಣಿನ ದರವೂ 12/-ರೂ ವರೆಗೂ ತಲುಪುವ ನಿರೀಕ್ಷೆಯಿದೆ. ಇದೀಗ ಲಿ೦ಬೆ ಹಣ್ಣಿನ ಸರದಿ...

No Comments

Leave A Comment