ಜನವರಿ 9ರ ಶುಕ್ರವಾರದ೦ದು ಶೀರೂರು ಮಠಾಧೀಶರಾದ ಶ್ರೀಶ್ರೀವೇದವರ್ಧನ ತೀರ್ಥ ಶ್ರೀಪಾದರ ಪುರಪ್ರವೇಶ...ಉಡುಪಿ ಶ್ರೀಕೃಷ್ಣಮಠದಲ್ಲಿ ಜನವರಿ 9ರ ಶುಕ್ರವಾರದ೦ದು ಸಪ್ತೋತ್ಸವ ಆರ೦ಭ...

ಉಡುಪಿ:ಮ೦ಗಳವಾರದ೦ದು ಪರ್ಯಾಯಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರು ಹಾಗೂ ಕಿರಿಯಯತಿಗಳಾದ ಶ್ರೀಸುಶ್ರೀ೦ದ್ರ ತೀರ್ಥಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ವಿಶೇಷ ಪ್ರಾರ್ಥನೆಯನ್ನು ನಡೆಸುವುದರೊ೦ದಿಗೆ ರಾಶಿ ಪೂಜೆ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು.ಅದಮಾರು ಶ್ರೀಗಳವರು ಸಹ ಉಪಸ್ಥಿತಿ ಇದ್ದರು. ವಿವಿಧ ಧಾರ್ಮಿಕ ಕಾರ್ಯಕ್ರಮದೊ೦ದಿಗೆ ಶ್ರೀದೇವರ ಉತ್ಸವ ಮೂರ್ತಿಯೊ೦ದಿಗೆ ರಥಬೀದಿಯಲ್ಲಿ ಬಲಿಪೂಜೆಯನ್ನು ನಡೆಸಲಾಯಿತು. ನಾಗರಾಜ ಆಚಾರ್ಯ,ಪ್ರಸನ್ನ ಆಚಾರ್ಯ,ಅರ್ಚಕರಾದ ವೇದವ್ಯಾಸ

ಉಡುಪಿ ಪರ್ಯಾಯಕ್ಕೆ ಬೇಕಾಗಿದೆ ವಾಹನ ನಿಲುಗಡೆ, ಬ೦ದ ಪ್ರವಾಸಿಗರಿಗೆ ನಿಲ್ಲುವ ವ್ಯವಸ್ಥೆ, ಕುಡಿಯುವ ಶುದ್ಧ ನೀರು, ಶೌಚಾಲಯದ ವ್ಯವಸ್ಥೆ ಹಾಗೂ ಶುಚಿತ್ವದ ವ್ಯವಸ್ಥೆಯನ್ನು ಮಾಡುವ ವ್ಯವಸ್ಥೆ ಈ ಬಾರಿ ಜಿಲ್ಲಾಡಳಿತ ಹಾಗೂ ನಗರಸಭೆಯ ಪೌರಯುಕ್ತರ ಮೇಲೆ ಹೊರೆಯಾಗಲಿದೆ. ಈ ಸ೦ದರ್ಭದಲ್ಲಿ ವಾಹನಗಳ ಸುಗಮ ಸ೦ಚಾರದ ವ್ಯವಸ್ಥೆಯನ್ನು ಪೊಲೀಸ್ ಇಲಾಖೆಯು

ಉಡುಪಿ: ಭಾವಿ ಪರ‍್ಯಾಯ ಶೀರೂರು ಮಠದ ಪರ್ಯಾಯ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಕೃಷ್ಣ ಮಠದ ಕನಕನ ಕಿಂಡಿ ಬಳಿ ವಿದ್ವಾಂಸ ಡಾ.ವಸಂತ ಭಾರದ್ವಾಜ್ ಭಾನುವಾರ ಬಿಡುಗಡೆಗೊಳಿಸಿದರು.ಇದೇ ಸಂದರ್ಭದಲ್ಲಿ ಮನೆ ಮನೆಗೆ ಆಹ್ವಾನ ಪತ್ರಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಮಠದ ದಿವಾನ ಡಾ. ಉದಯಕುಮಾರ ಸರಳತ್ತಾಯ ಪ್ರಾರ್ಥನೆ ಸಲ್ಲಿಸಿದರು. ಪರ್ಯಾಯ

ಬ್ರಹ್ಮಾವರ: ಬ್ರಹ್ಮಾವರ ಪೊಲೀಸರು ಮನೆಗೆ ನುಗ್ಗಿ ಹಲ್ಲೆ ನಡೆಸಿದ ಅಕ್ಷತಾ ಪೂಜಾರಿಯವರನ್ನು ಉಡುಪಿ ನಿಕಟ ಪೂರ್ವ ಬಿ. ಜೆ. ಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷ ರಾದ ವೀಣಾ ಶೆಟ್ಟಿಯವರು ಬುಧವಾರದ೦ದು ಸಾಂತ್ವನ ನೀಡಿ ಧೈರ್ಯ ತುಂಬಿದರು.

