.....ಶ್ರೀ ಕೃಷ್ಣ ಜನ್ಮಾಷ್ಠಮಿ:ಇ೦ದು ವಿಟ್ಲಪಿ೦ಡಿಯ ಸ೦ಭ್ರಮ-ಲಕ್ಷಾ೦ತರ ಮ೦ದಿಗೆ ಮಧ್ಯಾಹ್ನದ ಅನ್ನಪ್ರಸಾದ ವಿತರಣೆ-ರಥಬೀದಿಯಲ್ಲಿ ಮು೦ಜಾನೆಯಿ೦ದ ಲಕ್ಷಾ೦ತರಮ೦ದಿ ಉತ್ಸವದಲ್ಲಿ ಭಾಗಿ-ಎಲ್ಲಾ ರಸ್ತೆಗಳಲ್ಲಿ ವಾಹನ ಸ೦ಚಾರ ಬ೦ದ್........

ಶ್ರೀ ಸುಧೀಂದ್ರ ತೀರ್ಥ ಶ್ರೀಪಾದರ ಜನ್ಮ ಶತಮಾನೋತ್ಸವ ; ಎರಡು ಸಂಕೀರ್ತನೆಯು ಆಡಿಯೋ ಹಾಗೂ ಕರಪತ್ರಿಕೆ ಬಿಡುಗಡೆ

ಉಡುಪಿಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ 125ದಿನಗಳ ಅಖಂಡ ಹರಿ ನಾಮ ಸಂಕೀರ್ತನೆಯ ಸುಸಂದರ್ಭದಲ್ಲಿ ಸದ್ಗುರು ಪ್ರಾತಃಸ್ಮರಣೀಯ ಶ್ರೀ ಶ್ರೀ ಸುಧೀಂದ್ರ ತೀರ್ಥ ಶ್ರೀಪಾದರ ಜನ್ಮ ಶತಮಾನೋತ್ಸವದ ಸುಸಂದರ್ಭದಲ್ಲಿ , ಹಾಗೂ ವಿಶ್ವಾವಸು ನಾಮ ಸಂವತ್ಸರದ ಯುಗಾದಿಯ ಪರ್ವಕಾಲದಲ್ಲಿ ಮಾರ್ಚ್ 30 ಆದಿತ್ಯವಾರ ರಾತ್ರಿ ಆಮ್ಕಾ ಸೌಭಾಗ್ಯ ಧನ “ಮತ್ತು “ರಜತ ಪೀಠ ವಾಸ ಶ್ರೀ ಲಕ್ಷ್ಮೀ ವೆಂಕಟೇಶ” ಎಂಬ ಎರಡು ಸಂಕೀರ್ತನೆಯು ಆಡಿಯೋ ಹಾಗೂ ಕರಪತ್ರಿಕೆ ಬಿಡುಗಡೆ ಸಮಾರಂಭ ನೆಡೆಯಿತು.

ಕಟಪಾಡಿಯ ಸತ್ವಿಜಯ ಭಟ್ ರವರು ರಚಿಸಿ ರಾಗ ಸಂಯೋಜನೆ ಮಾಡಿರುವ, ಮೈಸೂರಿನ ಹೆಸರಾಂತ ಗಾಯಕರಾದ ಶ್ರೀ ಉಪ್ಪುಂದ ರಾಜೇಶ ಪಡಿಯಾರ್ ರವರು ಹಾಡಿರುವ “ಸುಧೀಂದ್ರ ತೀರ್ಥ ಗುರು ಶತ ನಮನ ಪಾದ ಸೇವನ ಆಮ್ಕಾ ಸೌಭಾಗ್ಯ ಧನ “ಮತ್ತು “ರಜತ ಪೀಠ ವಾಸ ಶ್ರೀ ಲಕ್ಷ್ಮೀ ವೆಂಕಟೇಶ” ಎಂಬ ಎರಡುಕ್ರತಿ ಬಿಡುಗಡೆಗೊಂಡಿತ್ತು .

ಉಡುಪಿ ಶ್ರೀ ದೇವಳದ ಆಡಳಿತ ಮೊಕ್ತೇಸರರಾದ ಶ್ರೀ ವಿಠ್ಠಲದಾಸ ಶೆಣೈಯವರು ಲೋಕಾರ್ಪಣೆ ಮಾಡಿ ಶುಭ ಹಾರೈಸಿದರು.
ದೇವಳದ ಪ್ರಧಾನ ಅರ್ಚಕರಾದ ವೇದ ಮೂರ್ತಿ ವಿನಾಯಕ ಭಟ್ ರವರು ಪ್ರಾರ್ಥನೆ ಸಲ್ಲಿಸಿ ಆಶೀರ್ವಾದ ಮಾಡಿದರು.

ಈ ಸಂದರ್ಭದಲ್ಲಿ ದೇವಳದ ಭಜನಾ ಮಂಡಳಿಯ ಅಧ್ಯಕ್ಷರಾದ ಮಟ್ಟಾರ್ ಸತೀಶ್ ಕಿಣಿ, ಗಿಂಡಿ ನರ್ತನ ಕಲಾವಿದರಾದ ನಾಡಾ ಸತೀಶ್ ನಾಯಕ್, ಶಿಕ್ಷಣ ಅಧಿಕಾರಿ ಅಶೋಕ್ ಕಾಮತ ,ಅಲೆವೂರು ಗಣೇಶ್ ಕಿಣಿ ವಿವೇಕಾನಂದ ಶೆಣೈ , ಲೋಹಿತಾಕ್ಷ ಪಡಿಯಾರ ಮತ್ತು ಸಂಕೀರ್ತನೆಗಳ ಪ್ರಾಯೋಜಕರಾದ ಅನಂತ ವೈದಿಕ ಕೇಂದ್ರದ ಪ್ರಧಾನ ನಿರ್ದೇಶಕರಾದ ಶ್ರೀ ಚೇಂಪಿ ರಾಮಚಂದ್ರ ಅನಂತ ಭಟ್, ವಿದ್ವಾನ್ ಹರಿಪ್ರಸಾದ್ ಶರ್ಮ ದೇವಳದ ವೈದಿಕರು ಹಾಗೂ ಭಕ್ತ ಮಹಾಜನರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಭಜನೆ ರಚಿಸಿ ರಾಗ ಸಂಯೋಜನೆ ಮಾಡಿದ ಶ್ರೀ ಸತ್ವಿಜಯ ಭಟ್ ಕಟಪಾಡಿ ರವರನ್ನು ದೇವಳದ ವತಿಯಿಂದ ಪ್ರಸಾದ , ಸ್ಮರಣಿಕೆ ನೀಡಿ ಗೌರವಿಸಲಾಯಿತು.

No Comments

Leave A Comment