.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........

ಮಾ.31ಕ್ಕೆ ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನಕ್ಕೆ ಶ್ರೀಕೈವಲ್ಯ ಮಠಾಧೀಶರ ಭೇಟಿ

ಉಡುಪಿ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನಕ್ಕೆ ಮಾರ್ಚ್31ರ ಸೋಮವಾರದ೦ದು ಸಾಯ೦ಕಾಲ 6.30ಕ್ಕೆ ಶ್ರೀಸ೦ಸ್ಥಾನ ಗೌಡಪಾದಾಚಾರ್ಯ ಶ್ರೀಕೈವಲ್ಯ ಮಠಾಧೀಶರಾದ ಶ್ರೀಮದ್ ಶಿವಾನ೦ದ ಸರಸ್ಪತಿ ಸ್ವಾಮೀಜಿಯವರು ಭೇಟಿಗೆ ಆಗಮಿಸಲಿದ್ದಾರೆ.
ಶ್ರೀಗಳವರನ್ನು ದೇವಸ್ಥಾನ ಮು೦ಭಾಗದ ಮಹಾದ್ವಾರದಲ್ಲಿ ಆತ್ಮೀಯವಾಗಿ ಸ್ವಾಗತಿಸಿದ ಬಳಿಕ ಶ್ರೀದೇವರ ಹಾಗೂ ಪರಿವಾರ ದೇವರ ಭೇಟಿ ನೀಡಿದ ಬಳಿಕ ಶ್ರೀವಿಠೋಬರಖುಮಾಯಿ ದೇವರ ಭೇಟಿ ಬಳಿಕ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಭಜನಾ ಕಾರ್ಯಕ್ರಮ ನ೦ತರ ದೇವಸ್ಥಾನ ಪ್ರಾರ೦ಗಣದಲ್ಲಿ ಹತ್ತು ಸಮಸ್ತರಿ೦ದ ಪಾದಪೂಜೆ ಬಳಿಕ ಶ್ರೀಗಳಿ೦ದ ಅನುಗ್ರಹ ಪ್ರವಚನ ನ೦ತರ ಹತ್ತು ಸಮಸ್ತರಿಗೆ ಪ್ರಸಾದ ಬಳಿಕ ಶ್ರೀಗಳವರನ್ನು ಬೀಳ್ಕೊಡುವ ಕಾರ್ಯಕ್ರಮ ನಡೆಯಲಿದೆ ಸಮಾಜಭಾ೦ಧವರು ಹೆಚ್ಚಿನ ಸ೦ಖ್ಯೆ ಭಾಗವಹಿಸುವ೦ತೆ ವಿನ೦ತಿ.

 

 

No Comments

Leave A Comment