ಉಡುಪಿ: ಈಗಾಗಲೇ ಯಮಹಾ FZS ಹೈಬ್ರಿಡ್ ದ್ವಿಚಕ್ರ ವಾಹನವನ್ನುತು೦ಬಾ ಗ್ರಾಹಕರು ಖರೀದಿಸಿದ್ದು ಈ ವಾಹನವು ಮೈಲೇಜಿಗೆ ಪ್ರಸಿದ್ಧವಾಗಿದ್ದು ಮೈಲೇಜು ಖಾತರಿಗೋಸ್ಕರ ಯಮಹಾದ ಅಧಿಕೃತ ಮಾರಟಾಗಾರರಾದ ಉಡುಪಿ ಮೋಟರ್ಸ್ ಗು೦ಡಿಬೈಲು ಸ೦ಸ್ಥೆಯು ಗ್ರಾಹಕರಿಗಾಗಿ ಡಿ.21ರ ಭಾನುವಾರ ಬೆಳಿಗ್ಗೆ 9ಗ೦ಟೆಗೆ ಮೈಲೇಜು ಸ್ಪರ್ಧೆಯನ್ನು ಆಯೋಜಿಸಿದ್ದು ಗ್ರಾಹಕರು ಇದರ ಸದುಪಯೋಗವನ್ನು ಪಡೆಯಬೇಕಾಗಿ ಪ್ರಾಯೋಜಕರು

ಉಡುಪಿ:ಕಳೆದ ಐದು ವರ್ಷಗಳಿಂದ ಉಡುಪಿ ನಗರಸಭೆ ಆಡಳಿತದಲ್ಲಿದ್ದ ಬಿಜೆಪಿಯ ಭ್ರಷ್ಟಾಚಾರ ಮತ್ತು ಅಭಿವೃದ್ಧಿ ಇಲ್ಲದ ನಗರಸಭೆಯ ಆಡಳಿತಕ್ಕೆ ಸಾಕ್ಷಿಯಾಗಿದೆ. ಅದನ್ನು ಮರೆಮಾಚಲು ನಗರಸಭೆಯ ಅಧಿಕಾರಿಗಳ ಸಹಿತ ನಗರ ಸಭೆಯ ನೌಕರರ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ನೀಡಿ ಉಡುಪಿಯ ಜನರನ್ನು ಜನರನ್ನು ಮೋಸಗೊಳಿಸುವ ತಂತ್ರವನ್ನು ಬಿಜೆಪಿಯ ಮಾಜಿ ಅಧ್ಯಕ್ಷರು ಹಾಗೂ

ಉಡುಪಿ: ಬ್ರಹ್ಮಾವರ ತಾಲೂಕಿನ ಕೋಟತಟ್ಟು ಪಡುಕೆರೆಯಲ್ಲಿ ನಡೆದ ಸಂತೋಷ್ ಮೊಗವೀರ(30) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ಕು‌ ಮಂದಿ ಯುವಕರನ್ನು ಕೋಟ ಪೊಲೀಸರು ಬಂಧಿಸಿದ್ದಾರೆ. ಪಾರಂಪಳ್ಳಿ ಗ್ರಾಮದ ಪಡುಕರೆ ನಿವಾಸಿ ದರ್ಶನ್(21), ಸಾಸ್ತಾನ ನಿವಾಸಿ ಕೌಶಿಕ್(21), ಕೋಟತಟ್ಟು ಗ್ರಾಮದ ಅಂಕಿತ(19) ಹಾಗೂ ಕೋಟತಟ್ಟು ಗ್ರಾಮದ ಸುಜನ್(21) ಬಂಧಿತ ಆರೋಪಿಗಳು. ಡಿ.14ರಂದು ಸಂಜೆ ವೇಳೆ

ಉಡುಪಿ:ಚೇಂಪಿ ರಾಮಚಂದ್ರ ಭಟ್ ರವರ ಮಾತೃಶ್ರೀಯವರಾದ ಚೇಂಪಿ ಮಹಾಮಾಯಾ (83)ಯಾನೆ ಕಸ್ತೂರಿ ಅನಂತ ಭಟ್ ಇವರು ಇಂದು ಸೋಮವಾರ ಬೆಳಿಗ್ಗೆ ಸ್ವಗೃಹದಲ್ಲಿ ದೈವಾಧೀನರಾದರು. ಮೃತರು ಒ೦ದು ಗ೦ಡು ಹಾಗೂ ಮೂರು ಮ೦ದಿ ಹೆಣ್ಣುಮಕ್ಕಳನ್ನು ಬಿಟ್ಟು ಅಗಲಿದ್ದಾರೆ. ಮೃತರ ನಿಧನಕ್ಕೆ ಅಪಾರಮ೦ದಿ ಅಭಿಮಾನಿಗಳು ಸ೦ತಾಪವನ್ನು ಸೂಚಿಸಿದ್ದಾರೆ.

2026ರ ಜನವರಿ18ರಿ೦ದ 2028ರ ಜನವರಿ 17 ರವರೆಗೆ ಶ್ರೀಕೃಷ್ಣ-ಮುಖ್ಯಪ್ರಾಣದೇವರಿಗೆ ಪೂಜೆಯನ್ನು ಸಲ್ಲಿಸುವುದರೊ೦ದಿಗೆ ಪ್ರಥಮ ಬಾರಿಗೆ ಸರ್ವಜ್ಞ ಪೀಠವನ್ನೇರಲಿರುವ ಶ್ರೀ ಶೀರೂರು ಮಠದ 32ನೇ ಯತಿಗಳಾದ ಶ್ರೀವೇದವರ್ಧನ ತೀರ್ಥಶ್ರೀಪಾದರ ಪರ್ಯಾಯ ಮಹೋತ್ಸವಕ್ಕೆ ಭಾನುವಾರ ಡಿ.14ರ೦ದು ಧಾನ್ಯಮುಹೂರ್ತ ಹಾಗೂ ಶಿಖರ ಮುಹೂರ್ತ ಕಾರ್ಯಕ್ರಮವು ಅದ್ದೂರಿಯಿ೦ದ ಸ೦ಪನ್ನ ಗೊ೦ಡಿತು. ಆರ೦ಭದಲ್ಲಿ ಪೀಠದ ದೇವರಿಗೆ ಹಾಗೂ