ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...

ಉಡುಪಿ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ, ಬಿಜೆಪಿ ಅಭ್ಯರ್ಥಿ ಕೋಟಶ್ರೀನಿವಾಸ್ ಪೂಜಾರಿ ಮ೦ಗಳವಾರದ೦ದು ತಮ್ಮ ನಾಮಪತ್ರ ಜಿಲ್ಲಾಧಿಕಾರಿಯವರಿಗೆ ಸಲ್ಲಿಸಿದರು. ವಿನಯಕುಮಾರ್ ಸೊರಕೆ,ಮೋಟಮ್ಮ ಹಾಗೂ ಇತರ ಮುಖ೦ದರು ಹೆಗ್ಡೆಗೆ ಸಾಥ್ ನೀಡಿದರು.ಸಿ.ಟಿ.ರವಿ,ಸುರೇಶ್ ಶೆಟ್ಟಿ ಗುರ್ಮೆ,ಯಶ್ಪಾಲ್ ಸುವರ್ಣ ರವರು ಕೋಟ ಶ್ರೀನಿವಾಸ್ ಪೂಜಾರಿಗೆ ಸಾಥ್ ನೀಡಿದರು. ಎರಡುಪಕ್ಷದವರು ಕಾರ್ಯಕರ್ತರ ಸಭೆಯನ್ನು ನಡೆಸಿತ್ತು,

ಉಡುಪಿ: ಮಾ,31: ಮಾ. 27ರಂದು ನಾಪತ್ತೆಯಾಗಿದ್ದ ಆಟೋರಿಕ್ಷಾ ಚಾಲಕ ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದು, ಮೃತದೇಹವು ಬ್ರಹ್ಮಾವರ ಉಪ್ಪೂರು ಮಾಯಾಡಿ ಎಂಬಲ್ಲಿರುವ ಸ್ವರ್ಣಾ ನದಿಯಲ್ಲಿ ಪತ್ತೆಯಾಗಿದೆ. ಮೂಡು ತೋನ್ಸೆ ಗ್ರಾಮದ ಮುಹಮ್ಮದ್ ಫೈಝಲ್(36) ಎಂಬುವವರು ಮಾ. 27ರಂದು ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಮನೆಯಿಂದ ಹೊರಟವರು ಬಳಿಕ ನಾಪತ್ತೆಯಾಗಿದ್ದರು. ನಂತರ ಅವರಿಗಾಗಿ ಹುಡುಕಾಟ

ಉಡುಪಿ: ಬಾಡಿಗೆಗೆ ಹೋದ ಆಟೋ ಚಾಲಕನೋರ್ವ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ಬ್ರಹ್ಮಾವರ ತಾಲೂಕಿನ ಉಪ್ಪೂರು ಗ್ರಾಮದ ಮಾಯಾಡಿ ಎಂಬಲ್ಲಿ ನಡೆದಿದೆ. ಮೂಡುತೋನ್ಸೆ ಗ್ರಾಮದ ಮಹಮ್ಮದ್‌ ಫೈಜಲ್‌ (36) ಮೃತಪಟ್ಟ ಆಟೋ ಚಾಲಕ. ಇವರು ಮಾ. 27ರಂದು ರಾತ್ರಿ ಬಾಡಿಗೆಗೆ ಹೋಗಲಿಕ್ಕೆ ಇದೆಯೆಂದು ಮನೆಯಿಂದ ತೆರಳಿದ್ದರು. ಬಳಿಕ‌ ಮನೆಗೆ ಬಾರದೆ,

ಕಾಪು:ಮಾ 30: ಕಾಪು ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರು ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ನೇಣಿಗೆ ಶರಣಾದ ಘಟನೆ ಶನಿವಾರ ಮಾರ್ಚ್ 30 ರಂದು ನಡೆದಿದೆ. ಕಾಪು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ, ಬಾಗಲಕೋಟೆ ಮೂಲದ ಜ್ಯೋತಿ (29) ಮೃತ ಪೊಲೀಸ್ ಆಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಶುಕ್ರವಾರ ಎಂದಿನಂತೆ

ಉಡುಪಿ:‘ಜ್ಞಾನದೀಪ’ ಎಲ್ಲೆಡೆ ಬೆಳಗಲೆಂದು ‘ಜ್ಞಾನಯಜ್ಞ’ಕ್ಕಾಗಿ ವಿಶೇಷವಾಗಿ ನಿರ್ಮಾಣಗೊಂಡಿರುವ ‘ಆನಂದವನ’ ಎಂಬ ನೂತನ ಪ್ರವಚನ ವೇದಿಕೆಯ ಉದ್ಘಾಟನೆಯನ್ನು ಹಾಗೂ ದೇಶ-ವಿದೇಶಗಳಲ್ಲಿ ಇರುವ ಮಠದ ಭಕ್ತರಿಗೆ ಶ್ರೀಅದಮಾರು ಮಠದ ಬಗ್ಗೆ, ಸೇವೆಗಳು ಮತ್ತು ಶಾಖೆಗಳ ಬಗ್ಗೆ ಎಲ್ಲ ಮಾಹಿತಿ ಇರುವ, ಅಲ್ಲದೆ ಮಠದ ವಿದ್ಯಾಸಂಸ್ಥೆಗಳ ವಿವರ, ವಸತಿಗೃಹಗಳ ಸಂಪರ್ಕ, ಉಡುಪಿ ಕೃಷ್ಣ

ಕಾರ್ಕಳ :ಮಾ, 27: ಕಾರ್ಕಳ ಕ್ಷೇತ್ರದ ಎರ್ಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೈಲೂರು ಉಮಿಕಲ್ ಬೆಟ್ಟದಲ್ಲಿ ಪರಶುರಾಮ ಥೀಮ್ ಪಾರ್ಕ್ ನಲ್ಲಿ ಕರಾವಳಿಯ ಸೃಷ್ಟಿಕರ್ತನೆಂದೆ ಕರೆಯಲ್ಪಡುವ ಶ್ರೀ ಪರಶುರಾಮ ಮೂರ್ತಿಯನ್ನು ಪುನರ್ ಸ್ಥಾಪಿಸಲು ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿ.(ರಿ) ಎಂಬ ಸಮಿತಿಯು ಮಾರ್ಚ್ 18ರಂದು ಅಸ್ತಿತ್ವಕ್ಕೆ

ಉಡುಪಿ: ನೂತನವಾಗಿ ಆರ೦ಭಗೊಳ್ಳಲಿರುವ ಶ್ರೀಏಕದ೦ತ ಸೇವಾ ಸಮಿತಿ ಪಣಿಯಾಡಿ ಇದರ ಉದ್ಘಾಟನಾ ಸಮಾರ೦ಭವು ಮಾರ್ಚ್ ೨೮ರ ಗುರುವಾರದ೦ದು 6.30ಕ್ಕೆ ಪಣಿಯಾಡಿಯ ಶ್ರೀಅನ೦ತಾಸನ ಶ್ರೀಲಕ್ಷ್ಮೀಅನ೦ತಪದ್ಮನಾಭ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.                                    

ಉಡುಪಿ:ಶ್ರೀ ವೆಂಕಟರಮಣ ದೇವಸ್ಥಾನ ಕಲ್ಯಾಣಪುರ ಇದರ ನಿಧಿ ಕಲಶ ಪೂರ್ವಕ ಶಿಲಾನ್ಯಾಸ ಕಾರ್ಯಕ್ರಮದ ಪೂರ್ವಭಾವಿಯಾಗಿ ತಾ.24-03-2024 ನೇ ಆದಿತ್ಯವಾರ ಇ೦ದು ವಿಶೇಷ ಸಾಂಪ್ರದಾಯಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಂಜೆ 5.00 ಕ್ಕೆ ಶ್ರೀ ವೀರಭದ್ರ ದೇವಸ್ಥಾನ ಸಂತೆಕಟ್ಟೆಯಿಂದ ರಜತ ಕಲಶಗಳನ್ನು ಮತ್ತು ಶಿಲಾನ್ಯಾಸದ ಶಿಲೆಗಳನ್ನು ಭವ್ಯವಾದ ಮೆರವಣಿಗೆಯಲ್ಲಿ ಶ್ರೀ ದೇವಳಕ್ಕೆ ತರುವುದರೊ೦ದಿಗೆ